ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಭಾರಿ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿಯವರನ್ನು ಲೇವಡಿ ಮಾಡಿ ಹಗುರವಾಗಿ ಮಾತನಾಡಿರುವುದನ್ನು ಜೆಡಿಎಸ್ ಎಸ್‌ಸಿ ಘಟಕದ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ ತೀವ್ರವಾಗಿ ಖಂಡಿಸಿದ್ದಾರೆ.

- ಕುಮಾರಸ್ವಾಮಿ ವಿರುದ್ಧ ಮಾತನಾಡಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ: ನರಸಿಂಹಮೂರ್ತಿಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಭಾರಿ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿಯವರನ್ನು ಲೇವಡಿ ಮಾಡಿ ಹಗುರವಾಗಿ ಮಾತನಾಡಿರುವುದನ್ನು ಜೆಡಿಎಸ್ ಎಸ್‌ಸಿ ಘಟಕದ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ ತೀವ್ರವಾಗಿ ಖಂಡಿಸಿದ್ದಾರೆ.

ನಗರದ ಬಿಬಿ ರಸ್ತೆ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀವೊಬ್ಬ "ಲಾಟರಿ " ಶಾಸಕ . ವಿಧಾನ ಸಭಾ ಚುನಾವಣೆ ವೇಳೆ ಅನಿವಾರ್ಯ ಪರಿಸ್ಥಿತಿಯಲ್ಲಿ ಜೆಡಿಎಸ್ ಮತಗಳು ನೀಮಗೆ ಬೀಳದಿದ್ದರೆ ಶಾಸಕರಾಗುತ್ತಿರಲಿಲ್ಲ. ಕ್ಷೇತ್ರದ ಅಭಿವೃದ್ಧಿ ಬಿಟ್ಟು ಹೊಗಳು ಭಟ್ಟರಾಗಿದ್ದೀರಿ. ಕುಮಾರಸ್ವಾಮಿ ವಿರುದ್ಧ ಮಾತನಾಡಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೀಸ್ ಸಿಎಂ ಎಂದು ಲೇವಡಿ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರದೀಪ್ ಈಶ್ವರ್ ಭಾರಿ ಕೈಗಾರಿಕಾ ಸಚಿವ ಎನ್ನುವುದನ್ನು ರಾಗ ಎಳೆದು ಅವಹೇಳನ ಮಾಡಿದ್ದಾರೆ. ಹಿರಿಯರ ವಿರುದ್ದ ಹೇಳಿಕೆ ಕೊಡುವಾಗ ಎಚ್ಚರವಿರಲಿ. ನೀವು ಯಾರಿಂದ ಗೆದ್ದು ಶಾಸಕರಾಗಿದ್ದೀರಿ ಅನ್ನೋ ಪರಿಜ್ಞಾನ ಇರಲಿ. ಜೆಡಿಎಸ್ ಮತದಿಂದ ಗೆದ್ದಿದ್ದೀರಿ ಎನ್ನುವುದನ್ನು ಮರೆಯಬೇಡಿ ಎಂದು ತಿರುಗೇಟು ನೀಡಿದರು.ಒಂದೇ ಸಾರಿಗೆ ರಾಜ್ಯ ನಾಯಕನಾಗಬೇಕು ಎನ್ನುವ ಭರದಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ಬಿಡಬೇಕು. ರಾಜ್ಯಕ್ಕೆ ಮತ್ತು ದೇಶಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮತ್ತು ಕುಮಾರಸ್ವಾಮಿ ಏನು ಮಾಡಿದ್ದಾರೆ ಅನ್ನೋದು ನಾಡಿಗೆ ಗೊತ್ತು. ಅವರ ಕಾಲಿನ ದೂಳಿಗೂ ನೀವು ಸಮನಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಾಂತಮೂರ್ತಿ ಮಾತನಾಡಿ, ಪ್ರದೀಪ್ ಈಶ್ವರ್ ಅವರೇ ಬರಿ ಬಾಯಿ ಬಡ್ಕೊಳ್ಳೋದು ಬಿಡಿ, ಕ್ಷೇತ್ರದ ಕೆಲಸ ಮಾಡಿತೋರಿಸಿ. ದೇವೆಗೌಡರ ಬಳಿ ರಾಜಕೀಯ ಕಲಿತು ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದು ಸಿಎಂ ಆಗಿದ್ದಾರೆ. ಅವರನ್ನು ಹೊಗಳಿ ಅಟ್ಟಕ್ಕೇರಿಸಿ ನೀವು ಏನೋ ಲಾಭ ಪಡೆಯಬೇಕು ಅನ್ನೋ ದಾವಂತದಲ್ಲಿ ಏನೋನೊ ಮಾತಾಡೋದು ಬಿಡಬೇಕು. ನಿಮ್ಮ ವರ್ತನೆ ಹೀಗೆ ಮುಂದುವರಿದರೆ ತಾಲೂಕಿನ ಜನ ತಿರುಗಿ ಬೀಳೋದು ಖಚಿತ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಆಂಜಿನಪ್ಪ, ತಾಲುಕೂ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಅಖಿಲ್ ರೆಡ್ಡಿ, ಕುಮಾರ್ ಮತ್ತಿತರರು ಇದ್ದರು.-------------

ಸಿಕೆಬಿ-4 ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನ ಎಸ್‌ಸಿ ಘಟಕದ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿದರು.