ಕುಕನೂರು ತಾಲೂಕಿನ ನಾನಾ ಕಡೆ ದೀಪಾವಳಿ ಹಬ್ಬದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಕುಕನೂರು ಪೊಲೀಸ್ ಠಾಣೆಯ ಪಿಎಸ್‌ಐ ಮೌನೇಶ ರಾಠೋಡ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು, ನಾನಾ ಕಡೆ ಜೂಜಾಟದಲ್ಲಿ ತೊಡಗಿದ್ದ ಒಟ್ಟು 42 ಜನರ ಮೇಲ್ ಕೇಸ್ ದಾಖಲಿಸಿ ಒಟ್ಟು ಅವರಿಂದ 4,38,970 ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಕುಕನೂರು: ತಾಲೂಕಿನ ನಾನಾ ಕಡೆ ದೀಪಾವಳಿ ಹಬ್ಬದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಕುಕನೂರು ಪೊಲೀಸ್ ಠಾಣೆಯ ಪಿಎಸ್‌ಐ ಮೌನೇಶ ರಾಠೋಡ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು, ನಾನಾ ಕಡೆ ಜೂಜಾಟದಲ್ಲಿ ತೊಡಗಿದ್ದ ಒಟ್ಟು 42 ಜನರ ಮೇಲ್ ಕೇಸ್ ದಾಖಲಿಸಿ ಒಟ್ಟು ಅವರಿಂದ 4,38,970 ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಕಕ್ಕಿಹಳ್ಳಿಯ ದುರ್ಗಮನ ಗುಡಿ ಹತ್ತಿರ ₹5500 ಜಪ್ತಿ: ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ತಾಂಡಾದ ದುರ್ಗಮನ ಗುಡಿ ಹತ್ತಿರ ನ. 8ರಂದು ರಾತ್ರಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ಮೂವರ ಮೇಲೆ ಕೇಸ್ ದಾಖಲಿಸಿ ಅವರಿಂದ ₹5500 ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

14 ಜನರ ಮೇಲೆ ಕೇಸ್: ನ. 8ರಂದು ರಾತ್ರಿ ಬಿ.ವಿ. ಶೆಟ್ಟರ್ ಕಲ್ಯಾಣ ಮಂಟಪದ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 14 ಜನರ ಮೇಲೆ ಕೇಸ್ ದಾಖಲಿಸಿ ಅವರಿಂದ ₹2,04,900 ಜಪ್ತಿ ಮಾಡಿಕೊಂಡಿದ್ದಾರೆ.

6 ಜನರ ಮೇಲೆ ಪ್ರಕರಣ: ಪಟ್ಟಣದ ಜವಳ ಕಾಲನಿಯ ರಸ್ತೆ ಗವಿಶ್ರೀ ನಗರದ ಬಳಿ ನ. 9ರಂದು ಮಧ್ಯಾಹ್ನ 2 ಗಂಟೆಗೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರು ಜನರನ್ನು ಪೊಲೀಸರು ಬಂಧಿಸಿ, ಅವರಿಂದ ₹84,500 ಜಪ್ತಿ ಮಾಡಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

4 ಜನರ ಮೇಲೆ ಪ್ರಕರಣ ದಾಖಲು: ಪಟ್ಟಣದ ಎಸ್‌ಬಿಐ ಬ್ಯಾಂಕಿನ ಮುಂದೆ ಹಾಲಿನ ಡೈರಿ ಬಳಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ನಾಲ್ವರ ಪೊಲೀಸರು ನ. 9ರಂದು ಬೆಳಗ್ಗೆ 10.45ರ ಸುಮಾರಿಗೆ ದಾಳಿ ನಡೆಸಿ, ಅವರಿಂದ ₹36970 ಹಣ ಜಪ್ತಿ ಮಾಡಿಕೊಂಡು ಆಟದಲ್ಲಿ ತೊಡಗಿದ್ದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಇಟಗಿಯಲ್ಲಿ 5 ಜನರ ಮೇಲೆ ಕೇಸ್: ತಾಲೂಕಿನ ಇಟಗಿ ಗ್ರಾಮದಲ್ಲಿ ನ. 10ರಂದು ಬೆಳಗ್ಗೆ 7 ಗಂಟೆಗೆ ಗ್ರಾಮದ ಬಸ್ ನಿಲ್ದಾಣದ ಸರ್ಕಲ್ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಐವರ ಮೇಲೆ ದಾಳಿ ಮಾಡಿ ಪೊಲೀಸರು ₹67,500 ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಬೆಣಕಲ್ಲಿನಲ್ಲಿ 5 ಜನರ ಮೇಲೆ ಕೇಸ್: ತಾಲೂಕಿನ ಬೆಣಕಲ್ಲ ಗ್ರಾಮದಲ್ಲಿ ನ. 10ರಂದು 11 ಗಂಟೆ ಸುಮಾರಿಗೆ ಗ್ರಾಮದ ಭಗೀರಥ ಕ್ರಾಸ್ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಐವರ ಮೇಲೆ ದಾಳಿ ಮಾಡಿ ಪೊಲೀಸರು ₹23,700 ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಮಸಬಹಂಚಿನಾಳ 3 ಜನರ ಮೇಲೆ ಕೇಸ್: ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ನ. 10ರಂದು ಮಾರುತಿ ದೇವಸ್ಥಾನದ ಹತ್ತಿರ ಮಧ್ಯಾಹ್ನ 1.30 ಗಂಟೆಗೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಮೂವರ ಮೇಲೆ ದಾಳಿ ಮಾಡಿ ಪೊಲೀಸರು ₹13,700 ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ವೀರಾಪುರದಲ್ಲಿ ಮೂವರ ಮೇಲೆ ಕೇಸ್: ತಾಲೂಕಿನ ವೀರಾಪುರ ಗ್ರಾಮದಲ್ಲಿ ನ. 10ರಂದು 4 ಗಂಟೆಗೆ ಗ್ರಾಮದ ದುರ್ಗಮ್ಮ ದೇವಸ್ಥಾನ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ಅವರಿಂದ ಪೊಲೀಸರು ₹2200 ಜಪ್ತಿ ಮಾಡಿಕೊಂಡಿದ್ದಾರೆ.