ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಬೇರೆ ಧರ್ಮವನ್ನು ನಿಂಧಿಸಿ ಇಸ್ಲಾಂ ಧರ್ಮ ಮಾತ್ರ ಶ್ರೇಷ್ಠ ಎಂದು ಹೇಳಿಲ್ಲ. ಎಲ್ಲ ಧರ್ಮಗಳು ಶ್ರೇಷ್ಠ ಎಂದಿದ್ದಾರೆ. ಅವರ ಹೇಳಿಕೆ ತಿರುಚಿ ರಾಜಕೀಯ ಲಾಭ ಪಡೆಯಬೇಡಿ ಎಂದು ಪಪಂ ಸದಸ್ಯ ಗಗನ್ ನೋಟಗಾರ್ ಹೇಳಿದರು.
ಕುಕನೂರು: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಬೇರೆ ಧರ್ಮವನ್ನು ನಿಂಧಿಸಿ ಇಸ್ಲಾಂ ಧರ್ಮ ಮಾತ್ರ ಶ್ರೇಷ್ಠ ಎಂದು ಹೇಳಿಲ್ಲ. ಎಲ್ಲ ಧರ್ಮಗಳು ಶ್ರೇಷ್ಠ ಎಂದಿದ್ದಾರೆ. ಅವರ ಹೇಳಿಕೆ ತಿರುಚಿ ರಾಜಕೀಯ ಲಾಭ ಪಡೆಯಬೇಡಿ ಎಂದು ಪಪಂ ಸದಸ್ಯ ಗಗನ್ ನೋಟಗಾರ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಇಸ್ಲಾಂ ಧರ್ಮದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡುವಾಗ ಇಸ್ಲಾಂ ಧರ್ಮದ ಆಚರಣೆ, ಆ ಧರ್ಮದ ಕಟ್ಟುಪಾಡುಗಳು ಹೇಗಿವೆ ಎಂಬ ವಿಷಯದ ಬಗ್ಗೆ ಅಧ್ಯಯನ ಮಾಡಿದ ಹಿನ್ನೆಲೆಯಲ್ಲಿ ಅವರು ಇಸ್ಲಾಂ ಧರ್ಮ ಶ್ರೇಷ್ಠವಾಗಿದೆ ಎಂದಿದ್ದಾರೆ. ಅಲ್ಲಿದ್ದ ಮುಸ್ಲಿಂ ಸಮಾಜದ ಜನರಿಗೆ ಕುರಾನ್ ಅನ್ನು ಎಲ್ಲರೂ ಅಭ್ಯಾಸ ಮಾಡಬೇಕು ಎಂದು ಹೇಳಿದ್ದಾರೆ. ಅವರು ಹಿಂದು ಧರ್ಮ ಕೆಟ್ಟದ್ದು, ಬೇರೆ ಧರ್ಮ ಸರಿ ಇಲ್ಲ ಎಂದು ಹೇಳಿಲ್ಲ. ಅದನ್ನು ಕೆಲ ಬಿಜೆಪಿ ಮುಖಂಡರು ತಿರುಚಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದಾರೆ, ಇದು ಸರಿಯಲ್ಲ ಎಂದರು.ಜೈನ ಧರ್ಮ ಇಷ್ಟ:ಮಹಮ್ಮದ್ ಪೈಗಂಬರ್ ಅವರ ಜಯಂತಿ ಕಾರ್ಯಕ್ರಮಕ್ಕೆ ಹೋದಾಗ ಇಸ್ಲಾಂ ಧರ್ಮದ ಬಗ್ಗೆ ಮಾತನಾಡಬೇಕಾಗುತ್ತದೆ. ಅಭಿವೃದ್ಧಿಗಳ ಬಗ್ಗೆ ಚರ್ಚೆ ಮಾಡದೆ ಇಂತಹ ಜಾತಿ, ಧರ್ಮ ಆಧಾರದ ಮೇಲೆ ಕೆಲಸ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೂರಾರು, ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಯಲಬುರ್ಗಾ ತಾಲೂಕನ್ನು ಮಾದರಿ ಆಗಿ ರೂಪಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ಪ್ರತಿಯೊಂದು ಗ್ರಾಮಕ್ಕೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು. ಮುಖಂಡ ಹೊನ್ನಪ್ಪ ಮರಡಿ ಇದ್ದರು.