ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾರದಾ ಪೂಜೆಕನ್ನಡಪ್ರಭವಾರ್ತೆ, ಬೀರೂರು

''''''''ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಕೀಳರಿಮೆ ಬೇಡ” ಎಂದು ನಿವೃತ್ತ ಶಿಕ್ಷಕಿ ಕೆ.ಎಸ್. ವಸಂತಮ್ಮ ಕರೆ ನೀಡಿದರು.ಬೀರೂರು ಪಟ್ಟಣದ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾರದಾ ಪೂಜೆಯಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳ ಶಿಕ್ಷಕರು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಕ್ಕಳು ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಜತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಬಿ.ಎನ್. ಪ್ರಸನ್ನ ಕುಮಾರ್, ಶಾಲೆಗಳಲ್ಲಿ ನಡೆಯುವ ಶಾರದಾ ಪೂಜೆ ಮಕ್ಕಳಲ್ಲಿ ಏಕಾಗ್ರತೆ, ಬೌದ್ಧಿಕ ಬೆಳವಣಿ ಗೆಗೆ ನೆರವಾಗಿದೆ. ಜಾತಿ- ಧರ್ಮಗಳ ಹೊರತಾಗಿ ಮಕ್ಕಳು ಸಾಮೂಹಿಕವಾಗಿ ಕಲೆತು ಎಲ್ಲರಿಗೂ ಒಳಿತಾಗುವಂತೆ ಬೇಡಿಕೊಳ್ಳುವುದು ಸ್ನೇಹಭಾವ ವೃದ್ಧಿಗೆ ಕಾರಣ ಎಂದರು.

ಇತ್ತೀಚೆಗೆ ನಿಧನರಾದ ಪತ್ರಕರ್ತ ಕೆ.ಎಸ್. ಸೋಮಶೇಖರ್ ಸ್ಮರಣಾರ್ಥ ಅವರ ಸಹೋದರ ಕೆ.ಎಸ್. ಪ್ರಸನ್ನಕುಮಾರ್ ಶಾಲೆಗೆ ಎರಡು ಕಂಪ್ಯೂಟರ್‌ ಗಳ ಕೊಡುಗೆ ನೀಡಿದ್ದನ್ನು ವಸಂತಮ್ಮ ಶಾಲೆ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.ಮುಖ್ಯಶಿಕ್ಷಕಿ ಅನಸೂಯಮ್ಮ, ದೈಹಿಕ ಶಿಕ್ಷಕ ಚಂದ್ರಶೇಖರ್, ಶಿವಮೂರ್ತಿ, ಆನಂದಪ್ಪ, ಶೇಖರಪ್ಪ ಹಾಗೂ ಎಸ್ಡಿಎಂಸಿ ಸದಸ್ಯರಾದ ಶ್ರೀಧರ್, ಶಬೀರ್, ಸೀಮಾ, ದೀಪಾ, ಮಂಜುಳಾ ಮತ್ತು ಪೂರ್ಣಿಮಾ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗುರುಪ್ರಸಾದ್ ಇದ್ದರು.20 ಬೀರೂರು 1ಬೀರೂರು ಪಟ್ಟಣದ ಪಿಎಂಶ್ರೀ ಶಾಲೆಯಲ್ಲಿ ನಡೆದ ಶಾರದಾ ಪೂಜೆಯಲ್ಲಿ ತಮ್ಮ ಸಹೋದರರು ಕೊಡುಗೆ ನೀಡಿದ ಕಂಪ್ಯೂಟರ್ ನ್ನು ನಿವೃತ್ತ ಶಿಕ್ಷಕಿ ವಸಂತಮ್ಮ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.