ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಶ್ರೀರಾಮಚಂದ್ರ ದೇವರ ಪ್ರಾಣ ಪ್ರತಿಷ್ಠಾಪನ ಕಾರ್ಯ ಜ.22ರಂದು ಜರುಗಲಿದ್ದು, ಅಂದು ಮನೆ ಮನೆಯಲ್ಲಿ ವಿಶೇಷ ಪೂಜೆ ಜರುಗಲಿ ಎಂದು ಪ್ರಮುಖ ಸಂಚಾಲಕ ಶಿವರಾಜ ದೇಶಮುಖ ತಿಳಿಸಿದರು.ನಗರದ ಹಳಪೇಟೆಯಲ್ಲಿನ ರಾಘವೇಂದ್ರ ಸ್ವಾಮಿಗಳ ದಿವ್ಯ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ, ಅಯೋಧ್ಯೆ ಆಮಂತ್ರಣ ಮತ್ತು ಮಂತ್ರಾಕ್ಷತೆ ತಲುಪಿಸುವ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಭಾರತದ ಅಸಂಖ್ಯಾತರ ಭಾವನೆಗಳೊಂದಿಗೆ ಬೆರೆತು ಹೋಗಿರುವ ಪ್ರಭು ಶ್ರೀರಾಮಚಂದ್ರ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿದ್ದು, ಈ ಪುಣ್ಯ ಕಾರ್ಯ ನಮ್ಮೆಲ್ಲರ ಹಲವು ವರ್ಷಗಳ ಕನಸು ಸಾಕಾರಗೊಂಡಿದೆ. ಎಲ್ಲ ದೈವಿಕ ಕಾರ್ಯಗಳು ಸುಗಮವಾಗಿ ನಡೆಯಲಿ ಎಂದು ಪ್ರಾರ್ಥಿಸೋಣ ಎಂದರು.ಹಿರಿಯರಾದ ಕೊನೇರಾಚಾರ್ಯ ಸಗರ ರಾಮ ಜನ್ಮಭೂಮಿಗಾಗಿ ಶ್ರಮ ವಹಿಸಿದ ಹಿರಿಯರ ಬಗ್ಗೆ ತಿಳಿಸಿದರು. ಇದೇ ವೇಳೆ ಮನೆ ಮನೆಗಳಿಗೆ ತೆರಳಿ ಪ್ರಭು ಶ್ರೀರಾಮಚಂದ್ರ ಭಾವಚಿತ್ರ ಮತ್ತು ಕರಪತ್ರ ಮಂತ್ರಾಕ್ಷತೆ ವಿತರಿಸಿದರು. ರಾಘವೇಂದ್ರ ಸ್ವಾಮಿಗಳ ಮಠದ ಅರ್ಚಕ ನರಸಿಂಹಚಾರ್ಯ ರೊಟ್ಟಿ, ಗುಂಡೇರಾವ ದೇಶಪಾಂಡೆ, ಕಲ್ಲಪ್ಪ ಮಾಳಗಿ, ರೇವಣಸಿದ್ದಯ್ಯ ಗುರುವಿನ್, ಶರಣಯ್ಯ ಸ್ವಾಮಿ, ಮುದುಕಪ್ಪ ಜಂಗಳಿ, ಭೀಮಸೇನಾರಾವ ಕುಲಕರ್ಣಿ, ಗುರುರಾಜ ದೇಶಪಾಂಡೆ, ಮಲ್ಲಿಕಾರ್ಜುನ ಹೂಗಾರ, ಸಿದ್ದಯ್ಯ, ಮಂಜುಳ ರಾಮಕೃಷ್ಣ ಕುಲಕರ್ಣಿ, ರಮೇಶ ದುಗನೂರು, ನಾಗರೆಡ್ಡಿ, ಶ್ರೀನಿವಾಸ, ರಾಜು ಇತರರಿದ್ದರು.