ವೈದ್ಯರು ಆಸ್ಪತ್ರೆ ಮೆದುಳಾದ್ರೆ, ಶುಶ್ರೂಕರು ಬೆನ್ನೆಲುಬು

| Published : May 14 2024, 01:07 AM IST

ವೈದ್ಯರು ಆಸ್ಪತ್ರೆ ಮೆದುಳಾದ್ರೆ, ಶುಶ್ರೂಕರು ಬೆನ್ನೆಲುಬು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಯಾವ ಆಸ್ಪತ್ರೆಯಲ್ಲಿ ನರ್ಸಿಂಗ್ ಸೇವೆ ಅತ್ಯುತ್ತಮವಾಗಿರುತ್ತದೆಯೋ ಆ ಆಸ್ಪತ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುತ್ತದೆ. ಆ ಕಾಣದಿಂದಾಗಿಯೇ ವೈದ್ಯರು ಆಸ್ಪತ್ರೆಯ ಮೆದುಳಾದರೆ, ಶುಶ್ರೂಶಕರು ಆಸ್ಪತ್ರೆಯ ಬೆನ್ನೆಲುಬು ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾವ ಆಸ್ಪತ್ರೆಯಲ್ಲಿ ನರ್ಸಿಂಗ್ ಸೇವೆ ಅತ್ಯುತ್ತಮವಾಗಿರುತ್ತದೆಯೋ ಆ ಆಸ್ಪತ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುತ್ತದೆ. ಆ ಕಾಣದಿಂದಾಗಿಯೇ ವೈದ್ಯರು ಆಸ್ಪತ್ರೆಯ ಮೆದುಳಾದರೆ, ಶುಶ್ರೂಶಕರು ಆಸ್ಪತ್ರೆಯ ಬೆನ್ನೆಲುಬು ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಹೇಳಿದರು.

ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಶುಶ್ರೂಕರ ದಿನಾಚರಣೆಯ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಾಗೂ ಹೊದಿಕೆ ವಿತರಿಸಿ ಅವರು ಮಾತನಾಡಿದರು. ಯಾವುದೇ ಒಂದು ಆಸ್ಪತ್ರೆ ಕೇವಲ ಒಂದೇ ವಿಭಾಗದಿಂದ ಮುಂದೆ ಬರುತ್ತದೆ ಎನ್ನುವುದು ತಪ್ಪು. ಇಲ್ಲಿ ಯಾವುದೇ ಕಾರ್ಯವಾದರೂ ತಂಡವಾಗಿ ಮಾರ್ಪಡುತ್ತದೆ. ಒಬ್ಬರಿಗೊಬ್ಬರು ಹೆಗಲು ನೀಡಿ ದುಡಿದಾಗ ಮಾತ್ರ ಅತ್ಯುತ್ತಮ ಸೇವೆ ನೀಡುವುದಕ್ಕೆ ಸಾಧ್ಯ ಎಂದು ಹೇಳಿದರು.ಅದರಲ್ಲೂ ವೈದ್ಯರು ರೋಗಿಯ ರೋಗವನ್ನು ಪತ್ತೆ ಮಾಡಿ ಅದಕ್ಕೆ ಪೂರಕ ಚಿಕಿತ್ಸೆ ತಿಳಿಸಿದ ಮೇಲೆ ಆ ರೋಗಿಯ ಸಂಪೂರ್ಣ ಜವಾಬ್ದಾರಿ ಅಲ್ಲಿನ ಶುಶ್ರೂಷಕರ ಮೇಲಿರುತ್ತದೆ. ಅದನ್ನು ಸಮರ್ಪಕವಾಗಿ ನಿಭಾಯಿಸಿದಾಗ ಮಾತ್ರ ರೋಗಿಗಳು ಗುಣಮುಖರಾಗುತ್ತಾರೆ. ಈ ನಿಟ್ಟಿನಲ್ಲಿ ಎಲ್ಲವನ್ನು ನೋಡಲಾಗಿ ಆಸ್ಪತ್ರೆಯಲ್ಲಿ ಶುಶ್ರೂಶಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿ ಸಂಪೂರ್ಣವಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯಮಾಡಬೇಕಾಗುತ್ತದೆ ಎಂದು ವಿವರಿಸಿದರು.

ಬೆಂಗಳೂರಿನ ಬಸವರಾಜಸ್ವಾಮಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಪ್ರತಿಮಾ.ಎಸ್‌ ಮಾತನಾಡಿ, ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಇಂದು ನರ್ಸಿಂಗ್ ಕ್ಷೇತ್ರ ಕೂಡ ಬದಲಾಗುತ್ತ ಸಾಗಿದೆ. ಈ ಮೂಲಕ ಆಸ್ಪತ್ರೆಯ ಅವಿಭಾಜ್ಯ ಅಂಗವಾಗಿ ನರ್ಸಿಂಗ್ ಸೇವೆ ಗುರುತಿಸಿಕೊಳ್ಳುತ್ತಿದೆ. ವೈದ್ಯರ ರೋಗ ನಿರ್ಧಾರ ಹಾಗೂ ಚಿಕಿತ್ಸಾ ಕ್ರಮ ಎಷ್ಟು ಮುಖ್ಯವಾಗಿದೆಯೋ ಅದಕ್ಕೂ ಮಿಗಿಲಾದ ಕಾರ್ಯ ನರ್ಸಿಂಗ್ ಸಿಬ್ಬಂದಿ ಮೇಲಿದೆ ಎಂದರು.

ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ನರ್ಸಿಂಗ್ ಕೋರ್ಸ್‌ ಮುಗಿಸಿಕೊಂಡು ಬಂದ ವಿದ್ಯಾರ್ಥಿಗಳು ಅತ್ಯುತ್ತಮ ಸೇವೆ ಒದಗಿಸುತ್ತಿದ್ದು, ಅದಕ್ಕೆ ಪೂರಕವಾದ ವಾತಾವರಣ ಈಗ ಉತ್ತರ ಕರ್ನಾಟಕದ ನೆಲದಲ್ಲಿಯೇ ನಿರ್ಮಾಣಗೊಳ್ಳುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಲಬುರ್ಗಿಯ ಶಾರದಾದೇವಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ಪ್ರೊ.ಸ್ನೇಹಲತಾ.ಪಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ರವೀಂದ್ರ ತೋಟದ, ಡಾ.ಸುನೀಲ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮುಂತಾದವರು ಇದ್ದರು.

------------

ಕೋಟ್‌

ವೈದ್ಯರು ರೋಗಿಯ ರೋಗವನ್ನು ಪತ್ತೆ ಮಾಡಿ ಅದಕ್ಕೆ ಪೂರಕ ಚಿಕಿತ್ಸೆಯನ್ನು ತಿಳಿಸಿದ ಮೇಲೆ ಆ ರೋಗಿಯ ಸಂಪೂರ್ಣ ಜವಾಬ್ದಾರಿ ಅಲ್ಲಿನ ಶುಶ್ರೂಷಕರ ಮೇಲೆ ಇರುತ್ತದೆ. ಅದನ್ನು ಸಮರ್ಪಕವಾಗಿ ನಿಭಾಯಿಸಿದಾಗ ಮಾತ್ರ ರೋಗಿಗಳು ಗುಣಮುಖರಾಗುತ್ತಾರೆ.

- ಡಾ.ಶರಣ ಮಳಖೇಡ್ಕರ್, ಆಸ್ಪತ್ರೆಯ ಸಿಇಒ