ಸಾರಾಂಶ
ಹಾಸನ: ಶಿಲ್ಪಕಲೆಗಳ ತವರೂರಾದ ಹಾಸನ ಜಿಲ್ಲೆಗೆ ತನ್ನದೆಯಾದ ಹೆಸರಿದೆ. ಇಂತಹ ಜಿಲ್ಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿಚಾರಗಳ ಟ್ರೋಲ್ ಮಾಡಿದ ವಿಡಿಯೋ ಮತ್ತು ಸಂದೇಶವನ್ನು ರವಾನೆ ಮಾಡುವ ಮೂಲಕ ಹಾಸನಕ್ಕೆ ಕಳಂಕ ತರುವ ಕೆಲಸ ಮಾಡಲಾಗುತ್ತಿದ್ದು, ಕೂಡಲೇ ನಿಲ್ಲಿಸುವಂತೆ ಕನ್ನಡಪರ ಹೋರಾಟಗಾರ ಬಾಳ್ಳುಗೋಪಾಲ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಸಂಸದರ ಪೆನ್‌ಡ್ರೈವ್ ನಿಂದಾಗಿ ಹಾಸನದ ಹೆಣ್ಣು ಮಕ್ಕಳ ಬಗ್ಗೆ ತೇಜೋವಧೆ ಮಾಡುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಾಸನದ ಬಗ್ಗೆ ಕೆಟ್ಟದಾಗಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹಾಸನ ಜಿಲ್ಲೆಯ ಬಗ್ಗೆ ಅಪಪ್ರಚಾರ ಆಗುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಯಾರೋ ಒಬ್ಬರು ಮಾಡಿದ ತಪ್ಪಿನಿಂದ ಹಾಸನದ ಮಹಿಳೆಯರಿಗೆ ಮುಜುಗರವಾಗುತ್ತಿದೆ. ಮಕ್ಕಳ ಮನಸ್ಸಿನ ಮೇಲೆ ಕೂಡ ಪರಿಣಾಮ ಬೀರುತ್ತಿದ್ದು, ಹಾಸನದ ಹೆಣ್ಣು ಮಕ್ಕಳ ವೈವಾಹಿಕ ಜೀವನದ ಮೇಲೂ ಕೂಡ ದುಷ್ಪರಿಣಾಮ ಬೀರಲಿದೆ. ಇಂತಹ ಜಿಲ್ಲೆಯ ಬಗ್ಗೆ ಹಾಗೂ ಜಿಲ್ಲೆಯ ಹೆಣ್ಣು ಮಕ್ಕಳ ಬಗ್ಗೆ ಅಪಪ್ರಚಾರ ಮಾಡಿದರೆ ಮುಂದಿನ ದಿನಗಳಲ್ಲಿ ಅಂಥವರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದರು. ದಲಿತ ಮುಖಂಡ ನಾಗರಾಜ ಹೆತ್ತೂರು ಮಾತನಾಡಿ, ಹೆಣ್ಣು ಮಕ್ಕಳ ಬಗ್ಗೆ ಅಪಪ್ರಚಾರ ಮಾಡಿ ಹಾಸನದಲ್ಲಿ ಏನೋ ನಡೆಯುತ್ತಿದೆ ಎಂದು ಒಂದು ಕೆಟ್ಟ ಸುದ್ದಿಯನ್ನು ಹರಡಲಾಗುತ್ತಿದೆ. ಇಲ್ಲಿನ ಮಹಿಳೆಯರ ಬಗ್ಗೆ ಬಹಳ ಕೇವಲವಾಗಿ ಮಾತನಾಡುವ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ವಿಚಾರದಲ್ಲಿ ಸೂಕ್ಷ್ಮವಾಗಿ ಯೋಚಿಸಿ ಸಾಮಾನ್ಯ ಪ್ರಜೆಯಾಗಿ ಪ್ರಜ್ಞಾವಂತರಾಗಿ ಇನ್ನು ಮುಂದೆ ಯಾರು ಅಸಭ್ಯ ರೀತಿಯ ವಿಡಿಯೋ ಹಾಕುವುದು ಹಾಗೂ ಹಾಸನವನ್ನು ಟೀಕೆ ರೀತಿಯಲ್ಲಿ ರೀಲ್ಸ್ ಮಾಡುವುದನ್ನು ನಿಲ್ಲಿಸಬೇಕು ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಬೊಮ್ಮೇಗೌಡ ಮಾತನಾಡಿ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ ಇದ್ದರು.