ಬಡತನದ ಕಾರಣ ಒಡ್ಡಿ ಓದು ನಿಲ್ಲಿಸಬೇಡಿ: ರಜನೀಕಾಂತ್‌

| Published : Sep 30 2025, 12:00 AM IST

ಸಾರಾಂಶ

ಬಡ ಕೃಷಿ ಕುಟುಂಬದಲ್ಲಿ ಹುಟ್ಟಿ ಕಠಿಣ ಅಭ್ಯಾಸ ಮಾಡಿ, ವಿದ್ಯಾರ್ಥಿ ವೇತನ ಸೇರಿದಂತೆ ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಪ್ರಥಮ ಪ್ರಯತ್ನದಲ್ಲಿಯೇ ಕೆಎಎಸ್ ಉತ್ತೀರ್ಣರಾದ ಸಾಧಕ ರಜನೀಕಾಂತ್‌ ಅವರ ಸಂದರ್ಶನ

ಕನ್ನಡಪ್ರಭ ಯುವ ಆವೃತ್ತಿ ಸಂದರ್ಶನ

ವೀರೇಶ ಎಸ್‌. ಉಳ್ಳಾಗಡ್ಡಿ, ಮಾಲಗಿತ್ತಿ

ನೀನು ಬಡವನಾಗಿ ಹುಟ್ಟಿದರೆ

ಅದು ನಿನ್ನ ತಪ್ಪಲ್ಲ, ಆದರೆ

ನೀನು ಬಡವನಾಗಿ ಸತ್ತರೆ

ಅದು ಖಂಡಿತ ನಿನ್ನದೇ ತಪ್ಪು ಬಡವನಾಗಿ ಹುಟ್ಟುವುದು ಸಹಜ ಅದರಲ್ಲಿ ಯಾರ ತಪ್ಪು ಇಲ್ಲ, ಆದರೆ ಬಡವ ಎಂಬ ಕಾರಣವನ್ನು ಇಟ್ಟುಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು. ಕಷ್ಟ ಪಟ್ಟು ಓದಿ ಉನ್ನತ ಹುದ್ದೆ ಪಡೆಯಬೇಕು ಎಂಬುದು ಈ ಗಾದೆ ಮಾತಿನ ಅರ್ಥ. ಈ ಗಾದೆ ಮಾತು ಹೇಳಲು ಕಾರಣವೇನೆಂದರೆ, ಈಗ ನಾನು ನಿಮಗೆ ತಿಳಿಸಲು ಹೊರಟಿರುವ ಅಧಿಕಾರಿ ಯಶೋಗಾಥೆ ಈ ಗಾದೆ ಮಾತಿಗೆ ಹೋಲಿಕೆಯಾಗುತ್ತದೆ. ಅವರು ಕೂಡ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿ ಕಠಿಣ ಅಭ್ಯಾಸ ಮಾಡಿ, ವಿದ್ಯಾರ್ಥಿ ವೇತನ ಸೇರಿದಂತೆ ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಪ್ರಥಮ ಪ್ರಯತ್ನದಲ್ಲಿಯೇ ೨೦೧೪ರಲ್ಲಿ ಕೆಎಎಸ್ ಉತ್ತೀರ್ಣರಾದರು. ಅಲ್ಲದೆ ೨ನೇ ಬಾರಿ ಮತ್ತೊಮ್ಮೆ ಕೆಎಎಸ್ ಬರೆದು ೨೦೧೫ರಲ್ಲಿ ಉತ್ತೀರ್ಣರಾಗಿ ೩೪ ರ್‍ಯಾಂಕ್ ಪಡೆದರು. ಈಗ ತಾಂತ್ರಿಕ ಶಿಕ್ಷಣ ಇಲಾಖೆ ಆಡಳಿತಾಧಿಕಾರಿಯಾಗಿ ಆಗಿರುವ ರಜನಿಕಾಂತ್. ಇವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಲಸದಾಳ ತಾಂಡಾದಲ್ಲಿ ಕಡು ಬಡತನದಲ್ಲಿ ಜನಿಸಿದ್ದಾರೆ. ಇಲ್ಲಿಯವರೆಗೆ ೯ ಜಿಲ್ಲೆಗಳಲ್ಲಿ ೮ ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರತಿಯೊಂದು ಜಿಲ್ಲೆಯ ಶಾಲೆಗೆ ಭೇಟಿ ನೀಡಿದ್ದಾರೆ. ಐಎಎಸ್, ಕೆಎಎಸ್ ಸ್ಪರ್ಧಾರ್ಥಿಗಳಿಗೆ ಸ್ಫೂರ್ತಿಧಾಯಕ ತರಗತಿ ತೆಗೆದುಕೊಂಡಿದ್ದಾರೆ. ಇವರಿಂದ ಸ್ಫೂರ್ತಿ ಪಡೆದು ಕೆಎಎಸ್ ಅಧಿಕಾರಿಗಳಾಗಿದ್ದಾರೆ. ಇವರು ಕನ್ನಡಪ್ರಭ ಯುವ ಆವೃತ್ತಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ಅವರ ಕೆಎಎಸ್ ಪಯಣ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಾಥಮಿಕ, ಪ್ರೌಢ, ಪದವಿ ಶಿಕ್ಷಣ ಎಲ್ಲೇಲಿ ಪೂರೈಸಿದಿರಿ?

