ಸಾರಾಂಶ
ಸುಳ್ಳು ಭರವಸೆಗಳಿಗೆ ಮೋಸ ಹೋಗಬೇಡಿ. ಶಾಶ್ವತವಾಗಿರುವ ರೈಲ್ವೆ, ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ನವೀಕರಣ ಗೊಂಡಂತಹ ರೈಲು ನಿಲ್ದಾಣಗಳು, ಬಡವರಿಗಾಗಿ ಆರೋಗ್ಯ ಭಾಗ್ಯ, ರೈತರಿಗೆ ವರ್ಷಕ್ಕೆ ₹6 ಸಾವಿರ ಹಣ ಇಂತಹ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿರುವ ಪ್ರಧಾನಿ ಮೋದಿಜಿಯವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಿ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ಕನ್ನಡಪ್ರಭ ವಾರ್ತೆ ಘಟಪ್ರಭಾಸುಳ್ಳು ಭರವಸೆಗಳಿಗೆ ಮೋಸ ಹೋಗಬೇಡಿ. ಶಾಶ್ವತವಾಗಿರುವ ರೈಲ್ವೆ, ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ನವೀಕರಣ ಗೊಂಡಂತಹ ರೈಲು ನಿಲ್ದಾಣಗಳು, ಬಡವರಿಗಾಗಿ ಆರೋಗ್ಯ ಭಾಗ್ಯ, ರೈತರಿಗೆ ವರ್ಷಕ್ಕೆ ₹6 ಸಾವಿರ ಹಣ ಇಂತಹ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿರುವ ಪ್ರಧಾನಿ ಮೋದಿಜಿಯವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಿ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ಶಿಂದಿಕುರಬೇಟ ಗ್ರಾಮದಲ್ಲಿ ಕರೆಯಲಾದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬೆಳಗಾವಿ ಉಸ್ತುವಾರಿ ಸಚಿವನಾಗಿದ್ದಾಗ ಗೋಕಾಕ ಮತ್ತು ಅರಭಾವಿ ಕ್ಷೇತ್ರ ತುಂಬ ಸಂಚರಿಸಿದ್ದೇನೆ. ನನಗೆ ಬೆಳಗಾವಿ ಲೋಕಸಭಾ ಹೊಸದೆನಲ್ಲ. ವಿರೋಧ ಪಕ್ಷದವರು ಬೆಳಗಾವಿಗೆ ಬಿಜೆಪಿಯವರ ಕೊಡುಗೆ ಏನು ಎಂದು ಕೇಳುತ್ತಿದ್ದಾರೆ. 4 ಬಾರಿ ಸುರೇಶ ಅಂಗಡಿ, ಒಂದು ಬಾರಿ ಮಂಗಲ ಅಂಗಡಿಯವರು ಆರಿಸಿ ಬಂದು ಕ್ಷೇತ್ರದ ಜನತೆಗೆ ಸಾಕಷ್ಟು ಕೆಲಸ ಮಾಡಿಕೊಟ್ಟಿದ್ದಾರೆ. ಆದರೆ, 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ನವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು.ಶಾಸಕ ರಮೇಶ ಜಾರಕಿಹೋಳಿ ಮಾತನಾಡಿ, ಚುನಾವಣೆ ಸಲುವಾಗಿ ಈ ತಿಂಗಳು ಹೆಣ್ಣು ಮಕ್ಕಳಿಗೆ ಎರಡೆರಡು ಬಾರಿ ಬ್ಯಾಂಕಿಗೆ ಹಣ ಜಮಾ ಮಾಡಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಲೋಕಸಭಾ ಚುನಾವಣೆ ಬಳಿಕ ಬಂದ ಆಗುತ್ತವೆ. ಕಾರಣ ಗ್ಯಾರಂಟಿಗಳಿನ್ನು ನಂಬಬೇಡಿ ಎಂದು ಕೋರಿದರು.
ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಎಂ.ಎಲ್.ಮುತ್ತೆನ್ನವರ, ರಾಜು ಮುನ್ನೊಳಿ, ತಾಲೂಕು ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಸುರೇಶ ಕಾಡದವರ, ಈಶ್ವರ ಮಟಗಾರ, ರಾಮಣ್ಣ ಹುಕ್ಕೇರಿ, ಸುರೇಶ ಪಾಟೀಲ, ಜಿ.ಎಸ್.ರಜಪೂತ, ನಾಗಲಿಂಗ ಪೋತದಾರ, ಮಹಾಂತೇಶ ಹಳ್ಳಿ ಮುಂತಾವರು ಇದ್ದರು.