ಸಾರಾಂಶ
ಕೆ.ಆರ್.ಪೇಟೆ ತಾಲೂಕಿನಲ್ಲಿ ಬಲುದೊಡ್ಡ ಹೋಬಳಿ ಕಿಕ್ಕೇರಿ. 60ಕ್ಕೂ ಹೆಚ್ಚು ಹಳ್ಳಿಗಳ ಜನತೆ ಆರೋಗ್ಯ ಸೇವೆಗಾಗಿ ಈ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಇಲ್ಲಿನ ನಾಗರೀಕರಿಗೆ ಕ್ಷ-ಕಿರಣ ಹಾಗೂ ರಕ್ತ ಪರೀಕ್ಷೆ, ಥೈರಾಯಿಡ್ ಸಮಸ್ಯೆ ತಪಾಸಣೆ ಮಾಡಿಸಲು ಪರದಾಡುವ ಸ್ಥಿತಿ ಎದುರಾಗಿತ್ತು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಕ್ಷ-ಕಿರಣ ಹಾಗೂ ರಕ್ತ ಪರೀಕ್ಷಾ ಕೇಂದ್ರ ಘಟಕಕ್ಕೆ ವೈದ್ಯಾಧಿಕಾರಿ ಡಾ.ಸೌಜನ್ಯ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚು ಕಾಡಲಿದೆ. ಗುಣ ಮಟ್ಟದ ಆರೋಗ್ಯ ಸೇವೆ ನೀಡಲು ತಾವು ಸದಾ ಸಿದ್ಧರಿರುವುದಾಗಿ ತಿಳಿಸಿದರು.
ಕೆ.ಆರ್.ಪೇಟೆ ತಾಲೂಕಿನಲ್ಲಿ ಬಲುದೊಡ್ಡ ಹೋಬಳಿ ಕಿಕ್ಕೇರಿ. 60ಕ್ಕೂ ಹೆಚ್ಚು ಹಳ್ಳಿಗಳ ಜನತೆ ಆರೋಗ್ಯ ಸೇವೆಗಾಗಿ ಈ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಇಲ್ಲಿನ ನಾಗರೀಕರಿಗೆ ಕ್ಷ-ಕಿರಣ ಹಾಗೂ ರಕ್ತ ಪರೀಕ್ಷೆ, ಥೈರಾಯಿಡ್ ಸಮಸ್ಯೆ ತಪಾಸಣೆ ಮಾಡಿಸಲು ಪರದಾಡುವ ಸ್ಥಿತಿ ಎದುರಾಗಿತ್ತು ಎಂದರು.ತಪಾಸಣೆಗಾಗಿ ಖಾಸಗಿ ಕ್ಲಿನಿಕ್‌ಗಳನ್ನು ಅವಲಂಬಿಸಬೇಕಿತ್ತು. ಬಡ ವರ್ಗದವರಿಗೆ ಅನುಕೂಲ ಮಾಡಿಕೊಡಲು ಕ್ಷ-ಕಿರಣ ಹಾಗೂ ರಕ್ತ ಪರೀಕ್ಷೆ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಜನರು ಈ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದರು.
ಅನಾರೋಗ್ಯ ಸಮಸ್ಯೆಗಳಿಂದ ಬರುವ ಸಾರ್ವಜನಿಕರೊಂದಿಗೆ ಸೌಜನ್ಯ, ಪ್ರೀತಿಯಿಂದ ವರ್ತಿಸುವುದು ಇಲಾಖೆ ಸಿಬ್ಬಂದಿಗಳ ಕರ್ತವ್ಯ. ಪ್ರತಿ ರೋಗಿಗಳ ಸಮಸ್ಯೆ ಆಲಿಸಿ ತಪಾಸಣೆ ಮಾಡಲು ಒತ್ತಡವಿರುತ್ತದೆ. ಸಮಯಾವಕಾಶದ ಅವಶ್ಯಕತೆ ಬೇಕಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ದಂತ ವೈದ್ಯಡಾ. ಸುಪ್ರೀತ್, ಡಾ.ಋತಿಕ್, ಕ್ಷ-ಕಿರಣ ತಂತ್ರಜ್ಞೆ ಶಿಲ್ಪಾ, ಪ್ರಯೋಗ ಶಾಲಾ ತಂತ್ರಜ್ಞ ರಂಗಸ್ವಾಮಿ, ಮಹೇಶ್, ಶುಶ್ರೂಷಕರಾದ ಪ್ರಕಾಶ್, ಜಗದೀಶ್, ಕುಮುದಾ, ಮಂಜುಳಾ, ಅನುಷಾ, ಕವಿತಾ, ಸಹನಾ, ಸಿಬ್ಬಂದಿಗಳಾದ ಸುಂದರರಾಜು, ರಂಗಸ್ವಾಮಿ, ನಿಶಾಂತ್, ಸವಿತಾ, ನಾಗರತ್ನ, ಜ್ಯೋತಿ ಆಶಾ ಕಾರ್ಯಕರ್ತೆಯರು ಇದ್ದರು.
;Resize=(128,128))
;Resize=(128,128))