ನಮ್ಮದು ಕೃಷಿಕ ಕುಟುಂಬ. ೧ರಿಂದ ೫ನೇ ತರಗತಿಯನ್ನು ಕೊಟಗಾವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದೇನೆ. ನಮ್ಮ ಮನೆಯಿಂದ ಶಾಲೆ ೪ ರಿಂದ ೫ ಕಿ.ಮೀ ದೂರ ಇದೆ. ಕೆಲವೊಮ್ಮೆ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದೇ. ನಂತರ ೬ ರಿಂದ ೧೦ನೇ ತರಗತಿಯನ್ನು ಭಾಲ್ಕಿ ತಾಲೂಕಿನಲ್ಲಿರುವ ಕರಡ್ಯಾಳ ಗ್ರಾಮದಲ್ಲಿರುವ ಶ್ರೀ ಚನ್ನಬಸವೇಶ್ವರ ಗುರುಕುಲ ಶಾಲೆಯಲ್ಲಿ ಪೂರ್ಣಗೊಳಿಸಿದೆ. ನಮ್ಮದು ಲಂಬಾಣಿ ಭಾಷೆ. ಆಗ ನನಗೆ ಕನ್ನಡ ಲಿಪಿ ಅಭ್ಯಾಸ ಇರಲಿಲ್ಲ. ಕನ್ನಡ ಕಲಿತು ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ 125ಕ್ಕೆ 124 ಅಂಕ ಪಡೆದು ಶೇ. 91 ಫಲಿತಾಂಶದೊಂದಿಗೆ ಜಿಲ್ಲೆಗೆ 3ನೇ ರ್‍ಯಾಂಕ್ ಬಂದೆ. ಬೀದರ್‌ನ ಶಾಹಿನ್ ಕಾಲೇಜಿನ ಪಿಯುಸಿ ದಾಖಲಾದೆ.

ನೀವು ಕೆಎಎಸ್ ಸೇರಲು ಏನು ಪ್ರೇರಣೆ ನೀಡಿತು. ಕೆಎಎಸ್ ಅಧಿಕಾರಿಯಾದ ನಂತರ ಮಾಡಿದ ಸಾಧನೆಗಳೇನು?

