ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಿ: ಸಂಗಮೇಶ ತೇರಿನ

| Published : Nov 21 2024, 01:04 AM IST

ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಿ: ಸಂಗಮೇಶ ತೇರಿನ
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಾ ಯೋಜನೆಯಡಿ ಗ್ರಾಮಸ್ಥರು, ರೈತರು ವೈಯಕ್ತಿಕ ಕಾಮಗಾರಿ ಅನುಷ್ಠಾನ ಮಾಡಿಕೊಳ್ಳಬಹುದಾಗಿದೆ.

ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ, ವಾರ್ಡ್‌ಸಭೆ । ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ನರೇಗಾ ಯೋಜನೆಯಡಿ ಗ್ರಾಮಸ್ಥರು, ರೈತರು ವೈಯಕ್ತಿಕ ಕಾಮಗಾರಿ ಅನುಷ್ಠಾನ ಮಾಡಿಕೊಳ್ಳಬಹುದಾಗಿದೆ. ಗ್ರಾಪಂ ಹಾಗೂ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ,ರೇಷ್ಮೆ ಇಲಾಖೆಗಳಿಂದ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಅವಕಾಶ ಇರುತ್ತದೆ. ರೈತರು ವೈಯಕ್ತಿಕ ಕಾಮಗಾರಿ ಅನುಷ್ಠಾನ ಮಾಡಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಮೇಶ ತೇರಿನ ಹೇಳಿದರು.

ತಾಲೂಕಿನ ಲೇಬಗೇರಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕಾಮನೂರು ಗ್ರಾಮದಲ್ಲಿ 2025-26ನೇ ಸಾಲಿನ ನರೇಗಾ ಕ್ರಿಯಾ ಯೋಜನೆ ತಯಾರಿಕೆ ಕುರಿತು ಜರುಗಿದ 2025-26ನೇ ಸಾಲಿನ ಸಾಲಿನ ವಾರ್ಡ್‌ಸಭೆಯಲ್ಲಿ ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧಪಡಿಸುವಿಕೆ ಕುರಿತು ತಿಳಿಸಿದರು.

ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಗ್ರಾಮ ಪಂಚಾಯತಿಯಿಂದ ಕಾಮಗಾರಿ ಬೇಡಿಕೆ ಪಡೆಯಲು ವಾರ್ಡ್‌ಸಭೆ ಜರುಗಿಸಲಾಗುತ್ತಿದೆ. ಕೂಲಿಕಾರರ, ರೈತರ ಬೇಡಿಕೆ ಸಲ್ಲಿಸಲು ಇದೊಂದು ಸದಾವಕಾಶ ಇರುವುದರಿಂದ ಯಾವ ಕಾಮಗಾರಿ ಅವಶ್ಯಕತೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಕಾಮಗಾರಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು.

ವೈಯಕ್ತಿಕ ಕಾಮಗಾರಿ ಜಾನುವಾರು ಶೆಡ್, ಮೆಕೆಶೆಡ್, ಕೃಷಿಹೊಂಡ, ಬದು ನಿರ್ಮಾಣ, ಕೊಳಿ ಶೆಡ್ ಇತ್ಯಾದಿಗಳನ್ನು

ಮಾಡಿಕೊಳ್ಳಲು ಅವಕಾಶ ಇದೆ. ಅದನ್ನು ಬಳಕೆ ಮಾಡಿಕೊಳ್ಳಲು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಪಾರಮ್ಮ ಕರಿಯಪ್ಪ ಬೋವಿ, ಸದಸ್ಯರಾದ ಬಾಳಪ್ಪ ಬೂದಗುಂಪಿ, ಕಾರ್ಯದರ್ಶಿ ಪೂರ್ಣೇಂದ್ರಸ್ವಾಮಿ ಭೂಸನೂರುಮಠ, ಗ್ರಾಮದ ಮುಖಂಡರಾದ ದೇವಪ್ಪ ತಾವರಗೇರಾ, ಈಶಪ್ಪ ಬಂಗಾರಿ, ಮಾರುತಿ ದೊಡ್ಡಮನಿ, ಈಶಪ್ಪ ವಂಕಲಕುಂಟಿ, ಯಲ್ಲಪ್ಪ ಜಾನ್‌, ಕರ ವಸೂಲಿಗಾರ ರಾಜಪ್ಪ ಬಂಗಾರಿ, ಗ್ರಾಮ ಕಾಯಕ ಮಿತ್ರ ಅಂಬಮ್ಮ, ಗ್ರಾಪಂ ಸಿಬ್ಬಂದಿ ನಿಂಗಪ್ಪ, ಗ್ರಾಮಸ್ಥರು, ಸಂಜೀವಿನಿ ಸಂಘದ ಮಹಿಳೆಯರು, ಕೃಷಿ ಸಖಿ, ರೈತರು ಮಹಿಳೆಯರು ಇತರರಿದ್ದರು.