ಪಟಾಕಿ ಸಿಡಿಸಿ ಪರಿಸರ ಮಲೀನ ಮಾಡಬೇಡಿ

| Published : Oct 29 2024, 01:02 AM IST

ಸಾರಾಂಶ

ದೀಪಾವಳಿ ಅಂದರೆ ಬೆಳಕು ನೀಡುವ ಹಬ್ಬ. ದೀಪದಿಂದ ದೀಪ ಹಚ್ಚಿ ಮನೆ ಬೆಳಗೋಣ. ಪರಿಸರ ಹಾಳು ಮಾಡುವ ಪಟಾಕಿ ಸಿಡಿಸೋದು ಬೇಡ ಪಟಾಕಿ ಕೇವಲ ಹಸಿರು ಪಟಾಕಿ ಮಾತ್ರ ಹಚ್ಚಬೇಕು. ದೀಪಾವಳಿ ದಿನದಂದು ಸಂಜೆ ಎಂಟರಿಂದ ಹತ್ತು ಗಂಟೆವರೆಗೂ ಮಾತ್ರ ಪಟಾಕಿ ಹಚ್ವಲು ಸರ್ಕಾರ ಅನುಮತಿ ನೀಡಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೀಪಾವಳಿ ಹಬ್ಬವನ್ನ ದೀಪದಿಂದ ದೀಪ ಹಚ್ಚುವ ಮೂಲಕ ಸಂಭ್ರಮಿಸೋಣ ಬಾರಿ ಪ್ರಮಾಣದಲ್ಲಿ ಸಿಡಿಯುವ ಪಟಾಕಿ ಹಚ್ಚುವುದನ್ನ ನಿಷೇಧಿಸೋಣ. ಒಂದು ವೇಳೆ ಹಚ್ಚಲೆಬೇಕೆಂದ ಆಸೆ ಇದ್ದರೆ ಕೇವಲ ಹಸಿರು ಪಟಾಕಿಗಳನ್ನ ಮಾತ್ರ ಹಚ್ಚಿ, ಸೂಕ್ಷ್ಮ ಪ್ರದೇಶಗಳಾದ ಆಸ್ಪತ್ರೆ,ಶಾಲೆ ಜನನಿಬಿಡ ಪ್ರದೇಶಗಳಲ್ಲಿ ಹಚ್ಚಬೇಡಿ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ದೊಡ್ಡಶಾಣಯ್ಯ ಹೇಳಿದರು. ನಗರ ಹೊರ ವಲಯದ ಸಿ ವಿ ವಿ ಕ್ಯಾಂಪಾಸ್ ನಲ್ಲಿ ಜಿಲ್ಲಾಡಳಿ, ಜಿಪಂ, ಮಾಲಿನ್ಯ ನಿಯಂತ್ರಣ ಮಂಡಳಿ, ರೂರಲ್ ಯೂತ್ ಇನ್‌ಸ್ಟಿಟ್ಯೂಟ್, ಸಾನ್ವಿ ಡೌಲಪರ್ಸ್, ಕೆ.ವಿ. ಮತ್ತು ಪಂಚಗಿರಿ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಪ್ಲಾಸ್ಟಿಕ್ ಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಹಾಳುಮಾಡಬೇಡಿ

ದೀಪಾವಳಿ ಅಂದರೆ ಬೆಳಕು ನೀಡುವ ಹಬ್ಬ. ದೀಪದಿಂದ ದೀಪ ಹಚ್ಚಿ ಮನೆ ಬೆಳಗೋಣ. ಪರಿಸರ ಹಾಳು ಮಾಡುವ ಪಟಾಕಿ ಸಿಡಿಸೋದು ಬೇಡ ಪಟಾಕಿ ಕೇವಲ ಹಸಿರು ಪಟಾಕಿ ಮಾತ್ರ ಹಚ್ಚಬೇಕು. ದೀಪಾವಳಿ ದಿನದಂದು ಸಂಜೆ ಎಂಟರಿಂದ ಹತ್ತು ಗಂಟೆವರೆಗೂ ಮಾತ್ರ ಪಟಾಕಿ ಹಚ್ವಲು ಸರ್ಕಾರ ಅನುಮತಿ ನೀಡಿದೆ ಎಂದರು.

ಮನೆಯ ಮುಂದೆ ದೀಪ ಬೆಳಗಿಸಿ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ರಾಜಾ ಇಮಾಂ ಖಾಸಿಂ, ಪಟಾಕಿ ಹಚ್ಚುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಮಕ್ಕಳು ಮತ್ತು ವೃದ್ದರು ಮೇಲೆ ಅಡ್ಡ ಪರಿಣಾಮಗಳಾಗುತ್ತದೆ. ಮನೆ ಮುಂದೆ ದೀಪ ಹಚ್ಚಿ ಮನೆಯೂ ಅಂದವಾಗಿ ಕಾಣುತ್ತೆ. ನಿಮ್ಮ ಮನೆ ಮನಸ್ಸು ಸಂತೋಷವಾಗಿರುತ್ತೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಾನ್ವಿ ಡೌಲಪರ್ಸ್ ಮಾಲೀಕ ಭಗತ್, ಉನ್ನತಿವಿಶ್ವನಾಥ್, ಬಿಜೆಪಿ ನಗರ ಮಂಡಲಾಧ್ಯಕ್ಷ ಅನು ಆನಂದ್, ಪಿ.ಎಂ.ರಾಜೇಂದ್ರ ಪ್ರಸಾದ್, ಮತ್ತಿತರರು ಇದ್ದರು.