ಸಾರಾಂಶ
ವೈದ್ಯ ವೃತ್ತಿ ಎಲ್ಲ ವೃತ್ತಿಗಳಿಗಿಂತ ಶ್ರೇಷ್ಠವಾದದ್ದು. ರೋಗಿಗಳಿಗೆ ಔಷಧೋಪಚಾರದ ಜತೆ ಧೈರ್ಯ ತುಂಬಿ ಅವರ ಮನಪರಿವರ್ತನೆಗೆ ಸಹಕರಿಸಿದಾಗ ಅವರು ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಲಯನ್ಸ್ ಸಿಲ್ಕ್ ಸಿಟಿ ನೂತನ ಅಧ್ಯಕ್ಷೆ ವಿಜಯಲಕ್ಷ್ಮಿ ಹೇಳಿದರು. ರಾಮನಗರದಲ್ಲಿ ಹಮ್ಮಿಕೊಂಡ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.
ಮನೋರೋಗ ತಜ್ಞ ಡಾ.ಶಿವಸ್ವಾಮಿಗೆ ಅಭಿನಂದನೆ
ರಾಮನಗರ: ವೈದ್ಯ ವೃತ್ತಿ ಎಲ್ಲ ವೃತ್ತಿಗಳಿಗಿಂತ ಶ್ರೇಷ್ಠವಾದದ್ದು. ರೋಗಿಗಳಿಗೆ ಔಷಧೋಪಚಾರದ ಜತೆ ಧೈರ್ಯ ತುಂಬಿ ಅವರ ಮನಪರಿವರ್ತನೆಗೆ ಸಹಕರಿಸಿದಾಗ ಅವರು ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಲಯನ್ಸ್ ಸಿಲ್ಕ್ ಸಿಟಿ ನೂತನ ಅಧ್ಯಕ್ಷೆ ವಿಜಯಲಕ್ಷ್ಮಿ ಹೇಳಿದರು.ರಾಮನಗರ ಸಿಲ್ಕ್ ಸಿಟಿ ಲಯನ್ಸ್ ಸಂಸ್ಥೆ ಹಾಗೂ ಕಲಾಪ್ರಿಯ ಸಂಸ್ಥೆ ಸಹಯೋಗದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸತತ 25 ವರ್ಷಗಳಿಂದ ವೈದ್ಯ ವೃತ್ತಿಯಲ್ಲಿ ಮನೋರೋಗ ತಜ್ಞರಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ.ಬಿ.ಎಂ.ಶಿವಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿ, ಈ ನಿಟ್ಟಿನಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಿ ಮನೋಬಲ, ಆತ್ಮಸ್ಥೈರ್ಯ ತುಂಬುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಡಾ.ಶಿವಸ್ವಾಮಿ ಮಾತನಾಡಿ, ಸಂಘ ಸಂಸ್ಥೆಗಳು ಸೇವಾ ಮನೋಭಾವದಿಂದ ಜನಪರ ಕೆಲಸ ಮಾಡುವುದರ ಜತೆಗೆ ತಮ್ಮ ಸೇವೆ ಗುರುತಿಸಿ ಗೌರವಿಸಿದಾಗ ಮತ್ತಷ್ಟು ಕಾರ್ಯಪ್ರವೃತ್ತರಾಗಿ ಕೆಲಸ ಮಾಡಲು ಹುರಿದುಂಬಿಸುವಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕಲಾಪ್ರಿಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಸುಧಾರಾಣಿ, ಕಾರ್ಯದರ್ಶಿ ಕೆ.ಅರುಣ್, ಲಯನ್ಸ್ ಸಿಲ್ಕ್ ಸಿಟಿ ಉಪಾಧ್ಯಕ್ಷೆ ಶಾರದಾ, ಕಾರ್ಯದರ್ಶಿ ಹೇಮಾವತಿ, ಖಜಾಂಚಿ ಲಾವಣ್ಯ ಅಶ್ವಿನ್, ಸುಮನಾ, ವಸಂತ ರೆಡ್ಡಿ ಮತ್ತಿತರರು ಹಾಜರಿದ್ದರು.