ನೇಹಾ ಹತ್ಯೆಗೆ ಜಿಲ್ಲಾದ್ಯಂತ ಖಂಡನೆ

| Published : Apr 21 2024, 02:27 AM IST

ಸಾರಾಂಶ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.43 ರಷ್ಟು ಹೆಚ್ಚಿವೆ. ಕರ್ನಾಟಕ ಬಿಹಾರ ಆಗುತ್ತಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹುಬ್ಬಳ್ಳಿಯಲ್ಲಿ ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ. ಕೊಲೆ ಆರೋಪಿಯನ್ನು ಗಲ್ಲಿಗೇರಿಸುವಂತ ಕಠಿಣ ಶಿಕ್ಷೆಯಾಗಬೇಕೆಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಶುಕ್ರವಾರ ಸಂಜೆ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಗ್ರಾಮೀಣ ಬಾಗದ ಅಚನೂರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.43 ರಷ್ಟು ಹೆಚ್ಚಿವೆ. ಕರ್ನಾಟಕ ಬಿಹಾರ ಆಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆಕ್ರೋಶ ಹೊರಹಾಕಿದರು.

ಬೇರೆ ರಾಜ್ಯದಲ್ಲಿ ಹೆಣ್ಣುಮಕ್ಕಳನ್ನು ಹತ್ತಾರು ಬಾರಿ ಚುಚ್ಚಿ ಕೊಲ್ಲುವುದನ್ನು ಕೇಳಿದ್ದೇವು. ಆದರೆ, ಇದೇ ರೀತಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿರುವು ಅತ್ಯಂತ ಆಘಾತ. ಸರ್ಕಾರ ಎಸ್ಐಟಿಯಿಂದ ತನಿಖೆ ನಡೆಸಿ ಆರೋಪಿಗೆ ಗಲ್ಲಿಗೇರಿಸುವಂತ ಕಠಿಣ ಶಿಕ್ಷೆ ನೀಡಬೇಕು. ಲವ್ ಜಿಹಾದ್ ಎಂಬುದು ಮುಗ್ದ ಹಿಂದೂ ಹೆಣ್ಮಕ್ಕಳನ್ನು ವ್ಯವಸ್ಥಿತ ಜಾಲಕ್ಕೆ ಸಿಲುಕಿಸುವ ಭಯಾನಕ ವೂಹವಾಗಿದೆ. ಇದನ್ನು ಮಟ್ಟ ಹಾಕಬೇಕಿದೆ ಎಂದು ಆಗ್ರಹಿಸಿದರು.

ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಸುಭದ್ರವಾಗಿದೆ. ದೇಶದ ರಕ್ಷಣೆಗಾಗಿ ಮೋದಿ ದೇಶಕ್ಕೆ ಇಂದು ಅನಿವಾರ್ಯವಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ದೇಶಕ್ಕೆ ನುಸುಳುತ್ತಿದ್ದ ಉಗ್ರರರನ್ನು ಹೆಡೆಮುರಿ ಕಟ್ಟಲಾಗಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370 ನೇ ವಿಧಿ ರದ್ದು ಪಡಿಸಲಾಗಿದೆ. ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಇಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರುವುದು ಪ್ರಧಾನಿ ನರೇಂದ್ರ ಮೋದಿಗೆ ಮಾತ್ರ ಇದೆ. ಆದ್ದರಿಂದ ಮತ್ತೊಮ್ಮೆ ಕೆಂದ್ರದಲ್ಲಿ ಮೋದಿಯವನ್ನು ಪ್ರಧಾನಿ ಮಾಡೋಣ. ನಮ್ಮ ರಾಷ್ಟ್ರ, ನಮ್ಮ ಹಿಂದುತ್ವವನ್ನು ಕಾಪಾಡಿಕೊಳ್ಳೊಣ ಎಂದು ಕರೆ ನೀಡಿದರು.

ಸಭೆಯಲ್ಲಿ ಪ್ರಭುಸ್ವಾಮಿ ಸರಗಣಾಚಾರಿ, ಸಂಗಣ್ಣ ಕಲಾದಗಿ, ಕಲ್ಮೇಶ ಗೌಡರ, ರಂಗಪ್ಪ ದಿಡ್ಡಿಮನಿ, ಸಿದ್ದಪ್ಪ ಹೂಗಾರ, ರಾಚಪ್ಪ ಕುಂಬಾರ, ಶಂಕ್ರಯ್ಯ ಹಿರೇಮಠ, ಚೇತನ ಕುರಿ, ಬಸವರಾಜ ಪಾಟೀಲ, ಉಮೇಶ ರೂಗಿ, ಶೇಖಪ್ಪ ಗಡೆದ, ಪಾರ್ವತಿ ಹುಗ್ಗಿ, ಮಾದೇವಪ್ಪ ಮಾದರ, ವಾಸು ಲಮಾಣಿ, ಸಂತೋಷ ಲಮಾಣಿ, ರಾಜು ಲಮಾಣಿ, ಮಲ್ಲಪ್ಪ ಕುಂಬಾರ, ಆರ್‌,ಎಂ ಕಮತಗಿ, ಮಲ್ಲಪ್ಪ ಜಂಬಲದಿನ್ನಿ, ಮುದಕನ್ನ ಒಡೆಯರ, ಸಂಗಮೇಶ ಕೆಂಜೋಡಿ, ದುಂಡೇಶ ಕೊಣ್ಣುರ, ಮುದಕಣ್ಣ ಕೊಲ್ಹಾರ, ಗ್ಯಾನಪ್ಪ ಚಲುವಾದಿ, ಜಗದೀಶ ಸಜ್ಜನ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಅಚನೂರ, ಸಂಗಾಪುರ, ಬಿಲ್ ಕೇರೂರ, ತಿಮ್ಮಾಪುರ, ಬಸವನಗರ ಎಲ್.ಟಿ. ರಾಂಪೂರ, ಬೋಡನಾಯಕದಿನ್ನಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಲಾಯಿತು.

ಕೋಟ್...

ಬೇರೆ ರಾಜ್ಯದಲ್ಲಿ ಹೆಣ್ಣುಮಕ್ಕಳನ್ನು ಹತ್ತಾರು ಬಾರಿ ಚುಚ್ಚಿ ಕೊಲ್ಲುವುದನ್ನು ಕೇಳಿದ್ದೇವು. ಆದರೆ, ಇದೇ ರೀತಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿರುವು ಅತ್ಯಂತ ಆಘಾತ. ಸರ್ಕಾರ ಎಸ್ಐಟಿಯಿಂದ ತನಿಖೆ ನಡೆಸಿ ಆರೋಪಿಗೆ ಗಲ್ಲಿಗೇರಿಸುವಂತ ಕಠಿಣ ಶಿಕ್ಷೆ ನೀಡಬೇಕು. ಲವ್ ಜಿಹಾದ್ ಎಂಬುದು ಮುಗ್ದ ಹಿಂದೂ ಹೆಣ್ಮಕ್ಕಳನ್ನು ವ್ಯವಸ್ಥಿತ ಜಾಲಕ್ಕೆ ಸಿಲುಕಿಸುವ ಭಯಾನಕ ವೂಹವಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.43 ರಷ್ಟು ಹೆಚ್ಚಿವೆ. ಕರ್ನಾಟಕ ಬಿಹಾರ ಆಗುತ್ತಿದೆ.

ಡಾ.ವೀರಣ್ಣ ಚರಂತಿಮಠ. ಮಾಜಿ ಶಾಸಕ