ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಹಾಗೂ ವಿಸರ್ಜಿಸುವ ಸಂದರ್ಭದಲ್ಲಿ ಡಿಜೆ ನಿಷೇಧ

| Published : Aug 26 2024, 01:44 AM IST / Updated: Aug 26 2024, 05:14 AM IST

ಸಾರಾಂಶ

 ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಹಾಗೂ ವಿಸರ್ಜಿಸುವ ಸಂದರ್ಭದಲ್ಲಿ ಡಿಜೆ ಸೌಂಡ್‌ ನಿಷೇಧಿಸಲಾಗಿದ್ದು, ಸಂಜೆ 6 ಗಂಟೆಯೊಳಗೆ ಗಣೇಶನನ್ನು ವಿಸರ್ಜನೆ ಮಾಡಬೇಕು  ಎಂದು ದಾಬಸ್‌ಪೇಟೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವಿಜಯಕುಮಾರಿ ಹೇಳಿದರು.

 ದಾಬಸ್‌ಪೇಟೆ :  ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಹಾಗೂ ವಿಸರ್ಜಿಸುವ ಸಂದರ್ಭದಲ್ಲಿ ಡಿಜೆ ಸೌಂಡ್‌ ನಿಷೇಧಿಸಲಾಗಿದ್ದು, ಸಂಜೆ 6 ಗಂಟೆಯೊಳಗೆ ಗಣೇಶನನ್ನು ವಿಸರ್ಜನೆ ಮಾಡಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ದಾಬಸ್‌ಪೇಟೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವಿಜಯಕುಮಾರಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಗಣೇಶ ಚತುರ್ಥಿಯ ಪ್ರತಿಷ್ಠಾಪನೆ ಕುರಿತು ಪೊಲೀಸ್ ಇಲಾಖೆಯಲ್ಲಿನ ಸೂಚನೆಗಳನ್ನು ತಿಳಿಸಿ ಅವರು ಮಾತನಾಡಿದರು.

ಸೋಂಪುರ ಹೋಬಳಿಯಾದ್ಯಂತ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಪೊಲೀಸ್ ಇಲಾಖೆ, ಕೆಇಬಿ ಹಾಗೂ ಗ್ರಾ.ಪಂ. ಅನುಮತಿ ಪಡೆದು ನಿಯಮಾನುಸಾರ ನಡೆದುಕೊಳ್ಳಬೇಕು. ಸೆ.7 ರಂದು ಗಣೇಶ ಹಬ್ಬಇರುವುದರಿಂದ ಶಾಂತಿಯುತವಾಗಿ ಹಬ್ಬವನ್ನು ತಮ್ಮ ಮನೆ ಹಾಗೂ ಗ್ರಾಮಗಳಲ್ಲಿ ಆಚರಿಸಬೇಕು. ಗಣೇಶ ಪ್ರತಿಷ್ಠಾಪನೆ ಮಾಡಬೇಕಾದರೆ ಹಲವು ಸೂಚನೆ ಹಾಗೂ ಮಾರ್ಗದರ್ಶನಗಳನ್ನು ಪೊಲೀಸ್ ಇಲಾಖೆಯಿಂದ ಹೊರಡಿಸಲಾಗಿದ್ದು. ಆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಅನಿವಾರ್ಯ ಎಂದರು.

ಸಾರ್ವಜನಿಕ ಸ್ಥಳಗಳಾದ ಶಾಲಾ ಕಾಲೇಜು, ಬಸ್ ನಿಲ್ದಾಣ, ಆಸ್ಪತ್ರೆ ಆವರಣದಲ್ಲಿ ಗಣೇಶ ಕೂರಿಸಬಾರದು. ಸಂಘಟಕರು ಸೂಕ್ತ ಜಾಗವನ್ನು ಗುರುತಿಸಿ ಅಲ್ಲಿಯೇ ಕೂರಿಸಬೇಕು. ಗಣೇಶ ಪ್ರತಿಷ್ಠಾಪನೆಯ ಪೂರ್ಣ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಬೇಕು ಗಣೇಶ ಪ್ರತಿಷ್ಠಾಪನೆಗೆ ಆಯೋಜಕರು ಸೇರಿದಂತೆ ಯಾರೂ ಬಲವಂತವಾಗಿ ಸಾರ್ವಜನಿಕರ ಬಳಿ ಹಣ ನೀಡುವಂತೆ ಒತ್ತಾಯಿಸಬಾರದು. ಸಂಚಾರತಿಳಿಸಿದರುಪೋಟೋ 11: ದಾಬಸ್‌ಪೇಟೆ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ಗಣೇಶ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ಸಬ್‌ಇಇನ್ಸ್‌ಪೆಕ್ಟರ್ ವಿಜಯಕುಮಾರಿ ಮಾತನಾಡಿದರು.