ರೇಬೀಸ್ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ: ಡಾ.ಗಣೇಶ್

| Published : Oct 06 2025, 01:00 AM IST

ಸಾರಾಂಶ

ಜಲ ಭಯ, ಗಾಳಿ ಭಯ, ಬೆಳಕಿನ ಭಯ, ಆತಂಕ, ನಿದ್ರಾಹೀನತೆ ಇವು ರೇಬೀಸ್ ಸೋಂಕಿನ ಲಕ್ಷಣಗಳು. ನಾಯಿ ಕಚ್ಚಿದಾಗ ಕಡಿದ ಜಾಗವನ್ನು ಸ್ವಚ್ಛವಾದ ನೀರು ಹಾಗೂ ಸಾಬೂನಿನಿಂದ ತೊಳೆಯಬೇಕು ಸಾಕು ಪ್ರಾಣಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ರೇಬಿಸ್ ವೈರಸ್‌ನಿಂದ ಬರುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಟಪ್ಟಣ

ರೇಬೀಸ್‌ಗೆ ಭಯ ಬೇಡ ಎಚ್ಚರಿಕೆ ಇರಬೇಕು. ಯಾವುದೇ ನಾಯಿ ಅಥವಾ ಪ್ರಾಣಿಗಳು ಕಚ್ಚಿದಾಗ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯಾಧಿಕಾರಿ ಡಾ.ಗಣೇಶ್ ಹೇಳಿದರು.

ತಾಲೂಕಿನ ಕೊಡಿಯಾಲ ಆರೋಗ್ಯ ಕೇಂದ್ರದ ಆವರಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಆಯೋಜಿಸಿದ್ದ ವಿಶ್ವ ರೇಬೀಸ್ ದಿನ ಹಾಗೂ ವಿಶ್ವ ಹೃದಯ ದಿನದಲ್ಲಿ ಭಾಗವಹಿಸಿ ಮಾತನಾಡಿ, ರೇಬೀಸ್ ತಡೆಗಟ್ಟಿ ನಿಮ್ಮನ್ನು ರಕ್ಷಿಸಿಕೊಳ್ಳಿ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಟಿ ರೇಬೀಸ್ ಲಸಿಕೆ ಉಚಿತವಾಗಿ ಲಭ್ಯವಿದೆ ಎಂದರು.

ಆಯುಷ್ ವೈದ್ಯಾಧಿಕಾರಿ ಡಾ.ಮೃಣಾಲಿನಿ ಮಾತನಾಡಿ, ಜಲ ಭಯ, ಗಾಳಿ ಭಯ, ಬೆಳಕಿನ ಭಯ, ಆತಂಕ, ನಿದ್ರಾಹೀನತೆ ಇವು ರೇಬೀಸ್ ಸೋಂಕಿನ ಲಕ್ಷಣಗಳು. ನಾಯಿ ಕಚ್ಚಿದಾಗ ಕಡಿದ ಜಾಗವನ್ನು ಸ್ವಚ್ಛವಾದ ನೀರು ಹಾಗೂ ಸಾಬೂನಿನಿಂದ ತೊಳೆಯಬೇಕು ಸಾಕು ಪ್ರಾಣಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ರೇಬೀಸ್ ವೈರಸ್‌ನಿಂದ ಬರುತ್ತದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಮಾತನಾಡಿ ಎಲ್ಲರೂ ಹೃದಯದ ಬಗ್ಗೆ ಎಚ್ಚರಿಕೆ ವಹಿಸಿ ಪ್ರತಿ ದಿನ ಕನಿಷ್ಠ 45 ನಿಮಿಷ ಸರಳ ನಡಿಗೆ, ವ್ಯಾಯಾಮ, ಸಮತೋಲನ ಆಹಾರ ಸೇವನೆ, ಪ್ರತಿದಿನ ಸಕ್ರಿಯ, ಒತ್ತಡ ನಿಭಾಯಿಸುವುದು, ತಂಬಾಕು ಸೇವನೆ ತ್ಯಜಿಸುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಹೃದಯದ ಆರೋಗ್ಯ, ಜೀವನದ ಚೈತನ್ಯ ಅದನ್ನು ಒಟ್ಟಾಗಿ ಕಾಪಾಡೋಣ ಎಂದು ಸಲಹೆ ನೀಡಿದರು.

ಈ ವೇಳೆ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪುಷ್ಪ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರತ್ನಮ್ಮ, ರೇಣುಕಾ ಮಾತೆ, ಮಂಗಳಮ್ಮ, ಶಶಿಕಲಾ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ನವೀನ್, ಮನುಜ, ರಕ್ಷಿತಾ, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞ ವಜ್ರೇಶ್ವರಿ ಸೇರಿದಂತೆ ಇತರರು ಇದ್ದರು.