ಸಾರಾಂಶ
Don't do injustice to loyal activists: Amin Reddy
ಕೆಂಭಾವಿ ಪುರಸಭೆ ಸದಸ್ಯರ ಮನೆಗಳಿಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ
------ಕನ್ನಡಪ್ರಭ ವಾರ್ತೆ ಸುರಪುರ
ಕಾರ್ಯಕರ್ತರೇ ಬಿಜೆಪಿ ಪಕ್ಷದ ಜೀವಾಳ, ಅಂತಹ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಬೇಡಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಹೇಳಿದರು.ಬಿಜೆಪಿಯಿಂದ ಆಯ್ಕೆಯಾದ ಕೆಂಭಾವಿ ಪಟ್ಟಣದ ಕೆಲ ಪುರಸಭೆ ಸದಸ್ಯರು ಶುಕ್ರವಾರದಿಂದ ಪಕ್ಷದ ಮುಖಂಡರ ಸಂಪರ್ಕಕ್ಕೆ ಸಿಗದೆ ಇರುವುದರಿಂದ ಆತಂಕಗೊಂಡು, ಶನಿವಾರ ಸಂಪರ್ಕಕ್ಕೆ ಸಿಗದ ಪುರಸಭೆ ಸದಸ್ಯರ ಮನೆಗಳಿಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಎರಡು ವರ್ಷಗಳ ಹಿಂದೆ ನಡೆದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸದಸ್ಯರ ಆಯ್ಕೆಗೆ ಕೆಲಸ ಮಾಡಿದ್ದಾರೆ. ಎಲ್ಲ ಕಾರ್ಯಕರ್ತರ ಹಾಗೂ ಮುಖಂಡರ ಅವಿರತ ಶ್ರಮದಿಂದ ಮೊದಲ ಬಾರಿಗೆ ಕೆಂಭಾವಿ ಪಟ್ಟಣದಲ್ಲಿ ಬಿಜೆಪಿ ಪಕ್ಷ ಬಹುಮತ ಗಳಿಸಿತ್ತು. ಕಾರ್ಯಕರ್ತರ ಪರಿಶ್ರಮದಿಂದ ಆಯ್ಕೆಯಾದ ಕೆಲ ಸದಸ್ಯರು ನಿನ್ನೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಸದಸ್ಯರು ಕಾರ್ಯಕರ್ತರಿಗೆ ಮೋಸ ಮಾಡಬೇಡಿ. ಅವರ ಶ್ರಮವನ್ನು ವ್ಯರ್ಥ ಮಾಡಬೇಡಿ. ಪಕ್ಷಕ್ಕೆ ಬೆಂಬಲಿಸಿ ಪಕ್ಷದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡುವದಕ್ಕೆ ಸಹಕರಿಸಿ ಎಂದು ಕೋರಿದರು.ಈ ಸಂದರ್ಭದಲ್ಲಿ ವಿಪ್ ಆದೇಶದ ಪ್ರತಿಯನ್ನು ಸದಸ್ಯರ ಮನೆಗಳಿಗೆ ಅಂಟಿಸಿದ್ದಾರೆ. ಪ್ರಮುಖರಾದ ಸಂಗಣ್ಣ ತುಂಬಗಿ, ರಮೇಶ ಸೊನ್ನದ, ಡಾ. ರವಿ ಅಂಗಡಿ, ನಿಂಗಪ್ಪ ಹಲಗಿ, ರವಿ ಮಿರ್ಜಿ, ಮಲ್ಕಪ್ಪ ಶಹಾಪುರ, ದೇವು ಯಾಳಗಿ, ಮಂಜು ದೋರನಹಳ್ಳಿ, ಚಾಂದಪಾಶಾ, ಶಿವು ಸಾಸನೂರ, ಹಳ್ಳೆಪ್ಪ ಕವಲ್ದಾರ, ಕೃಷ್ಣ ಪರಸನಹಳ್ಳಿ, ಮಲ್ಲು ವಠಾರ, ಸಂತೋಷ, ದಯಾನಂದ ಪತ್ತೇಪುರ, ಹಂಪಣ್ಣ, ಉಮೇಶರೆಡ್ಡಿ, ಭೀಮನಗೌಡ, ಹಣಮಂತ, ಮಲ್ಕಣ್ಣ ಸೇರಿದಂತೆ ಅನೇಕ ಕಾರ್ಯಕರ್ತರಿದ್ದರು.
ಫೋಟೊ....2ವೈಡಿಆರ್2:ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪುರಸಭೆ ಬಿಜೆಪಿ ಸದಸ್ಯರ ಮನೆಗಳಿಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ.