ಕನ್ನಡಪ್ರಭ ವಾರ್ತೆ ಇಂಡಿ ಮಠದ ಬೆಳವಣಿಗೆಗೆ ಚ್ಯುತಿ ಬರದಂತೆ ಎಲ್ಲರೂ ನಡೆದುಕೊಳ್ಳಬೇಕು. ಲಚ್ಯಾಣದ ಅಪಕೀರ್ತಿಗೆ ಯಾರೂ ಅವಕಾಶ ನೀಡಬಾರದು. ಈ ಭಾಗದ ಭಕ್ತರು ತಲೆ ಎತ್ತಿ ತಿರುಗುವಂತೆ ಮಾಡಿದವರು ಸಿದ್ಧಲಿಂಗ ಮಹಾರಾಜರ ಆಶೀರ್ವಾದ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ
ಮಠದ ಬೆಳವಣಿಗೆಗೆ ಚ್ಯುತಿ ಬರದಂತೆ ಎಲ್ಲರೂ ನಡೆದುಕೊಳ್ಳಬೇಕು. ಲಚ್ಯಾಣದ ಅಪಕೀರ್ತಿಗೆ ಯಾರೂ ಅವಕಾಶ ನೀಡಬಾರದು. ಈ ಭಾಗದ ಭಕ್ತರು ತಲೆ ಎತ್ತಿ ತಿರುಗುವಂತೆ ಮಾಡಿದವರು ಸಿದ್ಧಲಿಂಗ ಮಹಾರಾಜರ ಆಶೀರ್ವಾದ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಲಚ್ಯಾಣದ ಸಿದ್ದಲಿಂಗೇಶ್ವರ ಮಠದ ಆವರಣದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು. ನಾನು ಇಲ್ಲಿ ಶಾಸಕನಾಗಿ ಬಂದಿಲ್ಲ, ಮಠದ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ. ಶಾಂತಿಯಿಂದ ಇರುವುದೇ ಸಿದ್ದಲಿಂಗಮಹಾರಾಜರು, ಸಂಗನಬಸವ ಶ್ರೀಗಳಿಗೆ ಗೌರವ ನೀಡಿದಂತೆ. ಮಠದ ಪರಂಪರೆ ಸಿದ್ದಾಂತದಂತೆ ನಡೆದುಕೊಳ್ಳೋಣ. ಮಠದಲ್ಲಿ ಕಲುಷಿತ ವಾತಾವರಣ ನಿರ್ಮಾಣಕ್ಕೆ ಯಾರೂ ಆಸ್ಪದ ಕೊಡಬಾರದು. ಇದು ಭಕ್ತರ ಮಠ, ಶ್ರೀಮಠದ ಬೆಳವಣಿಗೆಗೆ ಪೂರಕ ಚರ್ಚೆ ಸಲಹೆ ನೀಡಬೇಕು. ವೃಷಭಲಿಂಗೇಶ್ವರ ಶ್ರೀಗಳಿಗೆ ನೋವಾಗುವ ತರಹ ಎಲ್ಲಿಯೂ ನಾನು ನಡೆದುಕೊಂಡಿಲ್ಲ. ಮಠಕ್ಕೆ ಮಸಿ ಬಳಿಯುವ ಕೆಲಸವಾಗಬಾರದು. ಸಂಗನಬಸವ ಶ್ರೀಗಳ, ಸಿದ್ದಲಿಂಗ ಮಹಾರಾಜರ ಪರಂಪರಗೆ ಧಕ್ಕೆ ತರುವ ಕೆಲಸ ಮಾಡಬಾರದು. ಲಚ್ಯಾಣದ ಘನತೆ, ವೈಭವ ಎತ್ತರಿಸುವ ಕೆಲಸ ನಡೆಯಬೇಕು. ಯಾರೂ ಪ್ರತಿಷ್ಠೆಗೆ ಬೀಳಬೇಡಿ ಎಂದು ಮನವಿ ಮಾಡಿದರು.