ಸಾರಾಂಶ
ಜಿಲ್ಲೆಯಲ್ಲಿ ಒಟ್ಟು 22 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ವಸತಿ ಶಾಲೆಗಳಲ್ಲಿ ಸುಮಾರು 1004 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿ, 963 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ವಸತಿ ಶಾಲೆಗಳಲ್ಲಿ 2024ನೇ ಸಾಲಿಗೆ ಶೇ.95.92ರಷ್ಟು ಫಲಿತಾಂಶ ದಾಖಲಾಗಿದೆ.
ದಾವಣಗೆರೆ: ಜಿಲ್ಲೆಯಲ್ಲಿ ಒಟ್ಟು 22 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ವಸತಿ ಶಾಲೆಗಳಲ್ಲಿ ಸುಮಾರು 1004 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿ, 963 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ವಸತಿ ಶಾಲೆಗಳಲ್ಲಿ 2024ನೇ ಸಾಲಿಗೆ ಶೇ.95.92ರಷ್ಟು ಫಲಿತಾಂಶ ದಾಖಲಾಗಿದೆ.
ಶೇ.100 ಫಲಿತಾಂಶ ಶಾಲೆಗಳು:ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂ.ವರ್ಗ) ಮಾದನಬಾವಿ, ಹೊನ್ನಾಳಿ ತಾಲೂಕು, ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂ.ವರ್ಗ) ಮುಗ್ಗಿದರಾಗಿಹಳ್ಳಿ, ಜಗಳೂರು ತಾಲೂಕು, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ (ಪ.ಜಾತಿ) ಎಚ್.ಕಡದಕಟ್ಟೆ, ಹೊನ್ನಾಳಿ ತಾಲೂಕು, ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪ.ವರ್ಗ) ವಡೇರಹಳ್ಳಿ, ದಾವಣಗೆರೆ ತಾಲೂಕು, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ (ಪ.ವರ್ಗ) ಉದ್ದಘಟ್ಟ, ಜಗಳೂರು ತಾಲೂಕು, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ (ಪ.ವರ್ಗ) ಕೊಂಡಜ್ಜಿ, ಹರಿಹರ ತಾಲೂಕು. 600ಕ್ಕೂ ಹೆಚ್ಚು ಅಂಕ ಪಡೆದವರು:
ಎಂ.ಎನ್. ಜೀವಿತ-610, ಪಿ.ಸ್ಫೂರ್ತಿ-608, ಎಚ್.ಬಿ. ಯಶೋಧ-607, ಈ.ರಾಜೇಶ್ವರಿ- 602 ಅಂಕ ಪಡೆದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ ತಿಳಿಸಿದ್ದಾರೆ.