ಸಾರಾಂಶ
ರಾಮನಗರ: ಹೆಜ್ಜಾಲ - ಕೆಂಗೇರಿ ನಡುವೆ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ವಿಳಂಬವಾದ ಕಾರಣ ಬುಧವಾರ ಬೆಂಗಳೂರು - ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಿಲ್ದಾಣದಲ್ಲಿ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಹೆಜ್ಜಾಲ ಹಾಗೂ ಕೆಂಗೇರಿ ನಡುವೆ ಮೇಜರ್ ಅಂಡರ್ ಪಾಸ್ ನಿರ್ಮಾಣ ಸಂಬಂಧ ಮಂಗಳವಾರ ರಾತ್ರಿ ಬೆಂಗಳೂರು - ಮೈಸೂರು ಮಾರ್ಗದಲ್ಲಿ ರೈಲು ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಈ ಕಾಮಗಾರಿ ಹಿನ್ನೆಲೆಯಲ್ಲಿ ಕಾವೇರಿ, ತಿರುಪತಿ ಹಾಗೂ ಮಾಲ್ಗುಡಿ ರೈಲು ಸಂಚಾರವನ್ನೇ ಬಂದ್ ಮಾಡಲಾಗಿತ್ತು. ಮಂಗಳವಾರ ರಾತ್ರಿ ವಂದೇ ಭಾರತ್ ಹಾಗೂ ತಾಳಗುಪ್ಪ ರೈಲು ಹೊರಟ ನಂತರ ರಾತ್ರಿ 10ಗಂಟೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು.ಸಿಮೆಂಟ್ ಬ್ಲಾಕ್ ಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ಬೆಳಿಗ್ಗೆ 7ರ ಹೊತ್ತಿಗೆ ಮುಗಿಯಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಕೆಲಸ ವಿಳಂಬವಾಯಿತು. ಹಾಗಾಗಿ, ರೈಲುಗಳ ಸಂಚಾರ ವಿಳಂಬವಾಯಿತು. ಇದರಿಂದ ಬುಧವಾರ ಬೆಳಗ್ಗೆ 10ಗಂಟೆಯ ತನಕ ರೈಲು ಮಾರ್ಗ ಸಂಚಾರಕ್ಕೆ ಮುಕ್ತವಾಗಿರಲಿಲ್ಲ.
ಈ ಮಾರ್ಗದಲ್ಲಿ ಸಾವಿರಾರು ಮಂದಿ ಉದ್ಯೋಗಿಗಳು ನಿತ್ಯ ಸಂಚಾರ ನಡೆಸುತ್ತಾರೆ. ಅದರಲ್ಲೂ ಚನ್ನಪಟ್ಟಣ ಮತ್ತು ರಾಮನಗರ ರೈಲು ನಿಲ್ದಾಣದಲ್ಲಿ ನಿತ್ಯಾ ಬೆಳಗ್ಗೆ ವೇಳೆ 3ಸಾವಿರಕ್ಕೂ ಅಧಿಕ ಮಂದಿ ಪ್ರಯಾಣ ಬೆಳೆಸುತ್ತಾರೆ. ರೈಲ್ವೆ ಅಂಡರ್ ಪಾಸ್ ನಿರ್ಮಾಣದ ಹಿನ್ನೆಲೆಯಲ್ಲಿ ಬೆಳಗ್ಗೆ ಒಟ್ಟು 6 ರೈಲುಗಳು ಸಂಚಾರ ಅರ್ಧಕ್ಕೆ ನಿಂತಿತ್ತು. ಬೆಳಿಗ್ಗೆ 7.30ರಿಂದ 9 ಗಂಟೆವರೆಗೆ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು. ಇದರಿಂದಾಗಿ ರೈಲುಗಳು ಚನ್ನಪಟ್ಟಣ, ರಾಮನಗರ ಹಾಗೂ ಬಿಡದಿ ನಿಲ್ದಾಣದಲ್ಲೇ ಬೀಡು ಬಿಟ್ಟವು. ಇನ್ನೇನು ಕೆಲ ಹೊತ್ತಿನಲ್ಲೇ ರೈಲು ಹೊರಡಲಿದೆ ಎಂದುಕೊಂಡ ಪ್ರಯಾಣಿಕರು ಕಾದು ಹೈರಾಣಾದರು. ಕೊನೆಗೆ ವಿಧಿ ಇಲ್ಲದೆ ರೈನಿನಿಂದಿಳಿದು ಬಸ್ ಸೇರಿದಂತೆ ಇತರ ವಾಹನಗಳನ್ನು ಏರಿ ಹೊರಟರು.ಇನ್ನು ಈ ಮಾರ್ಗದಲ್ಲಿ ರೈಲ್ವೆ ಕಾಮಗಾರಿ ನಡೆಸುವ ಕುರಿತು ಇಲಾಖೆಯು ಪ್ರಯಾಣಿಕರಿಗೆ ಮಾಹಿತಿ ನೀಡದ ಪರಿಣಾಮ ಸಾಕಷ್ಟು ತಲೆಬಿಸಿಗೆಕಾರಣವಾಗಿತ್ತು. ಇನ್ನು ಕೆಲವರು ಉದ್ಯೋಗಕ್ಕೆ ತೆರಳಲು ಬಸ್ ಗಳನ್ನು ಅವಲಂಭಿಸಿದರು. ಹಾಗಾಗಿ ಎಂದಿಗಿಂತ ಹೆಚ್ಚಿನ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಂಡುಬಂದರು.
ಕೋಟ್ ...............ರೈಲ್ವೆ ಇಲಾಖೆ ಮಾಹಿತಿನೀಡದೆ ಅಂಡರ್ ಪಾಸ್ ಕಾಮಗಾರಿ ನಡೆಸುತ್ತಿದೆ. ಪ್ರಯಾಣಿಕರಿಗೂ ಸರಿಯಾದ ಮಾಹಿತಿ ಇಲ್ಲದೆ ತೊಂದರೆ ಆಯಿತು. ಬಿಡದಿ ತನಕ ಬೈಕ್ನಲ್ಲಿ ತೆರಳಿ. ಅಲ್ಲಿಂದ ಬಿಎಂಟಿಸಿ ಬಸ್ನಲ್ಲಿ ಕಚೇರಿಗೆ ತೆರಳಬೇಕಾಯಿತು.
-ರಮೇಶ್ , ರೈಲು ಪ್ರಯಾಣಿಕ ರಾಮನಗರ10ಕೆಆರ್ ಎಂಎನ್ 2,3.ಜೆಪಿಜಿ
ರಾಮನಗರ ರೈಲ್ವೆ ನಿಲ್ದಾಣದಲ್ಲಿ ಅಂಡರ್ಪಾಸ್ ಕಾಮಗಾರಿ ವಿಳಂಬಹಿನ್ನೆಲೆಯಲ್ಲಿ ನಿಂತಿದ್ದ ರೈಲು.