ಲಚ್ಯಾಣದ ಮಠಕ್ಕೆ ನೂತನ ಪೀಠಾಧಿಪತಿ ಆಯ್ಕೆಯಲ್ಲಿ ಬಂಥನಾಳದ ವೃಷಭಲಿಂಗೇಶ್ವರ ಶ್ರೀ, ಯರನಾಳದ ಸಂಗನಬಸವ ಶ್ರೀ, ಜಿಡಗಾದ ಮುರಗೇಂದ್ರ ಶ್ರೀಗಳು, ಹಳಂಗಳಿಯ ಶಿವಾನಂದ ಶ್ರೀಗಳು ಹಾಗೂ ನನ್ನನ್ನು ಒಳಗೊಂಡು ಹಿರಿಯರನ್ನು ಒಳಗೊಂಡು ಒಟ್ಟಿಗೆ ಸೇರಿಸಿ ನಿರ್ಧಾರ ಮಾಡಿ ನೂತನ ಪೀಠಾಧಿಪತಿಗಳ ಆಯ್ಕೆ ಮಾಡಲಾಗುವದು. ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.ನಾನು ಸಿದ್ದಲಿಂಗ ಮಹಾರಾಜರ ಆರ್ಶೀವಾದದಿಂದಲೇ ಶಾಸಕ ನಾಗಿದ್ದೇನೆ. ನನ್ನಂತೆ ಸಾವಿರಾರು ಭಕ್ತರು ಲಚ್ಯಾಣ ಮಠದ ಮಹಾರಾಜರ ಭಕ್ತರಿದ್ದಾರೆ. ಶ್ರೀಮಠದ ಗೌರವ ಘನತೆ ಹೆಚ್ಚಿಸುವುದು ಮತ್ತು ಸಿದ್ದಲಿಂಗ ಶ್ರೀಗಳ ಆಶಯದಂತೆ ಲಚ್ಯಾಣ ಮಠದ ಹೆಸರನ್ನು ರಾಜ್ಯದ ಮೂಲೆಗೆ ಹರಡಲು ಪ್ರಯತ್ನ ಮಾಡೋಣ ಎಂದರು. ಡಿ.ಎಸ್.ಪಾಟೀಲ, ಅಪ್ಪಾಸಾಹೇಬ ತಾಂಬೆ, ಜಯರಾಮ ಚವ್ಹಾಣ, ಧನರಾಜ ಮುಜಗೊಂಡ, ಜಕ್ಕಪ್ಪ ಹತ್ತಳ್ಳಿ, ಬಸವರಾಜ ಕರಾಳೆ, ನಾನಾಗೌಡ ಪಾಟೀಲ, ಜಗದೇವಿ ನಾಗಣಸೂರ, ಸಿದ್ದನಗೌಡ ಪಾಟೀಲ, ಎ.ಪಿ.ಕಾಗವಾಡಕರ, ವಿನೋದ ಮುಜಗೊಂಡ ಮಾತನಾಡಿದರು. ಹಳಂಗಳಿಯ ಶಿವಾನಂದ ಶ್ರೀಗಳು, ಭೀಮಣ್ಣ ಕವಲಗಿ, ಎಸ್.ಬಿ.ಬೂದಿಹಾಳ, ಬಸಲಿಂಗಪ್ಪ ಪಾಟೀಲ, ರಾಚಪ್ಪ ಗಳೇದ, ಕಲ್ಲನಗೌಡ ಬಿರಾದಾರ, ಬಿ.ಸಿ.ಸಾವಕಾರ, ಶಿವು ಜಾಲವಾದಿ, ಅಪ್ಪಣ್ಣ ಕಲ್ಲೂರ, ಪ್ರಶಾಂತ ಅಲಗೊಂಡ, ಪ್ರಶಾಂತ ಕಾಳೆ, ಜಾವೇದ ಮೋಮಿನ, ಶ್ರೀಮಂತ ಇಂಡಿ, ಜಟ್ಟೆಪ್ಪ ರವಳಿ ಮತ್ತಿತರಿದ್ದರು.