ನಾನು ತಾಂಡಾದಲ್ಲಿ ಹುಟ್ಟಿದ್ದರಿಂದ ಮೂಲಭೂತ ಸೌಕರ್ಯ ಕೊರತೆಯಾಗಿತ್ತು. ಅಲ್ಲದೆ ಜಾತಿ ತಾರತಮ್ಯದಿಂದ ನೊಂದಿದ್ದೇ.ಆದ್ದರಿಂದ ಶಿಕ್ಷಣ ಪಡೆದು ಕೆಎಎಸ್ ಅಧಿಕಾರಿಯಾಗಬೇಕೆಂದು ನಿರ್ಧಾರ ಮಾಡಿದೆ. ಎಸ್‌ಎಸ್‌ಎಲ್‌ಸಿಯಲ್ಲಿರುವಾಗ ಐಎಎಸ್, ಕೆಎಎಸ್ ಅಧಿಕಾರಿ ಆಗಬೇಕೆಂದು ಗುರಿ ಇಟ್ಟುಕೊಂಡಿದ್ದೇ. ಆದ್ದರಿಂದ ಎಸ್ ಎಸ್ ಎಲ್ ಸಿಯಲ್ಲಿ ಕಠಿಣ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದೆ. ನಾನು ಪಿಯುಸಿ ಓದುತ್ತಿದ್ದಾಗ ಬೀದರ್‌ಗೆ ಹರ್ಷಗುಪ್ತ ಅವರು ಜಿಲ್ಲಾಧಿಕಾರಿಯಾಗಿದ್ದರು. ಅವರಿಂದ ಕೂಡ ಪ್ರೇರಣೆ ಪಡೆದೆ. ನಾನು ಎಂಜಿನಿಯರಿಂಗ್ ಎರಡನೇ ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಪ್ರಾರಂಭಿಸಿದೆ. ಆ ಸಮಯದಲ್ಲಿ ದಿನಪತ್ರಿಕೆ ಎನ್‌ಸಿಆರ್‌ಟಿ ಪುಸ್ತಕಗಳನ್ನು ಓದಲು ಆರಂಭಿಸಿದೆ. ಆ ಸಮಯದಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಭೇಟೆಯಾಗುತ್ತಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಾವ ರೀತಿ ನಡೆಸಲಾಗುತ್ತಾರೆ. ಎಂತಹ ಪ್ರಶ್ನೆಗಳನ್ನು ಕೇಳುತ್ತಾರೆ, ನಾವು ಹೇಗೆ ತಯಾರಿ ನಡೆಸಬೇಕೆಂದು ಐಎಎಸ್, ಕೆಎಎಸ್ ಅಧಿಕಾರಿ ಭೇಟಿಯಾಗಿ ಸಲಹೆ ಪಡೆಯುತ್ತಿದ್ದೇ. ಹಾಗೆ ಕಠಿಣ ಅಭ್ಯಾಸ ಮಾಡುತ್ತಿದ್ದೇ. ಎಂಜಿನಿಯರಿಂಗ್ ೪ನೇ ವರ್ಷದಲ್ಲಿದ್ದಾಗ ಸರ್ಕಾರ ಕೆಎಎಸ್ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿತು. ಆಗ ಕೆಎಎಸ್ ಪರೀಕ್ಷೆಯನ್ನು ಬರೆದೆ. ಪ್ರಥಮ ಪ್ರಯತ್ನದಲ್ಲೇ ಕೆಎಎಸ್ ಪರೀಕ್ಷೆ ಪಾಸಾದೆ. ೨೩ನೇ ವಯಸ್ಸಿನಲ್ಲಿ ಕೆಎಎಸ್ ಅಧಿಕಾರಿಯಾದೆ. ನನಗೆ ಡಿವೈಎಸ್ಪಿ, ಎಸಿ ಆಗಬೇಕೆಂದು ಆಸೆ ಇತ್ತು. ನನಗೆ ಎಸಿ ಹುದ್ದೆ ಸಿಗಲಿಲ್ಲ. ಯಾದಗಿರಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕನಾಗಿ ಸೇರಿದೆ. ಯಾದಗಿರಿ ಜಿಲ್ಲೆಯ ಶೋರಾಪುರ ತಾಲೂಕಿನ ಬೋನಾಲ್ ಗ್ರಾಮದ ಬಳಿಯಿರುವ ಪಕ್ಷಿಧಾಮವನ್ನು ಮುರ್ತುವಜಿವಹಿಸಿ ಅಭಿವೃದ್ಧಿ ಮಾಡಿದೆ. ಅದು ಈಗ ರಾಜ್ಯದ ೨ನೇ ಅತಿದೊಡ್ಡ ಪಕ್ಷಿಧಾಮವಾಗಿದೆ.ಇದು ದಾಖಲೆ ಕೂಡ ಆಗಿದೆ. ೨೦೧೫ರಲ್ಲಿ ಸರ್ಕಾರ ಕೆಎಎಸ್ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿತು. ಮೊದಲನೇ ಪರೀಕ್ಷೆಯಲ್ಲಿ ಆದಂತಹ ತಪ್ಪನ್ನು ತಿದ್ದಿಕೊಂಡು ಎರಡನೇ ಬಾರಿಗೆ ೨೦೧೫ರಲ್ಲಿ ಪರೀಕ್ಷೆ ಬರೆದೆ. ಆಗ ರಾಜ್ಯಕ್ಕೆ ೩೪ನೇ ರ‌್ಯಾಂಕ್ ಬಂತು. ಆಗ ಕಂದಾಯ ಇಲಾಖೆ ಅಸಿಸ್ಟೆಂಟ್ ಕಮಿಷನರ್‌ಆಗಿ ಸೇರಿದೆ. ಬಾಗಲಕೊಟೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ಆದೆೆ. ರಾಯಚೂರು ಕಂದಾಯ ಇಲಾಖೆಯ ಎಸಿ ಆದೆ. ಆಗ ಹಿರಿಯ ನಾಗರಿಕರಿಗೆ ನ್ಯಾಯ ಕೊಡಿಸಿದೆ. ಬಳಿಕ ಬೆಂಗಳೂರಿಗೆ ಅಸಿಸ್ಟೆಂಟ್ ಕಮಿಷನರ್‌ಆಗಿ ಬಂದೆ. ಈಗ ಬೆಂಗಳೂರಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಕೆಎಎಸ್‌ಗೆ ಯಾವ ರೀತಿ ತಯಾರಿ ಮಾಡಿಕೊಂಡಿದ್ದಿರಿ?

