ಸಾರಾಂಶ
ಶಿರಹಟ್ಟಿ: ದೀರ್ಘಾಯುಷ್ಯಕ್ಕೆ ಸದೃಢ ಶರೀರ ಕಾಯ್ದುಕೊಳ್ಳಬೇಕಾದರೆ ಪ್ರತಿಯೊಬ್ಬರೂ ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ತಪಾಸಣೆಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಶಾಸಕ ಡಾ. ಚಂದ್ರು ಲಮಾಣಿ ಸಲಹೆ ನೀಡಿದರು.
ಪ್ರಜಾಚೈತನ್ಯ ಫೌಂಡೇಶನ್ ಬೆಳ್ಳಟ್ಟಿ,ಸಪ್ತಗಿರಿ ಆಸ್ಪತ್ರೆ ಬೆಂಗಳೂರ ಹಾಗೂ ಜಯಪ್ರೀಯ ಆಸ್ಪತ್ರೆ ಹುಬ್ಬಳ್ಳಿ, ಜಿಲ್ಲಾ ರಕ್ತನಿಧಿ ಕೇಂದ್ರ ಗದಗ ಸಂಯುಕ್ತಾಶ್ರಯದಲ್ಲಿ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾಂಗಣದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.ಬದಲಾದ ಜೀವನ ಶೈಲಿ ಮತ್ತು ಒತ್ತಡದ ಬದುಕಿನಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಮೊಬೈಲ್‌ಗಳಲ್ಲಿ ತೊಡಗಿಸಿಕೊಂಡಿರುವ ಯುವ ಜನತೆ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕವಾಗಿ ತಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ.ಸದೃಢ ದೇಹದಲ್ಲಿ ಸಮೃದ್ಧ ಮನಸ್ಸಿರುತ್ತದೆ. ಆರೋಗ್ಯ ಇದ್ದರೆ ನಾವು ಸುಖವಾಗಿ ಬಾಳಲು ಸಾಧ್ಯ ಎಂದರು.
ರೋಗಿಗಳಲ್ಲಿ ದೇವರನ್ನು ಕಾಣಬೇಕು.ಉತ್ತಮ ಚಿಕಿತ್ಸೆ ನೀಡಬೇಕು. ಮಾತಿನಲ್ಲಿಯೇ ರೋಗಿಯ ಅರ್ಧ ಕಾಯಿಲೆ ಗುಣಪಡಿಸಬೇಕು.ಎಲ್ಲಕ್ಕಿಂತ ಮುಖ್ಯವಾಗಿ ಸಂವೇದನೆ ಶೀಲತೆ, ಮಾನವೀಯತೆಯ ಗುಣ ವೈದ್ಯರು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಮಾತೃ,ಪಿತೃ, ಗುರು ಹಾಗೂ ವೈದ್ಯರಲ್ಲಿ ದೇವರನ್ನು ಕಾಣುತ್ತೇವೆ. ಆದ್ದರಿಂದ ವೈದ್ಯರಾದವರು ತಮ್ಮ ವೃತ್ತಿಯನ್ನು ಹಣಕ್ಕಾಗಿ ಮಾಡದೆ ಸೇವೆಯಾಗಿ ಮಾಡಬೇಕು. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂದು ಹೇಳುವ ಮೂಲಕ ಹೆತ್ತವರು, ಹಿರಿಯರು, ಗುರುಗಳನ್ನು ಗೌರವಿಸಬೇಕು ಎಂಬ ಸಂದೇಶ ವಿಶ್ವಕ್ಕೆ ಸಾರಿದ್ದು ಭಾರತೀಯ ಸಂಸ್ಕೃತಿ ನಮ್ಮದು ಎಂದರು.ಪ್ರಜಾಚೈತನ್ಯ ಫೌಂಡೇಶನ್ ಅಧ್ಯಕ್ಷ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ರೋಗಗಳು ಬರುವ ಮುನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು. ಯಾವುದೇ ಕೆಲಸ ಮಾಡಲು ಮೊದಲು ನಾವು ಆರೋಗ್ಯವಂತಾಗಿರಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗಲು ವೈಯಕ್ತಿಕ ಸ್ವಚ್ಛತೆಯ ಕಡೆ ಗಮನ ಹರಿಸಬೇಕು. ನಂತರ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯವಾಗಿದ್ದರೆ ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣ ಆಸ್ಪತ್ರೆಗೆ ಖರ್ಚುಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು.ಮುಖಂಡರಾದ ಮೋಹನ ಗುತ್ತೆಮ್ಮನವರ, ಕೊಟ್ರೇಶ್ ಸಜ್ಜನರ, ಮಹೇಶ ಬಡ್ನಿ, ರಾಜೇಂದ್ರ ಕುಮಾರ್ ಹಲಗಲಿ, ಮುತ್ತು ಅಳವಂಡಿ, ಫಕೀರೇಶ್ ರಟ್ಟೀಹಳ್ಳಿ, ಶಂಕರ್ ಮರಾಠೆ, ಡಾ. ಅರುಣ್ ಕುಮಾರ ಡಬಾಲಿ, ಕರಿಯಪ್ಪ ಮಹದೇವಪ್ಪನವರ್, ಚನ್ನವೀರಪ್ಪ ಗುಗ್ಗರಿ, ಶಿವರಾಜ್ ಸಜ್ಜನರ, ವಿಜಯ ರೆಡ್ಡಿ ಮೇಕಳಿ, ಸುರೇಶ ಬೆಲಹುಣಶಿ, ಮಂಜುನಾಥ್ ಉಳ್ಳಾಗಡ್ಡಿ, ಹನುಮಂತಗೌಡ ದಾಸರಹಳ್ಳಿ, ವೆಂಕರೆಡ್ಡಿ ಸಿಂಧೋಗಿ, ಆನಂದ ಹಿರೇವಳಿ. ರಬ್ಬಾನಿ ಚೌರಿ, ಕೊಟ್ರೇಶ್ ಅಕ್ಕೂರ್, ಸುನಿಲ್ ಬಣಗಾರ, ಮಲ್ಲೇಶ್ ಸಜ್ಜನರ, ರಾಜು ಮಾಂಡ್ರೆ, ಉದಯಕುಮಾರ್ ತೋಟರ, ವಿಶ್ವನಾಥ್ ದಲಾಲಿ, ರಾಘು ಗುತ್ತೆಮ್ಮನವರ, ರಾಘು ಬಡಿಗೇರ್, ಮಹದೇವ್ ಕಲ್‌ವಡ್ಡರ್, ಅಣ್ಣಪ್ಪ ಗುತ್ತೇಮ್ಮನವರ, ಗೌತಮ್ ಹಳ್ಳೆಮ್ಮನವರ, ರಮೇಶ್ ಸೌಂಶಿ, ಪರಶು ಗೋಪಾಳಿ, ವಿಶ್ವನಾಥ್ ಪಾಟೀಲ್, ಪ್ರಶಾಂತ್ ಹೊಸಮನಿ, ವಿಜಯ ಸಜ್ಜನರ, ಮಂಜು ಸಜ್ಜನರ, ರಾಕೇಶ್ ರಡ್ದೆರ, ಸೋಮರೆಡ್ಡಿ ಮರೆಡ್ಡಿ , ರಾಘವೇಂದ್ರ ಅಳವಂಡಿ, ಕೃಷ್ಣ ದುರ್ಗದ, ಫಕೀರೆಡ್ಡಿ ಬಸವ ರೆಡ್ಡಿ, ಪ್ರಮೋದ್ ಮೇಕಳಿ, ಪ್ರಶಾಂತ್, ಕೋಡಿಹಳ್ಳಿ, ಪ್ರಕಾಶ್ ಕುಂಕರಮಠ, ಫಕೀರೆಡ್ಡಿ ಮರಡ್ಡಿ, ಫಕ್ಕಿರೆಡ್ಡಿ ಶಿಡಗನಾಳ, ವೆಂಕಟೇಶ್ ಹರಗನೂರ್, ಆನಂದ ಸತ್ತೇಮ್ಮನವರ, ಕೋಟೇಶ್ ಪೂಜಾರ್ ನೀಲಪ್ಪ ಕುರುಬರ ಇದ್ದರು.