ದೊಡ್ಡಗುಣಿ ಶ್ರೀಗಳು ಕಾಯಕಯೋಗಿ: ಮಾಧುಸ್ವಾಮಿ

| Published : Feb 27 2024, 01:31 AM IST

ಸಾರಾಂಶ

ನಮ್ಮ‌ ಮನೆಗಳ ಜೊತೆಗೆ ಧರ್ಮ, ಸಂಸ್ಕೃತಿಗಳನ್ನು ಉಳಿಸಿಕೊಂಡು ಬರುತ್ತಿರುವ ಮಠಗಳನ್ನು ಜೋಪಾನ‌ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.

ರೇವಣಸಿದ್ದೇಶ್ವರ ಶಿವಾಚಾರ‍್ಯ ಸ್ವಾಮೀಜಿಯವರ 64 ನೇ ವರ್ಷದ ಜನ್ಮ ವರ್ಧಂತಿ

ಕನ್ನಡಪ್ರಭ ವಾರ್ತೆ ತುಮಕೂರು

ಕಾಯಕ ತತ್ವವನ್ನು ಅನುಸರಿಸುವ ಶರಣರೇ ನಮಗೆ ಆದರ್ಶ. ಅದರಲ್ಲೂ ದೊಡ್ಡಗುಣಿಯ ಶ್ರೀಗಳು ನಾವು ಕಂಡ ಕಾಯಕಯೋಗಿಗಳು ಎಂದು ಮಾಜಿ ಸಚಿವ ಮಾಧುಸ್ವಾಮಿ ತಿಳಿಸಿದರು.

ಅವರು ದೊಡ್ಡಗುಣಿ ಹಿರೇಮಠದ ಆವರಣದಲ್ಲಿ ಏರ್ಪಡಿಸಿದ್ದ ರೇವಣಸಿದ್ದೇಶ್ವರ ಶಿವಾಚಾರ‍್ಯ ಸ್ವಾಮೀಜಿಯವರ 64 ನೇ ವರ್ಷದ ಜನ್ಮ ವರ್ಧಂತಿ ಮಹೋತ್ಸವದಲ್ಲಿ ಮಾತನಾಡಿದರು.

ನಮ್ಮ‌ ಮನೆಗಳ ಜೊತೆಗೆ ಧರ್ಮ, ಸಂಸ್ಕೃತಿಗಳನ್ನು ಉಳಿಸಿಕೊಂಡು ಬರುತ್ತಿರುವ ಮಠಗಳನ್ನು ಜೋಪಾನ‌ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಸಾನಿಧ್ಯ ವಹಿಸಿ‌ ಆಶೀವರ್ಚನ ನೀಡಿದ ರೇವಣಸಿದ್ದೇಶ್ವರ ಶಿವಾಚಾರ‍್ಯ ಸ್ವಾಮೀಜಿ ಮಾತನಾಡಿ, ನಾವು ಮಾಡುವ ಕಾಯಕದಲ್ಲಿ ಧರ್ಮವನ್ನು ಪಾಲಿಸಬೇಕಿರುವುದು ಇಂದಿನ ಪೀಳಿಗೆಗೆ ಅತ್ಯಾವಶ್ಯಕವಾಗಿದೆ ಎಂದರು.

ಧರ್ಮ, ಸಂಸ್ಕೃತಿಗಳನ್ನು ಉಳಿಸಿಕೊಂಡು ಬರುತ್ತಿರುವ ಶರಣ ಪರಂಪರೆಯಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿರುವ ಮಠ ಮಾನ್ಯಗಳ ಅಭಿವೃದ್ಧಿಗೆ ನಮ್ಮೊಂದಿಗೆ ನೀವು ಕೈ ಜೋಡಿಸಿ ಶ್ರಮಿಸಬೇಕು ಎಂದರು.

ಶ್ರೀ ಗಳ ಜನ್ಮವರ್ಧಂತಿ ಪ್ರಯುಕ್ರ ಶ್ರೀ ಮಠದಲ್ಲಿ ವಿಶೇಷ ಪೂಜೆ, ಪುಣ್ಯ. ನಾಂದಿ, ಗಣಹೋಮ, ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ, ಚಂಡಿಕಾ ಯಾಗ ಪೂಜೆಗಳು ಮತ್ತು ಪ್ರಾತಃಕಾಲದಲ್ಲಿ ರೇಣುಕಾಚಾರ‍್ಯ ಮೂರ್ತಿಗೆ ಮತ್ತು ಕ್ಷೇತ್ರನಾಥ ಗುರುಲಿಂಗೇಶ್ವರಸ್ವಾಮಿ ಮತ್ತು ನಂದೀಶ್ವರ ಸ್ವಾಮಿಯವರಿಗೆ ರುದ್ರಾಭಿಷೇಕ ಮತ್ತು ಪೂರ್ಣಹುತಿ ಕಾರ‍್ಯಕ್ರಮಗಳು ನಡೆದವು.

ಇದೇ ವೇಳೆ ಜನ್ಮವರ್ಧಂತಿ ಅಂಗವಾಗಿ ಸಸಿಗಳನ್ನು ( ಬಿಲ್ವ ಸಸಿ) ನಡೆಲಾಯಿತು ಮತ್ತು ದೊಡ್ಡಗುಣಿ ಗ್ರಾಮ‌ ನಿವಾಸಿಯಾದ ಶತಾಯುಷಿ ವಿಶ್ವೇಶ್ವರಯ್ಯ ದಂಪತಿಗೆ ಗೌರವ ಗುರುರಕ್ಷೆ ನೀಡಿ ಆಶೀರ್ವದಿಸಲಾಯಿತು.

ತೆವಡಿಹಳ್ಳಿ ದಕ್ಷಿಣಮೂರ್ತಿ, ರೇಣುಕಪ್ರಸಾದ್ ಮಠದ ಸಕಲ ಸದ್ಭಕ್ತರು,ಸುತ್ತಲಿನ ಗ್ರಾಮಸ್ಥರು ಭಾಗಿಯಾಗಿ ಗುರುಗಳ ಕೃಪೆಗೆ ಪಾತ್ರರಾದರು.