ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳತಾಯಿ-ತಂದೆಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ, ಅವರ ಹೆಸರಿನಲ್ಲಿ ಸಮಾಜಕ್ಕೆ ಮಾದರಿಯಾಗುವ ಉತ್ತಮ ಕೆಲಸ ಮಾಡಿದರೆ ತಾಯಿ-ತಂದೆ ಋಣ ತೀರಿಸಿದಂತೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸ್ಥಳೀಯ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮುಧೋಳ ಅರಳಿಕಟ್ಟಿ ಫೌಂಡೇಶನ್ ವಾರ್ಷಿಕೋತ್ಸವ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ದಿ.ವ್ಹಿ.ಎಚ್.ಅರಳಿಕಟ್ಟಿ ಕೃಷಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕಾದರೆ ಒಳ್ಳೆಯ ಗುರಿ, ಉದ್ದೇಶ, ಪ್ರಾಮಾಣಿಕ ಪ್ರಯತ್ನ ಬೇಕು. ಅಂದಾಗ ಮಾತ್ರ ಅಂದಕೊಂಡಿದ್ದನ್ನು ಸಾಧಿಸಲು ಸಾಧ್ಯ.ಈ ನಿಟ್ಟಿನಲ್ಲಿ ಡಾ.ಟಿ.ವ್ಹಿ.ಅರಳಕಟ್ಟಿ ಅವರ ಸಾಧನೆಯ ಹೆಜ್ಜೆ ಇತರರಿಗೆ ಮಾದರಿ ಎಂದು ಬಣ್ಣಿಸಿದರು.ಖ್ಯಾತ ಬಹುಭಾಷೆ ಹಿರಿಯ ನಟಿ ಗೀತಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಡಿಮೆ ಪ್ರವೇಶ ಫೀ ಪಡೆದು ಗುಣಮಟ್ಟದ ಶಿಕ್ಷಣ ಕೊಡುತ್ತಿರುವ ಡಾ.ಟಿ.ವ್ಹಿ. ಅರಳಿಕಟ್ಟಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಅದರಂತೆ ಸಹಕಾರಿ, ಸಾಮಾಜಿಕ, ಕೃಷಿ, ಕ್ರೀಡೆ ಸೇರಿ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಮಹಾನಗರಗಳ ಸ್ಕೂಲ್ ನಲ್ಲಿರುವ ಗುಣಮಟ್ಟದ ಶಿಕ್ಷಣ, ಸೌಲಭ್ಯ ಮತ್ತು ಸೌಕರ್ಯಗಳು ಈ ಮುಧೋಳ ರಾಯಲ್ ಸ್ಕೂಲ್‌ನಲ್ಲಿವೆ. ಹೀಗಾಗಿ ಈ ಭಾಗದ ಪಾಲಕರು ಮಹಾನಗರಗಳ ಸ್ಕೂಲ್‌ನಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯುವುದಕ್ಕಿಂತ ಈ ರಾಯಲ್ ಸ್ಕೂಲ್ ನಲ್ಲಿ ಪ್ರವೇಶ ಪಡೆದುಕೊಳ್ಳುವುದು ಒಳ್ಳೆಯದು. ಇದರಿಂದ ತಮ್ಮ ಮಕ್ಕಳ ಕನಸು ನನಸು ಮಾಡಲು ಸಾಧ್ಯ ಎಂದರು.ಹಿರಿಯ ನಟಿ ಗೀತಾ ಅವರು ನಟಿಸಿರುವ ಹಲವಾರು ಚಲನಚಿತ್ರಗಳನ್ನು ನೋಡಿ ಸಂತೋಷ ಪಟ್ಟಿದ್ದೇನೆ. ಅವರ ನೈಜ ಕಲೆ ಇತರೆ ಕಲಾವಿದರಿಗೆ ಪ್ರೇರಣೆಯಾಗಲಿ ಎಂದರು.
ಯಡಹಳ್ಳಿ ಅಡವಿಸಿದ್ದೇಶ್ವರ ಮಠದ ಚಂದ್ರಶೇಖರ ಮಹಾಸ್ವಾಮಿಜಿ ದಿವ್ಯಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.ಅರಳಿಕಟ್ಟಿ ಫೌಂಡೇಷನ್‌ದ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವ್ಹಿ.ಅರಳಿಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾನು ಯಾವುದೇ ಲಾಭದ ಉದ್ದೇಶವಿಟ್ಟುಕೊಂಡು ಶಿಕ್ಷಣ ಸಂಸ್ಥೆ ತೆರದಿಲ್ಲ, ಗ್ರಾಮೀಣ ಭಾಗದ ಬಡ, ಪ್ರತಿಭಾವಂತ, ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ಸದುದ್ದೇಶದಿಂದ ಈ ಶೈಕ್ಷಣಿಕ ಸಂಸ್ಥೆಯನ್ನು ತೆರೆದಿದ್ದೇನೆ. ವಿದ್ಯಾರ್ಥಿಗಳ ಪಾಲಕರು ಬೆಂಬಲ ಮತ್ತು ಸಹಕಾರ ನೀಡಿದ್ದಾರೆ ಎಂದರು.ಮಾಜಿ ಜಿಪಂ ಅಧ್ಯಕ್ಷ ಎಂ.ಎಲ್.ಕೆಂಪಲಿಂಗಣ್ಣವರ, ನಿವೃತ್ತ ಡಿಡಿಪಿಐ ಎಂ.ಜಿ.ದಾಸರ, ಕೊಣ್ಣೂರು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೊಣ್ಣೂರ, ಕಬ್ಬು ಬೆಳೆಗಾರರ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಗಿರೀಶಗೌಡ ಪಾಟೀಲ, ಉಪಾಧ್ಯಕ್ಷ ಅನಂತರಾವ ಘೋರ್ಪಡೆ, ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ.ಟಿ.ಅರಳಿಕಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಕಾರ್ಯದರ್ಶಿ ವಿನಾಯಕ ಟಿ.ಅರಳಿಕಟ್ಟಿ, ವರ್ಷಾ ಘಾರಗೆ,
ಹಾಗೂ ಸಂಸ್ಥೆಯ ಆಡಳಿತಿ ಮಂಡಳಿಯ ಸದಸ್ಯರು, ಗಾಯಕರಾದ ಹೇಮಂತಕುಮಾರ, ಜಸ್ಕರನ್ ಸಿಂಗ್‌ಗೂ ನಟರಾಜ ಕಲಾ ತಂಡದಿಂದ ವಿಶೇಷ ಮನರಂಜನಾ ಕಾರ್ಯಕ್ರಮ ಜರುಗಿದವುಕೋಟ್ಉತ್ತರ ಕರ್ನಾಟಕದ ಜನರ ಪ್ರೀತಿ, ವಿಶ್ವಾಸ ಯಾವತ್ತೂ ನನ್ನ ಮೇಲೆ ಇರಲಿ. ಪ್ರತಿಯೊಬ್ಬ ವ್ಯಕ್ತಿಯು ತಾನು ಗಳಿಸಿದ್ದರಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ಖರ್ಚು ಮಾಡಬೇಕು, ಆಗ ಸಮಾಜ ತಮ್ಮನ್ನು ಗುರುತಿಸಿ ಗೌರವಿಸುತ್ತದೆ, ಸಮಾಜ ಕೊಡುವ ಗೌರವ ಎಲ್ಲರಿಗಿಂತಲೂ ದೊಡ್ಡದು.ಗೀತಾ, ಹಿರಿಯ ಚಿತ್ರನಟಿ