ಸಾರಾಂಶ
ನಾಮಫಲಕ ಅನಾವರಣದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜೆಎಂಐಟಿ ಸಮೀಪದ ವೃತ್ತಕ್ಕೆ ಶ್ರೀ ಜಗದ್ಗುರು ಮುರುಘರಾಜೇಂದ್ರ ವೃತ್ತ ವೆಂದು ಬುಧವಾರ ನಾಮಕರಣ ಮಾಡಿ, ನಾಮಫಲಕವನ್ನು ಅನಾವರಣಗೊಳಿಸಲಾಯಿತು.ನಗರದ ವೀರಶೈವ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಮಹಾಸ್ವಾಮೀಜಿ, ಸತ್ಕಾರ್ಯಗಳನ್ನು ಮಾಡುವುದು ನಮ್ಮ ಸಂಸ್ಕೃತಿಯಾಗಿದೆ. ಜಯದೇವ ಶ್ರೀಗಳು ಶಿಕ್ಷಣ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಶ್ರೀಮಠದ ಬೆಳವಣಿಗೆಗೆ ಅಪಾರ ಕೊಡುಗೆ ಅವರದು ಎಂದು ಸ್ಮರಿಸಿದರು.
ಉತ್ತರ ಕರ್ನಾಟಕದಲ್ಲಿ ವೃತ್ತಗಳೆಂದರೆ ದೇವರ ಸಮಾನ. ಈ ಜಾಗದಲ್ಲಿ ಸುಂದರವಾದ ಉದ್ಯಾನ ಅನಾವರಣಗೊಳ್ಳಲಿ. ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪುತ್ಥಳಿಯ ನಿರ್ವಹಣೆ ಸಂಪೂರ್ಣ ಜವಾಬ್ದಾರಿಯನ್ನು ವೀರಶೈವ ಸಮಾಜ ತೆಗೆದುಕೊಳ್ಳಬೇಕು. ಶ್ರೀ ಜಯವಿಭವ ಶ್ರೀಗಳ ಜಯಂತಿಯ ದಿನ ಅಂದರೆ ಮೇ ತಿಂಗಳಲ್ಲಿ ಪುತ್ಥಳಿಯ ಉದ್ಘಾಟನೆ ಆಗಬೇಕು. ಈ ಕಾರ್ಯಕ್ಕೆ ಶ್ರೀಮಠ ಕೈಜೋಡಿಸುತ್ತದೆ ಎಂದರು.ಸಮಾಜದ ಅಧ್ಯಕ್ಷ ಎಸ್‍ಎಂಎಲ್ ತಿಪ್ಪೇಸ್ವಾಮಿ,ಪಟೇಲ್ ಶಿವಕುಮಾರ್,ಕೆಇಬಿ ಷಣ್ಮುಖಪ್ಪ, ಜಿ.ಎಸ್ ಉಜ್ಜಿನಪ್ಪ, ನಗರಸಭೆ ಸದಸ್ಯ ಸುರೇಶ್,ವೀರಶೈವ ಸಮಾಜದ ನಿರ್ದೇಶಕರಾದ ಎಸ್.ವಿ.ನಾಗರಾಜಪ್ಪ, ಖಜಾಂಚಿ ತಿಪ್ಪೇಸ್ವಾಮಿ, ದೇವಿಕುಮಾರಿ, ಡಿ.ಎಸ್. ಮಲ್ಲಿಕಾರ್ಜುನ್, ಜಯಪ್ಪ,ಸಿದ್ಧಣ್ಣ, ಎಸ್.ವಿ ಕೊಟ್ರೇಶ್, ಮುರುಗೇಶ್, ನಗರಸಭೆ ಸದಸ್ಯ ಸುರೇಶ್ ಕೆ.ಬಿ, ಮಾಜಿ ಅಧ್ಯಕ್ಷ ಟಿಎಸ್‍ಎನ್ ಜಯಣ್ಣ, ಮಹಡಿ ಶಿವಮೂರ್ತಿ, ಎನ್.ಬಿ ವಿಶ್ವನಾಥ್, ಉಮೇಶ್, ಸಿದ್ಧವ್ವನಹಳ್ಳಿ ಪರಮೇಶ್, ನಿರಂಜನ ದೇವರಮನೆ, ಅನಿತಾ ಮುರುಘೇಶ್, ನಿರ್ಮಲಾ ಬಸವರಾಜ್, ರೀನಾ ವೀರಭದ್ರಪ್ಪ, ನಾಗರಾಜ ಸಂಗಮ್, ಸಮಾಜದ ಮುಖಂಡರು, ಶ್ರೀಮಠದ ವಿದ್ಯಾರ್ಥಿಗಳು, ಭಕ್ತರು, ಎಸ್ ಜೆಎಂ ವಿದ್ಯಾಪೀಠದ ನೌಕರರು ಭಾಗವಹಿಸಿದ್ದರು.ನಿವೃತ್ತ ಪ್ರಾಚಾರ್ಯ ಎಸ್.ಷಡಾಕ್ಷರಯ್ಯ ಕಾರ್ಯಕ್ರಮ ನಿರೂಪಿಸಿದರು. ಪಿ.ವೀರೇಂದ್ರಕುಮಾರ್ ವಂದಿಸಿದರು.