ವಿವಿ ಸಾಗರದ ಹೆಚ್ಚುವರಿ ನೀರಿಗೆ ಹಠ ಬೇಡ

| Published : Nov 02 2024, 01:18 AM IST

ಸಾರಾಂಶ

Don't worry about the excess water of VV Sagar

-ಜಿಲ್ಲೆಯ ರೈತ ಮುಖಂಡರಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಮನವಿ

-----

ಕನ್ನಡಪ್ರಭ ವಾರ್ತೆ ಹೊಸದುರ್ಗ ವಿವಿಸಾಗರದ ಹೆಚ್ಚುವರಿ ನೀರು ಕೋಡಿ ಮೂಲಕವೇ ಹರಿಯಲಿ ಎನ್ನುವ ಹಠಕ್ಕೆ ಬೀಳದೇ ಅಧಿಕಾರಿಗಳು ನೀಡುವ ತಾಂತ್ರಿಕ ಸಲಹೆ ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಸಹಕಾರ ನೀಡಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಜಿಲ್ಲೆಯ ರೈತ ಮುಖಂಡರಿಗೆ ಮನವಿ ಮಾಡಿದರು.

ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೈಸೂರಿನ ಮಹಾರಾಜರು ವಿವಿ ಸಾಗರ ನಿರ್ಮಿಸಿದರು. ತಾಲೂಕಿನ ರೈತರು 25 ಸಾವಿರ ಎಕರೆ ಫಲವತ್ತಾದ ಭೂಮಿಯನ್ನು ಉದಾರವಾಗಿ ನೀಡಿದರು. ಅಗ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಹಿರಿಯೂರು ತಾಲೂಕಿನ ಜನರು ಸದೃಢರಾಗಿದ್ದಾರೆ. ಹಿನ್ನಿರಿನ ಜನರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ವಿವಿ ಸಾಗರಕ್ಕೆ ಭದ್ರಾ ಜಲಾಶಯದಿಂದ ಪ್ರತಿವರ್ಷ ನೀರು ಹರಿದು ಬರುವುದರಿಂದ ಜಲಾಶಯ ಖಾಲಿಯಾಗುವುದಿಲ್ಲ. ಹಾಗಾಗಿ, ಸಾಮರ್ಥ್ಯ ಮೀರಿ ಜಲಾಶಯ ತುಂಬಿಸುವ ಹಠ ಬೇಡ. ವಿವಿಸಾಗರ ನಾಡಿನ ಆಸ್ತಿ. ಅದನ್ನು ಎಲ್ಲರೂ ಸಮರ್ಥವಾಗಿ ಬಳಸಿಕೊಳ್ಳಬೇಕು. ಸಂಕಷ್ಠದಲ್ಲಿರುವ ರೈತರ ಹಿತಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕನ್ನಡ ಭಾಷೆ, ನೆಲ ಜಲದ ವಿಚಾರವನ್ನು ತಿಳಿಸುವ ಕೆಲಸ ಆಗಬೇಕು. ಭವಿಷ್ಯದ ಮಕ್ಕಳಿಗೆ ನಾಡಿನ ಕಲೆ, ಸಂಸ್ಕೃತಿ, ಇತಿಹಾಸ ಎಲ್ಲವನ್ನು ತಿಳಿಸಬೇಕು. ಗಡಿ ಭಾಗದ ರಾಜ್ಯಗಳ ಜೊತೆಗೆ ಹರಿದು ಹಂಚಿ ಹೋಗಿದ್ದ ಮೈಸೂರು ರಾಜ್ಯವನ್ನು ದೇವರಾಜ್ ಅರಸು ಅವರ ಕಾಲದಲ್ಲಿ ಅಖಂಡ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಎಂದರು.

ಎಸ್. ನಿಜಲಿಂಗಪ್ಪ ಅವರು ಮುಖ್ಯ ಮಂತ್ರಿಗಳಾಗಿದ್ದ ವೇಳೆ ಕರ್ನಾಟಕ ಏಕಿಕರಣಕ್ಕೆ ಶ್ರಮವಹಿಸಿದ್ದಾರೆ. ರಾಜ್ಯದಲ್ಲಿ ನೆಲ ಜಲ ಸಂಪತ್ತು ವಿವಾದ ಇದ್ದರೂ ಹಂತ ಹಂತವಾಗಿ ಇತ್ಯರ್ಥಗೊಳಿಸಿಕೊಂಡು ಬಂದಿದ್ದೇವೆ. ನಾಡಿನ ಸಂಪತ್ತನ್ನು ಉಳಿಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ತಿರುಪತಿ ಪಾಟೀಲ್‌ ಧ್ವಜಾರೋಹಣ ಮಾಡಿದರು. ವೇದಿಕೆಯಲ್ಲಿ ತಾಪಂ ಇಒ ಸುನಿಲ್‌ಕುಮಾರ್‌, ಬಿಇಒ ಸಯ್ಯದ್‌ ಮೋಸೀನ್‌, ಪಿಐ ಮಧು, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಪುರಸಭಾ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಗೀತಾ, ಪುರಸಭೆ ಸದಸ್ಯರು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಆಧಿಕಾರಿಗಳು, ಮುಖಂಡರು ಹಾಗೂ ಶಾಲಾ ಕಾಲೇಜು ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕನ್ನಡಾಂಬೆಯ ಭಾವಚಿತ್ರವನ್ನು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಕನ್ನಡ ನೆಲ, ಜಲ ಹಾಗೂ ದೇಶ ಪ್ರೇಮಕ್ಕೆ ಸಂಭಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಇಎ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

........ಬಾಕ್ಸ್‌.......

ಮಕ್ಕಳು, ಪೋಷಕರಿಗೆ ಬೇಸರ

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರತಿವರ್ಷ ತಾಲೂಕು ಆಡಳಿತದಿಂದ ಸನ್ಮಾನಿಸಲಾಗುತಿತ್ತು. ಆದರೆ, ಈ ಸಾಲಿನಲ್ಲಿ ನೂರು ಅಂಕ ಪಡೆದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಸನ್ಮಾನಿಸಲಿಲ್ಲ. ಇದು ಮಕ್ಕಳು ಹಾಗೂ ಪೋಷಕರಿಗೆ ಬೇಸರ ಮೂಡಿಸಿತು.

------

ಪೋಟೋ, 1ಎಚ್‌ಎಸ್‌ಡಿ1: ಹೊಸದುರ್ಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.