ವೈದ್ಯರು ಕಣ್ಣಿಗೆ ಕಾಣುವ ದೇವರಿದ್ದಂತೆ: ಎಸ್ಪಿ ಚನ್ನಬಸವಣ್ಣ

| Published : Oct 16 2023, 01:46 AM IST

ಸಾರಾಂಶ

ಬೆಂಗಳೂರಿನ ಜಯದೇವ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ.ಶಿವಕುಮಾರಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಭಾಲ್ಕಿ ದೇವರು ಕಣ್ಣಿಗೆ ಕಾಣದಿದ್ದರು ವೈದ್ಯರು ಮಾತ್ರ ನಮ್ಮ ಕಣ್ಣಿಗೆ ಕಾಣುವ ದೇವರಿದ್ದಂತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್ ಎಲ್ ಹೇಳಿದರು. ತಾಲೂಕಿನ ಕಣಜಿ ಗ್ರಾಮದಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ.ಶಿವಕುಮಾರ ಭೈರಪ್ಪ ಅವರನ್ನು ಸನ್ಮಾನಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ವೈದ್ಯಕೀಯ ಚಿಕಿತ್ಸೆ ದುಬಾರಿ ಎನಸಿದೆ. ಆದರೂ ಇಂತಹ ವ್ಯವಸ್ಥೆಯ ಮಧ್ಯದಲ್ಲಿ ಬೆಂಗಳೂರಿನ ಹೆಸರಾಂತ ಜಯದೇವ ಆಸ್ಪತ್ರೆಯ ಡಾ.ಶಿವಕುಮಾರ ಭೈರಪ್ಪ ತಿಂಗಳಿಗೊಮ್ಮೆ ತಮ್ಮ ಹುಟ್ಟೂರಿಗೆ ಆಗಮಿಸಿ ಬಡಜನರಿಗೆ ಹೃದಯ ಸಂಬಂಧಿತ ರೋಗಗಳಿಗೆ ಉಚಿತ ಚಿಕಿತ್ಸೆ, ಔಷಧಿ, ವಿವಿಧ ಮಾದರಿ ಪರೀಕ್ಷೆ ಜತೆಗೆ ಅಗತ್ಯ ಇದ್ದವರ ಶಸ್ತ್ರಚಿಕಿತ್ಸೆಗೂ ನೆರವು ನೀಡುತ್ತಿರುವುದು ಮಾದರಿ ಎನಿಸಿದೆ ಎಂದರು. ಡಾ.ಶಿವಕುಮಾರ ಭೈರಪ್ಪ ಖ್ಯಾತ ವೈದ್ಯರು ಎನಸಿಕೊಂಡರೂ ಕೂಡ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಕಳೆದ 12 ವರ್ಷಗಳಿಂದ ನಿರಂತರವಾಗಿ ಸದ್ದಿಲ್ಲದೇ ಗ್ರಾಮೀಣ ಭಾಗದ ಜನರಿಗೆ ಯಾವುದೇ ಖರ್ಚಿಲ್ಲದೇ ನಿಸ್ವಾರ್ಥ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಬಣ್ಣಿಸಿದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಮಾತನಾಡಿ, ಡಾ.ಶಿವಕುಮಾರ ಭೈರಪ್ಪ ಅವರು ದೊಡ್ಡ ವೈದ್ಯರು ಆಗಿದ್ದರೂ ಕೂಡ ತಮ್ಮ ಹುಟ್ಟೂರಿನ ಜನರನ್ನು ಮರೆಯದಿರುವುದು ಶ್ಲಾಘನೀಯ. ನಯಾಪೈಸೆ ಖರ್ಚು ಇಲ್ಲದೇ ಪ್ರತಿ ತಿಂಗಳ ಎರಡನೇ ಶನಿವಾರ ಗ್ರಾಮೀಣ ಭಾಗದ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಮಾದರಿ ಎಂದು ತಿಳಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಬಾಬುರಾವ ಜೋಳದಾಪಕಾ, ಪ್ರಮುಖರಾದ ಸುಭಾಷ ಜಾಧವ, ಶೇಷಾರಾವ ಕಣಜೆ, ಸಂಜೀವ ಜಾಧವ, ಭವರಾವ ಪಾಟೀಲ್, ಬಾಬುರಾವ ಕಣಜೆ, ನಿವೃತ್ತ ಎಇಇ ನಾಗನ್ನಾಥ ಭೈರಪ್ಪ, ಡಾ.ವೈಜಿನಾಥರಾವ ಭೈರಪ್ಪ, ಡಾ.ಶ್ರೀಮಂತರಾವ ಭೈರಪ್ಪ, ಕಾಶಿನಾಥ ಭೈರಪ್ಪ, ಚನ್ನಬಸಪ್ಪ ಪಾಟೀಲ್, ನಾಗನ್ನಾಥ ದೇವಗೊಂಡ, ಸಾಯಿನಾಥ ಮಾಣಕೋಣೆ, ಸಿದ್ರಾಮ ಮಹಾಗಾಂವ, ಸಚೀನ ಮೊಳಕೇರೆ, ಚನ್ನಯ್ಯ ಸ್ವಾಮಿ ಸೇರಿದಂತೆ ಹಲವರು ಇದ್ದರು. ಚಿತ್ರ 14ಬಿಡಿಆರ್51 ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ.ಶಿವಕುಮಾರ ಭೈರಪ್ಪ ಅವರನ್ನು ಎಸ್ಪಿ ಚನ್ನಬಸವಣ್ಣ ಎಸ್ ಎಲ್ ಸನ್ಮಾನಿಸಿದರು. ಚಿತ್ರ 14ಬಿಡಿಆರ್51 ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ.ಶಿವಕುಮಾರ ಭೈರಪ್ಪ ಅವರನ್ನು ಎಸ್ಪಿ ಚನ್ನಬಸವಣ್ಣ ಎಸ್ ಎಲ್ ಸನ್ಮಾನಿಸಿದರು.