ನಾನು ಆರ್. ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ೬ನೇ ಸೆಮಿಸ್ಟ ರ್‌ನಲ್ಲಿ ಇದ್ದಾಗ ಕೆಎಎಸ್ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಪೂರ್ವಭಾವಿಮತ್ತು ಮುಖ್ಯ ಪರೀಕ್ಷೆಗೆ ವಿಕೆಂಡ್ ಕ್ಲಾಸ್‌ಗೆ ಹೋಗುತ್ತಿದ್ದೆ. ಪ್ರತಿ ನಿತ್ಯ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಜನರಲ್ ಸ್ಟಡಿ ಮತ್ತು ಐಚ್ಛಿಕ ವಿಷಯ ಅಭ್ಯಾಸ ಮಾಡುತ್ತಿದ್ದೇ. ಎಂಜಿನಿಯರಿಂಗ್ ಮುಗಿದ ಬಳಿಕ ಪೂರ್ಣ ಅವಧಿ ಕೋಚಿಂಗ್ ತೆಗೆದುಕೊಂಡೆ. ಗುಂಪು ಅಧ್ಯಯನ ಮಾಡುತ್ತಿದ್ದೆ. ಪ್ರತಿನಿತ್ಯ ೮ರಿಂದ ೯ ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೇ. ಗ್ರಂಥಾ ಲಯ ಹಾಗೂ ಮನೆ ಯಲ್ಲಿ ಓದುವಾಗ ನೋಟ್ಸ್ ಮಾಡಿಕೊ ಳ್ಳುತ್ತಿದ್ದೇ. ನಾನು ಒಂದು ನಿಮಿಷ ಕೂಡ ವ್ಯರ್ಥ ಮಾಡಿಲ್ಲ. ಬಸ್ ಪ್ರಯಾಣ ಮಾಡುವಾಗ ಮೊಬೈಲ್‌ನಲ್ಲಿ ಇಟ್ಟಕೊಂಟಿದ್ದ ನೋಟ್ಸ್ ಓದುತ್ತಿದ್ದೇ, ಅತೀ ಮುಖ್ಯ ಎನಿಸುವ ಘಟನೆಗಳು ನೆನೆಪಿನಲ್ಲಿ ಉಳಿಯಲಿ ಎಂಬ ಉದ್ದೇಶದಿಂದ ಆ ಅವುಗಳನ್ನು ಪೇಪರ್‌ನಲ್ಲಿ ಬರೆದು ಗೋಡೆಗೆ ಅಂಟಿಸುತ್ತಿದ್ದೇ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ವೈಫಲ್ಯವನ್ನು ಹೇಗೆ ಎದುರಿಸಬೇಕು?ಫೇಲ್ ಆಗುತ್ತೇವೆ ಎಂದು ಭಯಪಡಬೇಕಿಲ್ಲ. ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ಮೊಟಿವೇಶನ್ ವಿಡಿಯೋ ನೋಡುತ್ತಿರಬೇಕು. ಒಂದು ಬಾರಿ ಫೇಲ್ ಆದರೆ ಪೂರ್ವಭಾವಿ, ಮುಖ್ಯ ಪರೀಕ್ಷೆಯಲ್ಲಿ ಆದ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಒಂದು ಫೇಲ್ ಆಯಿತು ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ಪದೇ ಪದೆ ಪ್ರಯತ್ನ ಮಾಡಬೇಕು. ಬರೆಯುವ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡಬಾರದು.ಕೆಎಎಸ್ ತಯಾರಿಗೆ ಜಾಲತಾಣ, ಪರೀಕ್ಷಾ ಸರಣಿಗಳು, ಆನ್‌ಲೈನ್ ಸಂಪನ್ಮೂಲಗಳು ಸಹಾಯಕವಾಗುತ್ತವೆಯೇ?