ಸಾರಾಂಶ
ಉಡುಪಿ ಜಿಲ್ಲೆಯ ಸುಮಾರು 15 ವಿಶೇಷ ಶಾಲೆಗಳು ತ್ರೋಬಾಲ್ ಪಂದ್ಯಾಟ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.
ಕನ್ನಡಪ್ರಭ ವಾರ್ತೆ ಕಾರ್ಕಳ
ಇಲ್ಲಿನ ಕುಕ್ಕುಂದೂರಿನ ವಿಜೇತ ವಸತಿಯುತ ವಿಶೇಷ ಶಾಲೆ ಮತ್ತು ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರರ ಸಂಘದ ಆಶ್ರಯದಲ್ಲಿ ಛತ್ರಪತಿ ಫೌಂಡೇಶನ್ ಸಹಯೋಗದಲ್ಲಿ ಜಿಲ್ಲಾಮಟ್ಟದ ತ್ರೋಬಾಲ್ ಪಂದ್ಯಾಟ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಉಡುಪಿ ಜಿಲ್ಲೆಯ ಸುಮಾರು 15 ವಿಶೇಷ ಶಾಲೆಗಳು ತ್ರೋಬಾಲ್ ಪಂದ್ಯಾಟ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.
ಜಿಲ್ಲಾಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಆಶಾ ನಿಲಯ ವಿಶೇಷ ಶಾಲೆ ಉಡುಪಿ ಪ್ರಥಮ ಸ್ಥಾನ, ವಿಜೇತ ವಿಶೇಷ ಶಾಲೆ ಕಾರ್ಕಳ ದ್ವಿತೀಯ ಸ್ಥಾನ, ಮಾನಸ ಪಾಂಬೂರ್ ತೃತೀಯ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಈ ಬಹುಮಾನಗಳ ಪ್ರಾಯೋಜಕತ್ವ ವಹಿಸಿದ್ದ ಮುಂಬೈ ಬಂಟ್ಸ್ ಸಂಘದ ಜೊತೆಕಾರ್ಯದರ್ಶಿ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್, ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ರತ್ನಾ, ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಕಳ ಶಾಖೆಯ ಪ್ರಬಂಧಕ ಸಚಿನ್, ಪೋರ್ಸ್ ಮೋಟಾರ್ಸ್ ಕಾರ್ಕಳದ ಸೇವಾ ವ್ಯವಸ್ಥಾಪಕ ರಂಜಿತ್ ಎಚ್.ಪಿ., ಮಣಿಪಾಲ ಅರ್ಚನಾ ಟ್ರಸ್ಟ್ ಅಧ್ಯಕ್ಷ ಜಯ ವಿಠಲ್, ಪಾಲಕರ ಸಂಘದ ಕಾರ್ಯದರ್ಶಿ ಸಾಧನಾ ಕಿಣಿ, ಅಮ್ಮನ ನೆರವು ಟ್ರಸ್ಟ್ ಸ್ಥಾಪಕಧ್ಯಕ್ಷ ಅವಿನಾಶ್ ಶೆಟ್ಟಿ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ರಾಜ್ಯಾಧ್ಯಕ್ಷೆ ಡಾ.ಕಾಂತಿ ಹರೀಶ್, ಜಿಲ್ಲಾಧ್ಯಕ್ಷ ರವೀಂದ್ರ ಹೆಚ್, ಶ್ರೀ ದುರ್ಗಾ ವಿದ್ಯಾ ಸಂಘ ಅಧ್ಯಕ್ಷರಾದ ಕೆ.ರಾಧಾಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು.
ವಿಜೇತ ವಿಶೇಷ ಶಾಲಾ ಅಧ್ಯಕ್ಷರಾದ ರತ್ನಾಕರ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು. ಡಾ.ಕಾಂತಿ ಹರೀಶ್ ಸ್ವಾಗತಿಸಿದರು. ರವೀಂದ್ರ ಎಚ್. ವಂದಿಸಿದರು. ಗಗನ್ ಶೆಟ್ಟಿ ಕ್ರೀಡಾ ಕೂಟದ ಕಾರ್ಯಕ್ರಮವನ್ನು ನಿರೂಪಿಸಿದರು.