ಕರುನಾಡು ಸೈನಿಕ ತರಬೇತಿ ಕೇಂದ್ರ ಹಾಗೂ ರೇವಣಸಿದ್ದೇಶ್ವರ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ರಾಷ್ಟ್ರೀಯ ವೈದ್ಯ ಹಾಗೂ ಪತ್ರಿಕಾ ದಿನ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಡಲಗಿ
ಕರುನಾಡು ಸೈನಿಕ ತರಬೇತಿ ಕೇಂದ್ರ ಹಾಗೂ ರೇವಣಸಿದ್ದೇಶ್ವರ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ರಾಷ್ಟ್ರೀಯ ವೈದ್ಯ ಹಾಗೂ ಪತ್ರಿಕಾ ದಿನ ಆಚರಿಸಲಾಯಿತು.ಹಿರಿಯ ನಾಗರಿಕರಾದ ಶಂಬಣ್ಣ ತುಕ್ಕನ್ನವರ, ಖ್ಯಾತ ವೈದ್ಯ ವಿಕಾಸ ಸೋನವಾಲಕರ ಹಾಗೂ ಪತ್ರಕರ್ತರಾದ ಅಲ್ತಾಫ್ ಹವಾಲ್ದಾರ, ಭೀಮಶಿ ತಳವಾರ, ಮಲ್ಲು ಬೋಳನವರ, ಮಹಾದೇವ ನಡುವಿನಕೇರಿ, ಶಿವಬಸು ಗಾಡವಿ ಮತ್ತು ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿ ಖ್ಯಾತ ವೈದ್ಯ ವಿಕಾಸ ಸೋನವಾಲಕರ ಸನ್ಮಾನ ಸ್ವೀಕರಿಸಿ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿನ ಅಂಕು, ಡೊಂಕುಗಳನ್ನು ತಿದ್ದುವ ಉತ್ತಮ ಸಮಾಜ ನಿರ್ಮಾಣದ ಶ್ರಮದ ಕಾರ್ಯವು ಹಾಗೂ ವೈದ್ಯರ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ತೊಡಗುವ ಕಾಯಕ ಕಾರ್ಯವು ತುಂಬಾ ಶ್ಲಾಘನೀಯವಾದದ್ದಾಗಿದೆ ಎಂದರು.ಮಾಜಿ ಸೈನಿಕ ಶಂಕರ ತುಕ್ಕನ್ನವರ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಬಾಡಿಗೆ ಕಟ್ಟಡದಲ್ಲಿ ಉದ್ಘಾಟನೆಗೊಂಡ ಸೈನಿಕ ತರಬೇತಿ ಕೇಂದ್ರವು ಪತ್ರಕರ್ತರ ಸಹಕಾರದಿಂದ ಇದೀಗ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಸ್ಥೆ ಹೆಮ್ಮರವಾಗಿ ಬೆಳೆಯುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಸ್ಮರಿಸಿದರು.ಸಂಸ್ಥೆಯ ಅಧ್ಯಕ್ಷೆ ಸವಿತಾ ತುಕ್ಕನ್ನವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕೆ.ಎಂ.ಹಿರೇಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಶೈಲ ಕುಲಗೋಡ ವಂದಿಸಿದರು.