ಕೆಲವೊಬ್ಬರು ಕೆಲಸ ಮಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಕೆಲವರಿಗೆ ತರಬೇತಿ ಕೋಚಿಂಗ್ ಸಂಸ್ಥೆ ಗಳಿಗೆ ಹೋಗಿ ತರಬೇತಿ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಶೇ. ೧೦ ರಿಂದ ೨೦ ರಷ್ಟು ಯುವಕರು ಜಾಲತಾಣದಲ್ಲಿ ಹುಡುಕಿ ಕೊಂಡು ಅಭ್ಯಾಸ ಮಾಡುತ್ತಾರೆ. ಆನ್‌ಲೈನ್ ಕೋಚಿಂಗ್ ಕೂಡ ಉತ್ತಮವಾದ ವೇದಿಕೆ. ಸಮಯ,ಹಣ ಉಳಿ ತಾಯವಾಗುತ್ತದೆ. ಬಹಳಷ್ಟು ಯುವಕರು ಆನ್‌ಲೈನ್ ಕೋಚಿಂಗ್ ತೆಗೆದುಕೊಂಡು ಐಎಎಸ್, ಕೆಎಎಸ್ ಪಾಸ್ ಆಗಿದ್ದಾರೆ.ಕೆಎಎಸ್ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಯಾವ ವಿಷಯ ಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಈ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು?ಪೂರ್ವಭಾವಿಯಲ್ಲಿ ಪೇಪರ್ ೧ ಮತ್ತು ೨ ಇರುತ್ತದೆ. ಪೇಪರ್ ೧ರಲ್ಲಿ ಜನರಲ್ ಸ್ಟಡಿ ಇನ್ನೂ ವಿಷಯಗಳನ್ನು ಒಳಗೊಂಡಿರುತ್ತದೆ. ಕರ್ನಾಟಕ ಸಂಬಂಧಿಸಿದ ವಿಷಯಗಳನ್ನು ಅತೀ ಹೆಚ್ಚು ಕೇಳುತ್ತಾರೆ. ಕರ್ನಾಟಕ ಇತಿಹಾಸ, ಭೋಗೊಳಶಾಸ್ತ್ರ ಬಗ್ಗೆ ಕೇಳುತ್ತಾರೆ. ರಾಜ್ಯ, ದೇಶ, ವಿದೇಶದ ಪ್ರಚಲಿತ ಘಟನೆ ಬಗ್ಗೆ ತಿಳಿದುಕೊಳ್ಳಬೇಕು. ಎನ್‌ಸಿಆರ್‌ಟಿ ಪುಸ್ತಕ, ಪತ್ರಿಕೆ, ಮ್ಯಾಗ್‌ಜಿನ್ ಓದಬೇಕು. ಪ್ರಸ್ತುತ ಇರುವ ಕೆಎಎಸ್ ಪರೀಕ್ಷೆಯ ಸಿಲೆಬೆಸ್ ತಿಳಿದುಕೊಳ್ಳಬೇಕು. ನಿಮಗೆ ಅನುಕೂಲವಾಗುವ ವಿಷಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಬೇಕು.ಪ್ರಚಲಿತ ವಿದ್ಯಮಾನಗಳ ಬಗ್ಗೆ ನವೀಕೃತವಾಗಿರುವುದು ಎಷ್ಟು ಮುಖ್ಯ, ಮತ್ತು ಅಭ್ಯರ್ಥಿಗಳು ಇತರ ಯಾವ ಕ್ಷೇತ್ರ ಗಳತ್ತ ಗಮನಹರಿಸಬೇಕು?ಪ್ರಚಲಿತ ವಿದ್ಯಮಾನಗಳ ಬಗ್ಗೆ ಅತೀ ಹೆಚ್ಚು ತಿಳಿದುಕೊಳ್ಳಬೇಕು. ಕೆಲವೊಂದನ್ನು ನೋಟ್ಸ್ ಮಾಡಿಕೊಳ್ಳಬೇಕು. ವಿಜ್ಞಾನ ತಂತ್ರಜ್ಞಾನ, ಕ್ರೀಡೆ, ರಾಜಕೀಯ, ಪ್ರಚಲಿತ ವಿದ್ಯಮಾನ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ದಿನಪತ್ರಿಕೆಯಲ್ಲಿ ಇರುತ್ತದೆ ಅದನ್ನು ಓದಬೇಕು. ಪ್ರಚಲಿತ ವಿದ್ಯಮಾನ ಬಗ್ಗೆ ಪ್ರಬಂಧ, ಪೂರ್ವಭಾವಿ, ಮುಖ್ಯ ಪರೀಕ್ಷೆನಲ್ಲಿ ಕೇಳುತ್ತಾರೆ.