ಸಾರಾಂಶ
ಅರಸೀಕೆರೆ: ಹಾಸನ ಜಿಲ್ಲಾ ವಿಪ್ರ ಪಾಕತಜ್ಞರ ಕ್ಷೇಮಾಭಿವೃದ್ಧಿ ಸಂಘದ 21ನೇ ವಾರ್ಷಿಕೋತ್ಸವ ಸಮಾರಂಭವು ಇದೇ 22ರಂದು ಅರಸೀಕೆರೆ ನಗರದಲ್ಲಿನ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಅರಸೀಕೆರೆ ತಾಲೂಕು ವಿಪ್ರಪಾಕ ತಜ್ಞರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ತಿಳಿಸಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಸಮಾರಂಭ ಅರಸೀಕೆರೆಯಲ್ಲಿ ನಡೆಯುತ್ತಿರುವುದು ನಮ್ಮ ಸಂಘಕ್ಕೆ ಹೆಚ್ಚಿನ ಸಂತೋಷವನ್ನು ಉಂಟು ಮಾಡಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್ ರಘುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಮ್ಮ ಜಿಲ್ಲಾ ಸಂಘದ ಅಧ್ಯಕ್ಷರಾದ ಪಿ.ಎಸ್ ವೆಂಕಟೇಶ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು. ಸಮಾರಂಭದಲ್ಲಿ ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಹೆಚ್ಎಸ್ ಮಂಜುನಾಥಮೂರ್ತಿ, ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಗೌರವ ಅಧ್ಯಕ್ಷ ಕೆ ರಮೇಶ್, ಅಧ್ಯಕ್ಷ ಎಸ್ ರವಿಕುಮಾರ್, ಕಾರ್ಯದರ್ಶಿ ಕೆಆರ್ ಸುಬ್ರಹ್ಮಣ್ಯ, ಗಾಯಿತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ ಹರೀಶ್, ಕಾರ್ಯದರ್ಶಿ ಕೆ ಮಂಜುನಾಥ್ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಚೈತನ್ಯ ಕಶ್ಯಪ್, ವಿಪ್ರನೌಕರ ಸಂಘದ ಅಧ್ಯಕ್ಷ ಹೆಚ್ ಎನ್ ಮೋಹನ್, ಸೀತಾ ಮಹಿಳಾ ಸಂಘದ ಅಧ್ಯಕ್ಷ ಪ್ರೇಮ ಹಿರಿಯಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಸಮಾರಂಭಕ್ಕೆ ಜಿಲ್ಲೆಯ ಎಲ್ಲಾ ವಿಪ್ರ ಪಾಕತಜ್ಞರು ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕಾಗಿ ಅವರು ಮನವಿ ಮಾಡಿದರು.
ಪಾಕತಜ್ಞರಾದ ಸತ್ಯನಾರಾಯಣ, ವೆಂಕಟೇಶ್, ನಾಗಣ್ಣ, ನಾಗೇಶ್ ಉಪಸ್ಥಿತರಿದ್ದರು.