ಸಾರಾಂಶ
ಬಾಲ್ಯವಿವಾಹ, ಮಾದಕ ವಸ್ತುಗಳ ನಿರ್ಮೂಲನೆ ,ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದ ಅವರು, ಯುವಕರು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದಾಗಿ ಸಮಾಜ ಘಾತಕರಾಗಿ ಸಮಾಜ ಮತ್ತು ಪೋಷಕರಿಗೆ ಹೊರೆಯಾಗಬೇಡಿ.
ಕನ್ನಡಪ್ರಭ ವಾರ್ತೆ ಕೋಲಾರಬಾಲಕಾರ್ಮಿಕತೆ ಪೂರ್ಣ ನಿರ್ಮೂಲನೆ ದೃಷ್ಟಿಯಿಂದ ಜನವರಿ ತಿಗಳಿಂದ ಮಾರ್ಚ್ ಅಂತ್ಯದವರೆಗೂ ಬಾಲಕಾರ್ಮಿಕರ, ಕಿಶೋರ ಕಾರ್ಮಿಕರ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ೧೪ ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸಿಕೊಂಡರೆ ಕಠಿಣ ಶಿಕ್ಷೆ ಖಚಿತ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಎಚ್ಚರಿಸಿದರು.ಬಂಗಾರಪೇಟೆಯ ಇಂಡಿಯನ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಜನವರಿಂದ ಮಾರ್ಚ್ ಅಂತ್ಯದವರೆಗೂ ನಡೆಯುವ ಬಾಲಕಾರ್ಮಿಕರ,ಕಿಶೋರ ಕಾರ್ಮಿಕರ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಬಾಲಕಾರ್ಮಿಕ ಪದ್ಧತಿ ನಿಷೇಧ
ಮಕ್ಕಳಿಗೆ ಇರುವ ಶಿಕ್ಷಣ ಹಕ್ಕಿಗೆ ಚ್ಯುತಿ ತಾರದಿರಿ ಎಂದ ಅವರು, ೧೪ ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ ಮತ್ತು ೧೪ ರಿಂದ ೧೮ ರ ನಡುವಿನ ಮಕ್ಕಳನ್ನು ಸಹಾ ಅಪಾಯಕಾರಿ ಕೈಗಾರಿಕೆಗಳಲ್ಲಿ ಬಳಸಿಕೊಳ್ಳುವಂತಿಲ್ಲ ಎಂದರು.ಬಾಲ್ಯವಿವಾಹ, ಮಾದಕ ವಸ್ತುಗಳ ನಿರ್ಮೂಲನೆ ,ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದ ಅವರು, ಯುವಕರು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಚಾಕೋಲೇಟ್‌ಗಳಲ್ಲಿ ಹೇರಾಯಿನ್, ಕೋಕಾ, ಮುಂತಾದ ಅಮಲು, ನಿಶೆ ಬರುವ ವಸ್ತುಗಳನ್ನು ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಎಚ್ಚರಿಸಿದರು.ಪೋಷಕರಿಗೆ ಹೊರೆಯಾಗದಿರಿ
ಜೀವನ ಅಮೂಲ್ಯವಾಗಿದ್ದು, ಬದುಕಿದ್ದಷ್ಟು ದಿನ ಸಮಾಜಕ್ಕೆ ಏನಾದನ್ನದರೂ ಮಾಡೋಣ ಆದರೆ ಸಮಾಜ ಘಾತಕರಾಗಿ ಸಮಾಜ ಮತ್ತು ಪೋಷಕರಿಗೆ ಹೊರೆಯಾಗಬಾರದು ಎಂದು ತಿಳಿಸಿ, ಬಿಟ್ಟು ದುಶ್ಚಟಗಳಿಗೆ ದಾಸರಾಗಿ ಇಡೀ ನಿಮ್ಮ ಜೀವನ ನಾಶಮಾಡಿಕೊಳ್ಳಲು ನೀವೇ ಕಾರಣರಾಗದಿರಿ ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಬಾಲ್ಯಕಾರ್ಮಿಕ ತಡೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಇಂಡಿಯನ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಅಬ್ದುಲ್ ಸಲೀಂ, ಸಹಾಯಕ ಜನರಲ್ ಮ್ಯಾನೇಜರ್ ರಾಜೇಶ್, ಕಾರ್ಮಿಕ ಅಧಿಕಾರಿ ವರಲಕ್ಷ್ಮಿ, ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ ಇದ್ದರು.