ಸಾರಾಂಶ
ಬೈಕ್‌ಗೆ ನಾಯಿಗಳು ಅಡ್ಡಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಬಿದ್ದು ಬೈಕ್ ಸವಾರ ಸಾವಿಗೀಡಾದ ಘಟನೆ ರಾಮಪೂರ ಬಳಿ ಗುರುವಾರ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬೈಕ್‌ಗೆ ನಾಯಿಗಳು ಅಡ್ಡಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಬಿದ್ದು ಬೈಕ್ ಸವಾರ ಸಾವಿಗೀಡಾದ ಘಟನೆ ರಾಮಪೂರ ಬಳಿ ಗುರುವಾರ ಸಂಭವಿಸಿದೆ.ತಾಲೂಕಿನ ಚಿಮ್ಮಡ ಗ್ರಾಮದ ಏಕಲವ್ಯ ನಂದಗಾಂವ (೩೪) ಮೃತ ವ್ಯಕ್ತಿ. ಏಕಲವ್ಯ ಹಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ಡಯಾಲಿಸಸ್‌ಗೆಂದು ಗುರುವಾರ ಬೆಳಗ್ಗೆ ಪತ್ನಿಯೊಂದಿಗೆ ಬೈಕ್ ಮೇಲೆ ಹೊರಟಿದ್ದಾಗ ರಾಮಪೂರ ಬಳಿ ನಾಯಿಗಳು ಜಗಳವಾಡುತ್ತ ಬೈಕ್‌ಗೆ ಅಡ್ಡಬಂದು ಬೈಕ್ ಸ್ಕಿಡ್ ಆಗಿ ನೆಲಕ್ಕುರುಳಿದೆ. ಏಕಲವ್ಯನ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಅಸುನೀಗಿದ್ದಾರೆ. ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.