ಪೂರ್ವಭಾವಿ, ಮುಖ್ಯ ಪರೀಕ್ಷೆಯ ತಯಾರಿಯ ನಡುವೆ ಸಮಯವನ್ನು ಹೇಗೆ ವಿಂಗಡಿಸಿಕೊಳ್ಳಬೇಕು?ಕೆಲವರು ಮುಂಚಿತವಾಗಿ ಪೂರ್ವಭಾವಿಗೆ ತಯಾರಿ ಮಾಡಿಕೊಂಡಿರುತ್ತಾರೆ. ಕೆಲವರು ಮುಖ್ಯ ಪರೀಕ್ಷೆ ಫಲಿತಾಂಶ ಬರುವರೆಗೂ ಕಾಯುತ್ತಾರೆ. ಪೂರ್ವಭಾವಿ ಜೊತೆಗೆ ಮುಖ್ಯ ಪರೀಕ್ಷೆಗೆ ಅಭ್ಯಾಸ ಮಾಡಬೇಕು.ಸಂದರ್ಶನಕ್ಕೆ ಸಿದ್ಧತೆ ಹೇಗಿರಬೇಕು?ಕುಟುಂಬ ಹಿನ್ನೆಲೆ, ನಿಮ್ಮ ಪದವಿ, ಐಚ್ಛಿಕ ವಿಷಯ, ಪ್ರಸ್ತುತ ಯಾವ ಕೆಲಸ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಸಂದರ್ಶನ ಕೇಳುತ್ತಾರೆ. ಅವುಗಳ ಬಗ್ಗೆ ತಯಾರಿ ಮಾಡಿಕೊಂಡು ಹೋಗಬೇಕು. ನಾನು ೨ನೇ ಬಾರಿ ಸಂದರ್ಶನಕ್ಕೆ ಹೋದಾಗ ನಾನು ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇ. ಅದಕ್ಕೆ ಅದರ ಬಗ್ಗೆ ಅತೀ ಹೆಚ್ಚು ಕೇಳಿದರು. ಚೆನ್ನಾಗಿ ಓದಿಕೊಂಡು ಹೋಗಿರಬೇಕು. ಕೇಳಿದ ಪ್ರಶ್ನೆಗಳಿಗೆ ಆತ್ಮವಿಶ್ವಾಸದಿಂದ ಉತ್ತರ ಕೊಡಬೇಕು.ಸರ್ಕಾರಿ ನೌಕರಿ ಬೇಕು. ಆದರೆ ಮಕ್ಕಳನ್ನು ಪಾಲಕರು ಸರ್ಕಾರಿ ಶಾಲೆಗೆ ಸೇರಿಸಲ್ಲ. ಅಂತಹವರಿಗೆ ನಿಮ್ಮ ಸಲಹೆ ಏನು?ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಕೆಎಎಸ್ ಆಧಿಕಾರಿಯಾಗಿದ್ದಾನೆ. ಎಷ್ಟೂ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಯೇ ಓದಿ ಪಾಸ್ ಆಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮವಾದ ಜ್ಞಾನ ಹೊಂದಿದ ಶಿಕ್ಷಕರಿದ್ದಾರೆ. ಆದರೆ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಬೇಕೆಂದು ಮೈಂಡ್ ಸೆಟ್ ಇಟ್ಟುಕೊಂಡಿದ್ದಾರೆ. ಅದನ್ನು ಬದಲಿಸಿಕೊಳ್ಳಬೇಕು.ಕೆಎಎಸ್‌ನ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಬಗ್ಗೆ ತಿಳಿಸಿ?ಈಗ ಕೆಎಎಸ್ ಐಚ್ಛಿಕ ಆಯ್ಕೆ ಇಲ್ಲ ತೆಗೆಯಲಾಗಿದೆ. ಹಳೆ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ತೆಗೆಯಬೇಕು. ಟಿಸ್ಟ್ ಸಿರೀಜ್‌ಗೆ ಹಾಜರಾಗಬೇಕು.