ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಯಶಸ್ವಿ ಪ್ರಜಾಪ್ರಭುತ್ವಕ್ಕೆ ಡಾ.ಅಂಬೇಡ್ಕರ ಕೊಡುಗೆ ಅಪಾರ. ಸ್ವಾತಂತ್ರ್ಯದ ನಂತರ ದೇಶ ಯಾವ ರೀತಿ ಸಾಗಬೇಕು ಎಂಬುದು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಪ್ರಪಂಚದಲ್ಲಿಯೇ ನಮ್ಮದು ಲಿಖಿತ ಹಾಗೂ ದೊಡ್ಡ ಸಂವಿಧಾನ. ಸತ್ಯ, ಶಾಂತಿ, ತ್ಯಾಗ, ಬಲಿದಾನದ ಮೂಲಕ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಹಾಗೂ ಮಹನೀಯರನ್ನು ಸ್ಮರಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ, ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದೇಶದ ಅಭಿವೃದ್ಧಿ, ರಕ್ಷಣೆಯಲ್ಲಿ ರೈತರು, ಸೈನಿಕರ ಸೇವೆ ಅಮೋಘವಾಗಿದ್ದು, ಅವರೆಲ್ಲರನ್ನು ಸ್ಮರಿಸಬೇಕಾಗಿದೆ. ಸಂವಿಧಾನವನ್ನು ನಾವು ಎಲ್ಲಿಯವರಿಗೆ ಗೌರವಿಸುತ್ತೇವೆಯೋ ಅಲ್ಲಿಯವರಿಗೆ ದೇಶ ಭದ್ರವಾಗಿರುತ್ತದೆ. ರಾಷ್ಟ್ರದ ಪ್ರಗತಿಗೆ ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಗಳ ಜನರ ತ್ಯಾಗ ನೆನಪಿಸಿಕೊಳ್ಳಬೇಕು. ಗಡಿಭಾಗ ಇಂಡಿಯಲ್ಲಿಯೂ ಸೈನಿಕರು, ಸಾಹಿತಿಗಳು, ರೈತರು, ಪ್ರಜ್ಞಾವಂತು, ಶರಣರು ಆಗಿ ಹೋಗಿದ್ದಾರೆ. ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ ಹಾಗೂ ಕೃಷಿಯಾಧಾರಿತ ಬದುಕು ಬೆಳವಣಿಗೆ ಆಗಬೇಕಾಗಿದೆ. ಒಂದೂವರೇ ತಿಂಗಳಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸಲಾಗುತ್ತದೆ. ಮುಂಬರುವ ದಿನದಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗಳ ಮೂಲಕ ತಾಲೂಕು ಸಮಗ್ರ ನೀರಾವರಿಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಸಿ ಅಬೀದ್ ಗದ್ಯಾಳ, ಜ.26 ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಪೂರ್ಣ ಸ್ವರಾಜ್ಯ ಸಿಕ್ಕದಿನ. ಭಾರತ ವೈವಿದ್ಯಮಯ ದೇಶವಿದ್ದರೂ ನಾವೆಲ್ಲ ಒಂದೇ ಮನೋಭಾವದಿಂದ ದೇಶ ಕಟ್ಟಲು ಸಂವಿಧಾನ ಪೂರಕವಾಗಿದೆ. ಎಲ್ಲರೂ ದೇಶ, ನಾಡ ಪ್ರೇಮ ಬೆಳೆಸಿಕೊಳ್ಳಬೇಕು ಎಂದರು.ಡಿವೈಎಸ್ಪಿ ಜಗದೀಶ ಎಚ್.ಎಸ್, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ತಾಪಂ ಇಒ ನಂದೀಪ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಬಿಇಒ ಟಿ.ಎಸ್.ಆಲಗೂರ ವೇದಿಕೆ ಮೇಲೆ ಇದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೂರ, ಎಇಇ ದಯಾನಂದ ಮಠ, ಎಸ್.ಆರ್.ರುದ್ರವಾಡಿ, ಕೃಷಿ ಎಡಿ ಮಹಾದೇವಪ್ಪ ಏವೂರ, ತೋಟಗಾರಿಕೆ ಎಡಿ ಎಚ್.ಎಸ್.ಪಾಟೀಲ, ರಾಜು ಮೂಗಿ, ಕ್ರೀಡಾಧಿಕಾರಿ ಚಂದ್ರಶೇಖರ ವಾಲಿಕಾರ, ಸಿಡಿಪಿಒ ಗೀತಾ ಗುತ್ತರಗಿಮಠ, ಮೇಲ್ವಿಚಾರಕಿ ಪುತಳಾಬಾಯಿ ಭಜಂತ್ರಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೊಮಿನ, ಜಟ್ಟೆಪ್ಪ ರವಳಿ, ಭೀಮಣ್ಣ ಕವಲಗಿ, ಮಹೇಶ ಹೊನ್ನಬಿಂದಗಿ, ಸತೀಶ ಕುಂಬಾರ, ಕಂದಾಯ ನಿರೀಕ್ಷಕ ಗುನ್ನಾಪೂರ, ಶಿವು ಬಡಿಗೇರ, ಸಂಜು ರಾಠೋಡ ಮೊದಲಾದವರು ಪಾಲ್ಗೊಂಡಿದ್ದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಧಕರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಬಿ.ಎಸ್.ಕಡಕಬಾವಿ ಸ್ವಾಗತಿಸಿದರು. ಸಿಆರ್‌ಸಿ ಬಸವರಾಜ ಗೊರನಾಳ ನಿರೂಪಿಸಿದರು.