ಅಂಗವಿಕಲ ಮಕ್ಕಳ ಬಗ್ಗೆ ಅನುಕಂಪ ತೋರದೆ ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಬೇಕು
ಕುರುಗೋಡು: ಅಂಗವಿಕಲ ಮಕ್ಕಳ ಬಗ್ಗೆ ಅನುಕಂಪ ತೋರದೆ ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಸಮನ್ವಯ ಶಿಕ್ಷಣ ನೋಡೆಲ್ ಅಧಿಕಾರಿ ವೀರೇಶ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸಮನ್ವಯ ಶಿಕ್ಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಮುದಾಯದ ಪಾತ್ರ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡದರು.ಸಮುದಾಯ ಶಿಕ್ಷಣದ ವ್ಯಾಪ್ತಿ ದೊಡ್ಡದಾಗಿದೆ. ಅಂಗವಿಕಲತೆ ಎನ್ನುವುದು ಕೇವಲ ಶರೀರದಲ್ಲಿನ ನ್ಯೂನ್ಯತೆಯ ಮಕ್ಕಳಿಗೆ ಸೀಮಿತವಾಗಿಲ್ಲ. ಎಚ್.ಐ.ವಿ. ಸೋಂಕಿತ ಮಕ್ಕಳು, ಶಾಲೆಯಿಂದ ಹೊರಗುಳಿದ, ನೆರೆಪೀಡಿತ, ಪೋಷಕರಿಲ್ಲದ ನಿರ್ಗತಿಕ ಮಕ್ಕಳನ್ನು ಒಟ್ಟುಗೂಡಿಸಿ ಅವರಿಗೆ ದೈಹಿಕ ಮತ್ತು ಮಾನಸಿಕ ಸ್ಥಿರತೆ ಮೂಡಿಸುವುದೇ ಸಮನ್ವಯ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ ಎಂದರು.
ಶಿಕ್ಷಣ ಇಲಾಖೆಯ ಸಂಯೋಜಕ ಆರ್.ಟಿ. ಮಧುಸೂಧನ ರಾವ್ ಮಾತನಾಡಿ, ಅಂಗವಿಕಲ ಮಕ್ಕಳ ಪೋಷಕರು ಅವರಿಗೆ ಕಣ್ಣು, ಕಿವಿ, ಕೈ ಮತ್ತು ಕಾಲುಗಳಾಗಿ ಪ್ರೋತ್ಸಾಹಿಸಿದರೆ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ ಎಂದು ಸಲಹೆ ನೀಡಿದರು. ಡಾ. ಮಲ್ಲಿಕಾರ್ಜುನ ಪೂಜಾರಿ ಮತ್ತು ಮುಖ್ಯ ಶಿಕ್ಷಕ ಗೋವಿಂದರಾಜು ಮಾತನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀರಾಮ, ಮುಖ್ಯ ಶಿಕ್ಷಕ ಶಿವಕುಮಾರ್, ಸಿಬ್ಬಂದಿ ಮುದಿಯಪ್ಪ, ಸಿ. ಸುಭಾಷ್ ಮತ್ತು ಲೋಕೇಶ ರೆಡ್ಡಿ ಇದ್ದರು. ರುಗೋಡು ಸಮೀಪದ ಸಿರಿಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ಸಮನ್ವಯ್ರ ಶಿಕ್ಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಮುದಾಯ ಶಿಕ್ಷಣದ ಪಾತ್ರ ಕಾರ್ಯಾಗಾರವನ್ನು ಸಮನ್ವಯ ಶಿಕ್ಷಣ ನೋಡೆಲ್ ಅಧಿಕಾರಿ ವೀರೇಶ್ ಉದ್ಘಾಟಿಸಿದರು.