ಚಿಕ್ಕಮಗಳೂರುಮಕ್ಕಳಿಗೆ ಚಾಕಲೇಟ್ ಅದರಲ್ಲೂ ವಿದೇಶಿ ಚಾಕಲೇಟ್ ನೀಡುವ ತಪ್ಪನ್ನು ತಾಯಂದಿರು ಮಾಡಬಾರದು ಎಂದು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಕ್ಕಳಿಗೆ ಚಾಕಲೇಟ್ ಅದರಲ್ಲೂ ವಿದೇಶಿ ಚಾಕಲೇಟ್ ನೀಡುವ ತಪ್ಪನ್ನು ತಾಯಂದಿರು ಮಾಡಬಾರದು ಎಂದು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಎಚ್ಚರಿಸಿದರು.

ನಗರದ ಮಧುವನ ಬಡಾವಣೆಯ ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ಕುಟುಂಬದ ಆರೋಗ್ಯದಲ್ಲಿ ಮಹಿಳೆ ಯರ ಪಾತ್ರ ಎಂಬ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. ತಾಯಿಯೇ ಮೊದಲ ಗುರು . ಮಗುವಿಗೆ ತಂದೆ ಬದುಕು ಕಲಿಸಿದರೆ, ತಾಯಿ ಮಗುವನ್ನೇ ರೂಪಿಸುತ್ತಾಳೆ. ಇದನ್ನುಅರಿತು ತಾಯಂದಿರು ಮಕ್ಕಳಿಗೆ ಆರೋಗ್ಯ ಕರ ಜೀವನ ಶೈಲಿ ಕಲಿಸಿ ಜೀವನಉಜ್ವಲ ಗೊಳಿಸಬೇಕು ಎಂದು ಕರೆ ನೀಡಿದರು.

ಹಣ್ಣು ತಿಂದರೆ ಮುಖ ತಾನಾಗೇ ಹೊಳೆಯುತ್ತದೆ. ಆದರೆ ಇಂದು ಹಣ್ಣು ತಿನ್ನುವುದನ್ನು ಬಿಟ್ಟು ಫೇಸ್ ಫ್ರೂಟ್ ಪ್ಯಾಕ್ ಮಾಡುತ್ತಾರೆ. ಇದರಿಂದ ಮುಖವೇನೋ ಹೊಳೆ ಯುತ್ತದೆ. ಆದರೆ ಹಣ್ಣು ವ್ಯರ್ಥ. ಫ್ರೋಟ್ ಫೇಸ್ ಪ್ಯಾಕ್ ಬದಲಿಗೆ ಹಣ್ಣನ್ನುತಿಂದಿದ್ದರೆ ಮುಖದ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತಿತ್ತು ಎಂದರು.

