ಚಿಕ್ಕಮಗಳೂರುಕಲಿಕೆಯ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಮೊಬೈಲ್‌ನ ಚಟಗಳಿಗೆ ಬಲಿಯಾಗದೇ, ಹೆಚ್ಚು ಸಮಯವನ್ನು ವಿದ್ಯಾಭ್ಯಾಸದ ಕಡೆ ಗಮನಹರಿಸಿದರೆ ಭವಿಷ್ಯದಲ್ಲಿ ಅಂದುಕೊಂಡ ಗುರಿ ತಲುಪಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಲಿಕೆಯ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಮೊಬೈಲ್‌ನ ಚಟಗಳಿಗೆ ಬಲಿಯಾಗದೇ, ಹೆಚ್ಚು ಸಮಯವನ್ನು ವಿದ್ಯಾಭ್ಯಾಸದ ಕಡೆ ಗಮನಹರಿಸಿದರೆ ಭವಿಷ್ಯದಲ್ಲಿ ಅಂದುಕೊಂಡ ಗುರಿ ತಲುಪಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹೇಳಿದರು.

ತಾಲೂಕಿನ ಅಂಬಳೆ ಹೋಬಳಿ ಕೆ.ಆರ್.ಪೇಟೆ ಗ್ರಾಪಂ ಆವರಣದಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.ಪ್ರತಿನಿತ್ಯ ಮಕ್ಕಳು ಮೊಬೈಲ್ ಬಳಸಿದರೆ ಕಣ್ಣು, ಕಿವಿಗಳನ್ನು ಶಾಶ್ವತವಾಗಿ ಕಳೆದುಕೊಂಡು ವಿಕಲಚೇತನರಾಗುವ ಸಾಧ್ಯತೆ ಯಿದೆ. ಈ ಬಗ್ಗೆ ಪಾಲಕರು ಹೆಚ್ಚು ಶ್ರಮವಹಿಸಿ ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಪ್ರೋತ್ಸಾಹಿಸಿ ದೇಶದ ಸತ್ಪ್ರಜೆಗಳಾಗಿಸಬೇಕು ಎಂದು ಕಿವಿಮಾತು ಹೇಳಿದರು.ಗ್ರಾಮೀಣ ಮಕ್ಕಳಿಗೆ ಆಯೋಜಿಸಿರುವ ಗ್ರಾಮಸಭೆ ಅತ್ಯಂತ ಉತ್ತಮ ಬೆಳವಣಿಗೆ. ಇದು ಮಕ್ಕಳ ಹಕ್ಕುಗಳ ಪ್ರಶ್ನಿಸುವ ಒಂದು ವೇದಿಕೆ. ಹಾಗಾಗಿ ವಿದ್ಯಾರ್ಥಿಗಳು ಮುಕ್ತವಾಗಿ ಸಭೆಯಲ್ಲಿ ಚರ್ಚಿಸುವ ಮೂಲಕ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.ದಾನಿ, ಗ್ರಾ.ಪಂ. ಸದಸ್ಯ ಟಿ.ಬಿ.ಶಿವಪ್ರಸಾದ್ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಪ್ರತಿ ಗ್ರಾ.ಪಂ.ಗಳಿಗೆ ಗ್ರಾಮಸಭೆ ಆಯೋಜಿಸಿ ವಿದ್ಯಾರ್ಥಿಗಳ ಹಕ್ಕುಗಳನ್ನು ಎತ್ತಿ ಹಿಡಿಯುತ್ತಿದೆ. ಇದು ಮುಂದಿನ ದಿನದಲ್ಲಿ ಬಹು ಉಪಯೋಗ ವಾಗುವ ಜೊತೆಗೆ ಕೆಟ್ಟತನ ದೂರವಾಗಿಸಿ, ಒಳಿತು ಬೋಧಿಸುವ ಕೇಂದ್ರವಾಗಲಿದೆ ಎಂದು ತಿಳಿಸಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರೀದಾ ಭಾನು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಹಕ್ಕು, ಭದ್ರ ಬಾಲ್ಯ ಸಮಿತಿ ಮುಖಾಂತರ ಎಲ್ಲಾ ಮಕ್ಕಳ ರಕ್ಷಣೆ, ಪಾಲನೆ, ಘೋಷಣೆ ಹಾಗೂ ಶಿಕ್ಷಕರ ಜವಾಬ್ದಾರಿ ಬಗ್ಗೆ ಚರ್ಚಿಸಿದೆ. ಈ ಗ್ರಾಪಂ ಅರಿವು ಕೇಂದ್ರಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ ಮಕ್ಕಳೊಂದಿಗೆ ಸಂವಾದದಲ್ಲಿ ಶಾಲೆಗಳಿಗೆ ಸಿಸಿ ಟಿವಿ ಅಳವಡಿಕೆ, ಇಂಗುಗುಂಡಿ ನಿರ್ಮಾಣ, ಶಾಲಾ ಆಟದ ಮೈದಾನಕ್ಕೆ ಕಾಂಪೌಂಡ್ ವ್ಯವಸ್ಥೆ, ಬೇಡದ ವಸ್ತುಗಳನ್ನು ಶಾಲೆ ಆವರಣದಲ್ಲಿ ಎಸೆಯುವುದು ನಿಯಂತ್ರಣ, ಬೀದಿ ನಾಯಿಗಳ ಹಾವಳಿ ನಿಯಂತ್ರಣ, ಚರಂಡಿ ಸ್ವಚ್ಚತೆ ಬಗ್ಗೆ ಮಾಡುವಂತೆ ಮಕ್ಕಳು ಕೋರಿದರು.ಗ್ರಾಮಸಭೆಯಲ್ಲಿ ಕು.ನವ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ನಿಂಗಯ್ಯ, ಸದಸ್ಯರಾದ ಬಿ.ಎಂ. ರಾಘವೇಂ ದ್ರ, ಕೆ.ಎಸ್.ಮಂಜುನಾಥ್, ಎಂ.ಎಸ್.ಮೈತ್ರಿ, ಗೀತಾ, ಕೆ.ಎಂ.ಚೈತ್ರ, ಹಿರಿಯ ಆರೋಗ್ಯ ನಿರೀಕ್ಷಕ ಜಿ.ಡಿ. ಮೂರ್ತಿ, ಸಂಪನ್ಮೂಲ ವ್ಯಕ್ತಿ ಎಂ.ಎಚ್.ಕುಮಾರ್ ಉಪಸ್ಥಿತರಿದ್ದರು. 4 ಕೆಸಿಕೆಎಂ 2ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಗ್ರಾಪಂ ಆವರಣದಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮಸಭೆ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಉದ್ಘಾಟಿಸಿದರು.