ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಸಂಗೊಳ್ಳಿ ರಾಯಣ್ಣ ನಮ್ಮ ದೇಶದ ಹೆಮ್ಮೆಯ ಆಸ್ತಿ. ರಾಯಣ್ಣನಂತಹ ದೇಶ ಪ್ರೇಮಿಗಳನ್ನು ಒಂದೇ ಜಾತಿಗೆ ಸೀಮಿತಗೊಳಿಸಬೇಡಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಸುಮಾರು ₹40 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿ ದೇಶವು ಸ್ವತಂತ್ರಗೊಳ್ಳಲು ಕಾರಣಿಕರ್ತರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂತವರು ಪ್ರತಿ ಮನೆ, ಮನೆಗೂ ಹುಟ್ಟಿ ಬರಬೇಕು ಎಂದರು.ಸಂಗೊಳ್ಳಿ ರಾಯಣ್ಣನ ಪುತ್ಥಳಿ ನಿರ್ಮಾಣಕ್ಕಾಗಿ ಕೆ.ಆರ್.ಪುರಂ ಬಿಜೆಪಿ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜು ಅವರು ಸಹ ನನ್ನ ಕೋರಿಕೆಯ ಮೇರೆಗೆ ₹5 ಲಕ್ಷ ಧನ ಸಹಾಯ ಮಾಡಿದ್ದಾರೆ. ಜತೆಗೆ ಹಲವರು ತಮ್ಮ ಕಾಣಿಕೆ ಅರ್ಪಿಸಿ ರಾಯಣ್ಣನಿಗೆ ಗೌರವ ಸೂಚಿಸಿದ್ದಾರೆ. ಹಾಲಿನಂತಿರುವ ಹಾಲು ಮತ ಸಮಾಜವು ವಿಶ್ವಾಸಕ್ಕೆ ಹೆಸರುವಾಸಿಯಾಗಿದೆ ಎಂದು ತಿಳಿಸಿದರು.ಅರಭಾವಿ ದುರದುಂಡೀಶ್ವರ ಮಠದ ಗುರು ಬಸವಲಿಂಗ ಮಹಾಸ್ವಾಮಿಗಳು, ಹುಲಜಂತಿಯ ಮಾಳಿಂಗರಾಯ ಮಹಾರಾಜರು, ಹಡಗಿನಾಳದ ಮುತ್ತೇಶ್ವರ ಸ್ವಾಮಿಗಳು, ಜೋಕಾನಟ್ಟಿಯ ಬಿಳಿಯಾನ ಸಿದ್ಧ ಸ್ವಾಮಿಗಳು, ಯಾದವಾಡದ ಸಿದ್ಧೇಶ್ವರ ಸ್ವಾಮಿಗಳು, ಸ್ಥಳೀಯ ವೇ.ಮೂ.ಸದಾಶಿವ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಸಂಗೊಳ್ಳಿ ರಾಯಣ್ಣನ ಪುತ್ಥಳಿ ನಿರ್ಮಾಣಕ್ಕೆ ₹4 ಲಕ್ಷ ದೇಣಿಗೆ ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಮಾಜ ಬಾಂಧವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ವಿನೋದ ಪೂಜೇರಿ, ಭೀಮಪ್ಪ ಕಲ್ಲೊಳ್ಳಿ, ಮುತ್ತೆಪ್ಪ ಕುಳ್ಳೂರ, ಪ್ರಧಾನಿ ಕಳಸಣ್ಣವರ, ಸಿದ್ದಲಿಂಗಪ್ಪ ಕಂಬಳಿ, ಲಕ್ಷ್ಮಣ ಗಣಪ್ಪಗೋಳ, ಲಕ್ಷ್ಮಣ ಮಸಗುಪ್ಪಿ,ಗುರುಸಿದ್ಧ ಪೂಜೇರಿ, ಗುರುಸಿದ್ಧ ವಡೇರ, ಬಸಲಿಂಗ ತೆಳಗಡೆ, ಲಗಮಣ್ಣ ಕಳಸಣ್ಣವರ, ಬಸು ಪೋಟಿ, ರಾಮಪ್ಪ ದುರ್ಗಿ, ಲಕ್ಷ್ಮಣ ದುರ್ಗಿ, ವಿಠ್ಠಲ ಸುಣಧೋಳಿ, ಮಾರುತಿ ಕಾಡಗಿ, ವಿಠ್ಠಲ ಕಾಡಗಿ, ಮಾರುತಿ ಪೂಜೇರಿ, ಸೋಮನಿಂಗ ಕಾಡಗಿ, ಸುನೀಲ ಈರೇಶನವರ, ಗುರುಸಿದ್ದಪ್ಪ ದುರ್ಗಿ, ದೇವಪ್ಪ ಕರಿಗಾರ, ಶ್ರೀಕಾಂತ ಕಾಡಗಿ, ಹಾಲಪ್ಪ ರಾಮಗಾನಟ್ಟಿ, ಬಸಪ್ಪ ತಪಸಿ, ಸಿದ್ದಪ್ಪ ಆಡಿನ, ಸಿದ್ದಪ್ಪ ಘೋಡಗೇರಿ, ರಾಮಲಿಂಗ ಸನದಿ, ಶ್ರೀಶೈಲ ಬೆಳವಿ, ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸಮಾಜಗಳ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.ಬಳೋಬಾಳ ಗ್ರಾಮದಲ್ಲಿ ಹಾಲುಮತ ಸಮಾಜ ಬಾಂಧವರು ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುಮಾರು ₹40 ಲಕ್ಷ ಕ್ರೋಢೀಕರಿಸಿ ರಾಯಣ್ಣನವರ ಸುಂದರವಾದ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸ್ವಾತಂತ್ರ್ಯ ಉತ್ಸವದಂದು ಪುತ್ಥಳಿ ಅನಾವರಣಗೊಳಿಸುವ ಭಾಗ್ಯ ನನ್ನದಾಗಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ಸೇರಿಕೊಂಡು ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡುತ್ತಿರುವುದು ಖುಷಿ ನೀಡುತ್ತಿದೆ.-ಬಾಲಚಂದ್ರ ಜಾರಕಿಹೊಳಿ,
ಶಾಸಕರು.