ಹಾನಗಲ್ಲ: ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವ ಆದೇಶವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾನಗಲ್ಲ ತಾಲೂಕು ಘಟಕ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದೆ.

ಗುರುವಾರ ಹಾನಗಲ್ಲಿನಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಹಾಗೂ ತಾಲೂಕು ಅಧ್ಯಕ್ಷ ಸುರೇಶ ಲಚಮಣ್ಣನವರ ಅವರ ನೇತೃತ್ವದಲ್ಲಿ ಹಾನಗಲ್ಲ ತಹಸೀಲ್ದಾರ್‌ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು. ಮಳೆ ಇಲ್ಲದೆ ಕರ್ನಾಟಕದಲ್ಲಿ ರೈತರು ಕಂಗಾಲಾಗಿದ್ದಾರೆ. ಇಂತಹದ್ದರಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿದೆ. ಇದಾವುದನ್ನು ಪರಿಗಣಿಸದೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವ ಆದೇಶ ಮಾಡಿದ್ದು ಖಂಡನೀಯ. ಕಾವೇರಿ ನೀರನ್ನೇ ನಂಬಿಕೊಂಡಿರುವ ಈ ಭಾಗದ ಜನರಿಗೆ ಇದು ಅನ್ಯಾಯವಾಗಿದೆ. ಪ್ರತಿನಿತ್ಯ ೩೫೦೦ ಕ್ಯೂಸೆಕ್‌ ನೀರು ಬಿಡಬೇಕೆಂಬ ಆದೇಶ ಸರಿ ಅಲ್ಲ. ಯಾವುದೇ ಕಾರಣಕ್ಕೂ ನೀರು ಬಿಡಕೂಡದು. ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶವನ್ನು ತಿರಸ್ಕರಿಸಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ತಾಲೂಕು ಅಧ್ಯಕ್ಷ ಸುರೇಶ ಲಚಮಣ್ಣನವರ, ಜಿಲ್ಲಾ ಉಪಾಧ್ಯಕ್ಷ ಮಹದೇವಪ್ಪ ಹೆಡಿಗ್ಗೊಂಡ, ಪ್ರಧಾನ ಕಾರ್ಯದರ್ಶಿ ಕುಮಾರ ಸುಳ್ಳನವರ, ಯುವ ಘಟಕದ ಅಧ್ಯಕ್ಷ ಶಿವಾನಂದ ಓಲೇಕಾರ, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಅನ್ನಪೂರ್ಣ ಹರಕೇರಿ, ಜಿಲ್ಲಾ ಸಮಾಜಿಕ ಜಾಲತಾಣದ ಅಧ್ಯಕ್ಷ ಮಾಲತೇಶ ಜಿ.ಕೆ., ಹಾವೇರಿ ತಾಲೂಕು ಅಧ್ಯಕ್ಷ ಯುವರಾಜ ನವಲಗುಂದ, ಶಿಗ್ಗಾಂವ ತಾಲೂಕು ಅಧ್ಯಕ್ಷ ಮಾಲತೇಶ ಸಿರಿಗಟ್ಟೆ, ಹಾನಗಲ್ ತಾಲೂಕು ಉಪಾಧ್ಯಕ್ಷ ಸುರೇಶ ಹರಿಜನ, ಗೌರವಾಧ್ಯಕ್ಷ ಶೇಕಪ್ಪ ದೀಪಾವಳಿ, ನಿಂಗಪ್ಪ ತಿಮ್ಮಾಪುರ, ಮಾಲತೇಶ ಡೊಳ್ಳಿನ, ನಿಂಗಪ್ಪ ತಳವಾರ, ಗುಡ್ಡಪ್ಪ ಮ್ಯಾಗಿನಮನಿ ಮೊದಲಾದವರು ಇದ್ದರು.