ಹಾವೇರಿ ನಗರದ ಹುಕ್ಕೇರಿಮಠಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬುಧವಾರ ಭೇಟಿ ನೀಡಿ ಲಿಂ. ಶಿವಬಸವ ಸ್ವಾಮೀಜಿ ಹಾಗೂ ಲಿಂ. ಶಿವಲಿಂಗ ಸ್ವಾಮೀಜಿ ಅವರ ಕರ್ತೃ ಗದ್ದುಗೆ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.

ಹಾವೇರಿ: ನಗರದ ಹುಕ್ಕೇರಿಮಠಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬುಧವಾರ ಭೇಟಿ ನೀಡಿ ಲಿಂ. ಶಿವಬಸವ ಸ್ವಾಮೀಜಿ ಹಾಗೂ ಲಿಂ. ಶಿವಲಿಂಗ ಸ್ವಾಮೀಜಿ ಅವರ ಕರ್ತೃ ಗದ್ದುಗೆ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಠದ ಸದಾಶಿವ ಸ್ವಾಮೀಜಿ ಅವರ ದರ್ಶನ ಪಡೆದ ಡಿಸಿಎಂ ಡಿ.ಕೆ. ಶಿವಕುಮಾರ, ಶ್ರೀಗಳ ಯೋಗಕ್ಷೇಮ ವಿಚಾರಿಸಿದರು.

ಈ ವೇಳೆ ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಹುಕ್ಕೇರಿಮಠ ಜಾತ್ರಾಮಹೋತ್ಸವ ಐತಿಹಾಸಿಕ ಕಾರ್ಯಕ್ರಮದ ಎಲ್ಲ ವಿಡಿಯೋ ಚಿತ್ರೀಕರಣವನ್ನು ಸದಾಶಿವ ಸ್ವಾಮೀಜಿ ತೋರಿಸಿದಾಗ, ವಿಡಿಯೋ ವೀಕ್ಷಣೆ ಮಾಡಿದರು. ನಾನು ಕೂಡ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಬರಬೇಕಿತ್ತು, ಕಾರಣಾಂತರಗಳಿಂದ ಬರಲಿಕ್ಕೆ ಆಗಲಿಲ್ಲ. ದುಶ್ಚಟಗಳ ವ್ಯಸನಮುಕ್ತ ಅಭಿಯಾನ, ಮಹಿಳೆಯರಿಂದ ಬಸವ ಬುತ್ತಿ ಮೆರವಣಿಗೆ, 51 ಸಾವಿರ ಜನರಿಂದ ವಚನ ವಂದನ, ಗುರುವಂದನಾ ಹೀಗೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿರುವ ಬಗ್ಗೆ ಮಾಹಿತಿ ತಿಳಿದುಕೊಂಡೆ. ಇಂತಹದ್ದೊಂದು ಅಭೂತಪೂರ್ವ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ ಕಾರ್ಯ ಎಂದರು.

ಆನಂತರ ಸದಾಶಿವ ಮಹಾಸ್ವಾಮೀಜಿ ಅವರು ಡಿ.ಕೆ. ಶಿವಕುಮಾರ ಅವರಿಗೆ ಆಶೀರ್ವಾದದ ಶ್ರೀರಕ್ಷೆ ನೀಡಿ ಸನ್ಮಾನಿಸಿದರು. ಶಾಸಕರಾದ ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಆನಂದಸ್ವಾಮಿ ಗಡ್ಡದೇವರಮಠ, ರಾಜಣ್ಣ ಮಾಗನೂರ, ಶಿವರಾಜ ಸಜ್ಜನರ, ಪಿ.ಡಿ. ಶಿರೂರ, ಮಹೇಶ ಚಿನ್ನಿಕಟ್ಟಿ, ಗಿರೀಶ ತುಪ್ಪದ, ಶಿವರಾಜ ಮರ್ತೂರ, ಎಂ.ಎಸ್. ಕೋರಿಶೆಟ್ಟರ, ಸೋಮಣ್ಣ ಮುಷ್ಠಿ, ಗಣೇಶ ಹೂಗಾರ, ಈರಣ್ಣ ಪಾಟೀಲ, ಕರಬಸಪ್ಪ ಹಲಗಣ್ಣನವರ, ವಿ.ಎ. ಗೌಡರ, ಪ್ರಭಪ್ಪ ಮರಗೂರ, ವಿಜಯಕುಮಾರ ಚಿನ್ನಿಕಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.