ತಮ್ಮ ಬೇಡಿಕೆಗಳ ಈಡೇರಿಗಾಗಿ ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ದಸ್ತಾವೇಜು (ಪತ್ರ) ಬರಹಗಾರರ ಮುಷ್ಕರ ಶುಕ್ರವಾರ ಸಂಜೆ ಅಂತ್ಯಗೊಂಡಿದ್ದು, ಮುಂದಿನ ಹೋರಾಟಕ್ಕೆ ಬೆಳೆಗಾವಿಗೆ ತೆರಳುವ ಸಿದ್ಧತೆಗಳು ನಡೆದಿವೆ.

ಹಾನಗಲ್ಲ: ತಮ್ಮ ಬೇಡಿಕೆಗಳ ಈಡೇರಿಗಾಗಿ ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ದಸ್ತಾವೇಜು (ಪತ್ರ) ಬರಹಗಾರರ ಮುಷ್ಕರ ಶುಕ್ರವಾರ ಸಂಜೆ ಅಂತ್ಯಗೊಂಡಿದ್ದು, ಮುಂದಿನ ಹೋರಾಟಕ್ಕೆ ಬೆಳೆಗಾವಿಗೆ ತೆರಳುವ ಸಿದ್ಧತೆಗಳು ನಡೆದಿವೆ.ರಾಜ್ಯ ದಸ್ತಾವೇಜು ಬರಹಗಾರರ ಒಕ್ಕೂಟದ ಆದೇಶದ ಮೇರೆಗೆ ಬೆಳಗಾವಿ ಸುವರ್ಣಸೌಧ ಎದುರು ಡಿ. 16 ರಂದು ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲಾಗುತ್ತದೆ ಎಂದು ದಸ್ತಾವೇಜು ಬರಹಗಾರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ಗಾಜೀಪೂರ ಹೇಳಿದರು.ರಾಜ್ಯದಲ್ಲಿ ಸುಮಾರ 16 ಸಾವಿರ ದಸ್ತಾವೇಜು ಬರಹಗಾರರು ಇದ್ದಾರೆ. ಇದೇ ವೃತ್ತಿಯನ್ನು ಅಲವಂಬಿಸಿದ್ದಾರೆ. ಈಗ ಸರಕಾರದ ನೀತಿಯಿಂದ ವೃತ್ತಿಯಲ್ಲಿ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ದಸ್ತಾವೇಜು ಬರಹಗಾರರ ನೆರವಿಗೆ ಸರಕಾರ ಧಾವಿಸಬೇಕು ಎಂದು ಗಾಜೀಪೂರ ಆಗ್ರಹಿಸಿದರು.ದಸ್ತಾವೇಜು ಬರಹಗಾರರಾದ ಕೆ.ಎಸ್. ಕುಲಕರ್ಣಿ, ನಾಗರಾಜ ಚಂದಾಪೂರ, ಎ.ಎ. ಅತ್ತಾರ, ಎಂ.ಎಚ್.ಗುಲಾಮಲಿಶಾ, ಪಿ.ಎಂ.ಕಬ್ಬೂರ, ಬಿ.ಎಚ್. ರಾಮಜೀ, ಎನ್.ಎಸ್. ಪಾಟೀಲ, ಸುರೇಶ ಮುಸರಿ ಇದ್ದರು.