ತಾಲೂಕಿನಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಬೆಳಗಾವಿ ಅಧಿವೇಶನಕ್ಕೆ ನಾನು ಹೋಗುತ್ತಿದ್ದು, ಅಧಿವೇಶನದಲ್ಲೂ ಕೂಡ ರೈತರ ಪರವಾಗಿ ಮಾತನಾಡುತ್ತೇನೆ. ಮುತ್ತಯ್ಯನಹಟ್ಟಿ, ಕಾಶಿ ಮಠ , ಗೌರಿಪುರ , ನಂದಿಹಳ್ಳಿ ಗೇಟ್ , ಅನುಪಮನಕುಂಟೆ, ನಲ್ಲೂರು ಹಟ್ಟಿ ಹಾಗೂ ಚೇಳೂರು ಹಟ್ಟಿ , ಕೋಡಿಪಾಳ್ಯ ಗ್ರಾಮಗಳಲ್ಲಿ ಸುಮಾರು 20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳುತ್ತಿದ್ದು ತಾಲೂಕಿನಲ್ಲಿ ಬಹುತೇಕ ಎಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇನೆ .

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಕೋಣನಕಲ್ಲು, ಚೌಕೋನಹಳ್ಳಿ ಹಾಗೂ ಬೈಚೇನಹಳ್ಳಿಯಲ್ಲಿ 7 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಆರ್. ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನು ಯಾರೂ ಕೂಡ ಮಾಡಬಾರದು, ಸಿಎಂ ಬದಲಾವಣೆ ಮಾಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಯತೀಂದ್ರ ಅವರು ಪದೇ ಪದೇ ಹೇಳಿಕೆಗಳನ್ನು ಕೊಡಬಾರದು, ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ, ಶಾಸಕರಿಗೂ ಮುಜುಗರ ತರುತ್ತದೆ. ನಾವೆಲ್ಲರೂ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು. ಮುಂದೆ ಎಲ್ಲರಿಗೂ ಅವಕಾಶಗಳು ಸಿಗುತ್ತವೆ ಎಂದರು.

ಸಿಎಂ ಹಾಗೂ ಡಿಸಿಎಂ ಮನೆಯಲ್ಲಿ ಡಿನ್ನರ್ ಪಾರ್ಟಿ ಮಾಡುವುದು ಸಹಜ, ಅವರಿಗೆ ಬೇಕಾದ ಶಾಸಕರು ಡಿನ್ನರ್ ಪಾರ್ಟಿಯಲ್ಲಿ ಹೋಗುವುದನ್ನು ನಾವು ತಪ್ಪು ತಿಳಿದುಕೊಳಬಾರದು. ನಮ್ಮಲ್ಲಿ ಡಿನ್ನರ್ ಪಾರ್ಟಿಗೆ ತಲೆಕೆಡಿಸಿಕೊಳಲ್ಲ ಎಂದ ಅವರು, ಗೃಹಲಕ್ಷ್ಮೀ ಹಣ ವಿಳಂಭವಾಗಿದೆ. ಎಲ್ಲವನ್ನೂ ಒಂದೇ ಸಾರಿ ಹಾಕುತ್ತೇವೆ. ವರ್ಷದಲ್ಲಿ 65 ಕೋಟಿ ಗ್ಯಾರಂಟಿ ಯೋಜನೆಗೆ ಕೊಡುತ್ತಿದ್ದೇವೆ, ಎರಡು ತಿಂಗಳು ಒಳಗೆ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡುತ್ತೇವೆ, ನುಡಿದಂತೆ ನಡೆಯುತ್ತಿದ್ದೇವೆ, ಮುಂದೆಯೂ ಸಹ ರೈತರ ಪರವಾಗಿ ಇರುತ್ತೇವೆ ಎಂದರು.

ತಾಲೂಕಿನಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಬೆಳಗಾವಿ ಅಧಿವೇಶನಕ್ಕೆ ನಾನು ಹೋಗುತ್ತಿದ್ದು, ಅಧಿವೇಶನದಲ್ಲೂ ಕೂಡ ರೈತರ ಪರವಾಗಿ ಮಾತನಾಡುತ್ತೇನೆ. ಮುತ್ತಯ್ಯನಹಟ್ಟಿ, ಕಾಶಿ ಮಠ , ಗೌರಿಪುರ , ನಂದಿಹಳ್ಳಿ ಗೇಟ್ , ಅನುಪಮನಕುಂಟೆ, ನಲ್ಲೂರು ಹಟ್ಟಿ ಹಾಗೂ ಚೇಳೂರು ಹಟ್ಟಿ , ಕೋಡಿಪಾಳ್ಯ ಗ್ರಾಮಗಳಲ್ಲಿ ಸುಮಾರು 20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳುತ್ತಿದ್ದು ತಾಲೂಕಿನಲ್ಲಿ ಬಹುತೇಕ ಎಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್ , ಸದಸ್ಯರಾದ ಯತೀಶ್ , ಮಹಾಲಕ್ಷ್ಮೀ , ಪಿಡಿಒ ಅಶೋಕ್ ಬಸವನಾಳು , ಶೇಖರ್, ಮುಖಂಡರಾದ ಶಿವಾಜಿರಾವ್ , ಗುತ್ತಿಗೆದಾರ ಅಶೋಕ್ , ಕುಮಾರ್ ಭಾಗವಹಿಸಿದ್ದರು.