ಆರೋಗ್ಯಕ್ಕೆ ಬಾಳೆಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಬಾಳೆಹಣ್ಣು ನೀಡಿ. ಯಾವುದೇ ಹಣ್ಣಿರಲಿ ಅದನ್ನು ತಿಂದಾಗ ರಕ್ತ ಚಲನೆ ಚೆನ್ನಾಗಿರುತ್ತದೆ. ಇದರಿಂದ ಹೃದಯಾಘಾತ ತಪ್ಪಿಸಿ ರಕ್ತನಾಳ ಶುಚಿಯಾಗಿಡುವ ಶಕ್ತಿ ಹಣ್ಣುಗಳಲ್ಲಿದೆ ಎಂದು ಮಾಹಿತಿ ನೀಡಿದರು. ಯೋಗ, ಧ್ಯಾನ ಮಾಡಿ ತಿಂಗಳಿಗೊಮ್ಮೆ ಉಪವಾಸ ಮಾಡಿ ಇದರಿಂದ ಹಣ್ಣುತರಕಾರಿ ಬಳಕೆ ಹೆಚ್ಚು ಮಾಡಿ ದುಶ್ಚಟ ತ್ಯಜಿಸಿದರೆ ಆರೋಗ್ಯಯುತ ಉತ್ತಮಜೀವನ ಸಾಧ್ಯ ಎಂದರು.ನಮ್ಮ ಹಿರಿಯರು ಯೋಗ, ಧ್ಯಾನದೊಂದಿಗೆ ಉತ್ತಮ ಆಹಾರ ಶೈಲಿ ರೂಢಿಸಿದದ್ದರು. ಆದರೆ ಇಂದು ನಮ್ಮ ಆಹಾರದ ಬದಲು ಪಾಶ್ಚಾತ್ಯ ಆರೋಗ್ಯ ಶೈಲಿ ವ್ಯಾಮೋಹಕ್ಕೆ ಬಿದ್ದಿರುವುದರಿಂದ ಚಿಕ್ಕ ವಯಸ್ಸಲ್ಲೇ ಜೀವ ಕಳೆದುಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಗ್ಯ ನಿಂತಿರುವುದೇ ನಮ್ಮಆಹಾರ ಹಾಗೂ ಜೀವನ ಶೈಲಿ ಮೇಲೆ. ಇವೆರೆಡರ ಬಗ್ಗೆ ನಾವು ನಿರ್ಲಕ್ಷ್ಯ ದಿಂದ ಆರೋಗ್ಯದಿಂದಿರಲು ಸಾಧ್ಯವಿಲ್ಲ. ಮೆದುಳಿನ ಮೇಲೆ ಆಗುವ ಪರಿಣಾಮ ಹೃದಯದ ಮೇಲೆ ಆಗುವ ಪರಿಣಾಮ ಶರೀರದ ಮೇಲೆ ಆಗುತ್ತದೆ ಎಂದು ಪ್ರತಿಯೊಬ್ಬರು ತಿಳಿಯಬೇಕು ಎಂದರು.

ಆಶ್ರಯ ಪೌಂಡೇಶನ್‌ ಅಧ್ಯಕ್ಷೆ ಡಾ.ವರ್ಷಅಭಿಷೇಕ್ ಮಾತನಾಡಿ ಮಹಿಳೆಯರು ಯೋಗ, ದ್ಯಾನದ ಮೂಲಕ ಆರೋಗ್ಯ ಕಾಪಾಡುವ ಜೊತೆಗೆ ೪೦ ವರ್ಷಗಳ ನಂತರ ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದರು.

ಹಿರಿಯ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ ಕಸಾಪ ಅಧ್ಯಕ್ಷರಾಗಿ ಇದುವರೆಗೆ ಯಾವುದೇ ಮಹಿಳೆ ಆಯ್ಕೆಯಾಗಿಲ್ಲ. ಸಾಹಿತ್ಯ ಪರಿಷತ್ತಿನ ಮುಂಬರುವ ಚುನಾವಣೆಗೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸ್ಲರ್ಧಿಸು ತ್ತಿದ್ದಾರೆ. ಇವರನ್ನುಎಲ್ಲರೂ ಬೆಂಬಲಿಸಿ ಎಂದು ಮನವಿ ಮಾಡಿದರು.

ಆದರೆ ವಿಜಯಲಕ್ಷ್ಮಿ ಲಾಭದ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆಕನ್ನಡ ಸಾಹಿತ್ಯಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಿದ್ದಾರೆ ಎಂದು ಹೇಳಿದರು.

ಈವೇಳೆ ಲಯನ್ಸ್ ಕ್ಲಬ್‌ ಅಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯದರ್ಶಿ ಭಗವತಿ ಹರೀಶ್, ಖಜಾಂಚಿ ಅಣ್ಣವೇಲು, ಡಾ. ಜ್ಯೋತಿ ಜೆ.ಪಿ.ಕೃಷ್ಣೇಗೌಡ, ಡಾ. ಗೌರಿ, ಲಯನ್ಸ್ರಮೇಶ್, ರೇಖಾನಾಗರಾಜ್‌ರಾವ್‌ ಇದ್ದರು.