ಮಧ್ಯವರ್ತಿಗಳ ಮೊರೆ ಹೋಗಬೇಡಿ: ಸತೀಶ ಬೇವೂರ

| Published : Jul 06 2024, 12:46 AM IST

ಸಾರಾಂಶ

ಲೋಕಾಪುರ ಉಪತಹಸೀಲ್ದಾರ್‌ ಸತೀಶ ಬೇವೂರ ನೇತೃತ್ವದಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ ಜರುಗಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಾರ್ವಜನಿಕರ ಅನಕೂಲಕ್ಕಾಗಿ ಸರ್ಕಾರ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್‌ಗಳನ್ನು ನಡೆಸುತ್ತಿದೆ. ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ದೊರೆಯಲಿ ಎಂಬುದು ಈ ಅದಾಲತ್ ನ ಉದ್ದೇಶವಾಗಿದ್ದು, ಸಾರ್ವಜನಿಕರು ಮಧ್ಯವರ್ತಿಗಳ ಮಾತಿಗೆ ಮರುಳಾಗದೆ ನೇರವಾಗಿ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಕೆಲಸ ಮಾಡಿಕೊಳ್ಳಬೇಕೆಂದು ಉಪತಹಸೀಲ್ದಾರ್‌ ಸತೀಶ ಬೇವೂರ ಹೇಳಿದರು.

ಪಟ್ಟಣದಲ್ಲಿ ಗುರುವಾರ ಲೋಕಾಪುರ ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ ನಲ್ಲಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಬೇಕು, ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪ್ರತಿಯೊಬ್ಬರು ಕೈಜೋಡಿಸಿ ಯೋಜನೆಗಳ ಸಾಕಾರಕ್ಕೆ ಮುಂದಾಗಬೇಕು, ಕಂದಾಯ ಇಲಾಖೆಯಿಂದ ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ ವೇತನ ಮುಂತಾದ ಹಲವು ಪಿಂಚಣೆ ಯೋಜನೆ ಅರ್ಹರಿಗೆ ತಲುಪಿಸಬೇಕು, ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ನಲ್ಲಿ ಸ್ಥಳೀಯ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಹಲವಾರು ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರಗಳನ್ನು ವಿತರಿಸಿದರು.

ಗ್ರಾಮ ಆಡಳಿತಾಧಿಕಾರಿಗಳಾದ ಅಪ್ಪಾಸಿ ಸೂರ್ಯವಂಶಿ, ವೆಂಕಟೇಶ ಕೊಳಚಿ, ನಾಡ ಕಾರ್ಯಾಲಯದ ಸಿಬ್ಬಂದಿ ಸುನೀಲ ಮಲ್ಲಾಂಡ, ರೇಷ್ಮಾ ಜಮಾದಾರ, ಶಶಿಕಲಾ ಹಿರೇಮಠ ಹಾಗೂ ಫಲಾನುಭವಿಗಳು ಇದ್ದರು.