ಸಾರಾಂಶ
ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಬುಧವಾರ ಸಂಜೆ ಬೆಸ್ಕಾಂ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿ.ಜೆ. ಸೌಂಡ್ ಹಾಕಿಕೊಂಡು ಬರುವಾಗ ಬಸವಾಪಟ್ಟಣ ಪೊಲೀಸರು ಮೆರವಣಿಗೆ ತಡೆದು ಡಿ.ಜೆ. ಸೌಂಡ್ ಸಿಸ್ಟಂ ವಶಪಡಿಕ್ಕೆ ಪಡೆದರು. ಪೊಲೀಸರ ಕ್ರಮ ಖಂಡಿಸಿ ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಜೆ.ಸಚಿನ್ ನೇತೃತ್ವದಲ್ಲಿ ಯುವಕರು ಬಸವಾಪಟ್ಟಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಚನ್ನಗಿರಿ: ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಬುಧವಾರ ಸಂಜೆ ಬೆಸ್ಕಾಂ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿ.ಜೆ. ಸೌಂಡ್ ಹಾಕಿಕೊಂಡು ಬರುವಾಗ ಬಸವಾಪಟ್ಟಣ ಪೊಲೀಸರು ಮೆರವಣಿಗೆ ತಡೆದು ಡಿ.ಜೆ. ಸೌಂಡ್ ಸಿಸ್ಟಂ ವಶಪಡಿಕ್ಕೆ ಪಡೆದರು. ಪೊಲೀಸರ ಕ್ರಮ ಖಂಡಿಸಿ ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಜೆ.ಸಚಿನ್ ನೇತೃತ್ವದಲ್ಲಿ ಯುವಕರು ಬಸವಾಪಟ್ಟಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಬೆಸ್ಕಾಂ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ 3 ಬಾಕ್ಸ್‌ನ ಡಿ.ಜೆ. ಹಾಕಿಕೊಂಡು ಬರುವಾಗ ಪೊಲೀಸರು ಮೆರವಣಿಗೆ ತಡೆದಿದ್ದಾರೆ. ಅಲ್ಲದೇ, ಡಿ.ಜೆ. ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಗ್ರಾಮದ ಯುವಕರನ್ನು ಭಯಪಡಿಸಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಲವಾರು ವರ್ಷಗಳಿಂದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿ.ಜೆ. ಸೌಂಡ್ಸ್ ಬಳಸಿ, ಅದ್ಧೂರಿಯಾಗಿ ಮೆರವಣಿಗೆ ನಡೆಸುತ್ತಿದ್ದೆವು. ಯಾವುದೇ ಗದ್ದಲ- ಗಲಾಟೆಗಳಿಗೆ ಅವಕಾಶ ನೀಡದಂತೆ ಮೆರವಣಿಗೆ ಶಾಂತಿಯಿಂದ ಮಾಡುತ್ತಿದ್ದೆವು. ಈ ವರ್ಷ ಏಕೆ ಹೊಸ ಕಾನೂನು ಎಂದು ಸಚಿನ್ ಪೊಲೀಸರನ್ನು ಪ್ರಶ್ನಿಸಿದರು.
ಆಗ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಇಮ್ತಿಯಾಜ್ ಇಲಾಖೆಯ ಮತ್ತು ಸರ್ಕಾರದ ಆದೇಶದಂತೆ ಡಿ.ಜೆ. ಸೌಂಡ್ ಬಳಸಿ, ಮೆರವಣಿಗೆ ಮಾಡುವಂತಿಲ್ಲ. ಸರ್ಕಾರದ ಆದೇಶ ಪಾಲಿಸುವುದು ನಮ್ಮಗಳ ಕರ್ತವ್ಯ ಎಂದು ತಿಳಿಸಿದ್ದಾರೆ. ಆದರೂ ಕಣಿವೆಬಿಳಚಿ ಜಾಧವ್ ದರ್ಶನ್, ಮಾರುತಿ, ಯೋಗೇಶ್, ರಾಕೇಶ್ ಸೇರಿದಂತೆ ಗ್ರಾಮದ ಯುವಭಕ್ತರು ಪ್ರತಿಭಟನೆ ಮುಂದುವರಿಸಿದರು. ಬಳಿಕ ಗ್ರಾಮದ ಮುಖಂಡ ಬಿ.ಜಿ. ನಾಗರಾಜ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.- - -
-29ಕೆಸಿಎನ್‌ಜಿ2.ಜೆಪಿಜಿ: