ಸಾರಾಂಶ
ಸಮಾಜದಲ್ಲಿ ಬಡವ, ಶ್ರೀಮಂತ ಎನ್ನುವುದಕ್ಕಿಂತ ದಾನ ಮಾಡುವ ಕೈಗಳು ಸರ್ವ ಶ್ರೇಷ್ಠ. ನಾವು ದುಡಿಯುವ ಹಣದಲ್ಲಿ ಸಮಾಜ ಸೇವೆಗೆ ಮೀಸಲಿಡಬೇಕೆಂದು ಸಮಾಜದ ಧರ್ಮಗುರು ಖಾದರಸಾಬ ಮುಲ್ಲಾ ಹೇಳಿದರು.
ಡಂಬಳ: ಸಮಾಜದಲ್ಲಿ ಬಡವ, ಶ್ರೀಮಂತ ಎನ್ನುವುದಕ್ಕಿಂತ ದಾನ ಮಾಡುವ ಕೈಗಳು ಸರ್ವ ಶ್ರೇಷ್ಠ. ನಾವು ದುಡಿಯುವ ಹಣದಲ್ಲಿ ಸಮಾಜ ಸೇವೆಗೆ ಮೀಸಲಿಡಬೇಕೆಂದು ಸಮಾಜದ ಧರ್ಮಗುರು ಖಾದರಸಾಬ ಮುಲ್ಲಾ ಹೇಳಿದರು.
ಡಂಬಳ ಗ್ರಾಮದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಅವರು, ಎಲ್ಲರೂ ಒಗ್ಗಟ್ಟಾಗಿ ಇದ್ದು ಎಲ್ಲರ ಜೊತೆ ಸಹಕಾರ, ಸಹಬಾಳ್ವೆಯಿಂದ ಜೀವನವನ್ನು ನಡೆಸಬೇಕು. ಮಹಮ್ಮದ್ ಪೈಗಂಬರ್ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ನಾವು ದುಡಿಯುವ ಹಣದಲ್ಲಿ ಸಮಾಜದ ಸೇವೆಗೆ ಮೀಸಲಿಡಬೇಕು. ಈ ವರ್ಷದ ಉತ್ತಮ ಮಳೆಯಾಗಿ ಮುಂಗಾರಿ ಮತ್ತು ಹಿಂಗಾರಿ ಬೆಳೆಗಳು ಉತ್ತಮವಾಗಿ ಬೆಳೆದು ರೈತರ ಬದುಕು ಸಂತೋಷದಾಯಕವಾಗಿರಲಿ ಎಂದು ಹೇಳಿದರು.ವಿವಿಧೆಡೆ ಆಚರಣೆ: ದಾನ, ಧರ್ಮದ ಮಹತ್ವ ಸಾರುವ ಬಕ್ರೀದ್ ಹಬ್ಬವನ್ನು ಡಂಬಳ ಗ್ರಾಮ ಸೇರಿದಂತೆ ಹಿರೇವಡ್ಡಟ್ಟಿ, ಪೇಠಾ ಆಲೂರ, ಹಳ್ಳಿಕೇರಿ, ಮೇವುಂಡಿ, ಡೋಣಿ, ಕದಾಂಪುರ, ಯಕ್ಲಾಸಪೂರ, ಬರದೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪ್ರಮುಖರು ಹಾಗೂ ಬಂಧುಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಸಮಾಜದ ಪ್ರಮುಖರಾದ ಅಂಜುಮನ್ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ, ಕಾರ್ಯದರ್ಶಿ ಖಾಜಾಹುಸೇನ ಹೊಸಪೇಟಿ, ಹುಸೇನಸಾಬ ಹೊಸಬಾವಿ, ರಾಯಸಾಬ ಕಾಸ್ತಾರ, ಬಾಬುಸಾಬ ಮೂಲಿಮನಿ, ಮಹಮ್ಮದರಪೀಕಸಾಬ ಹೋಸಪೇಟಿ, ಜಂದಿಸಾಬ ಸರಕಾವಾಸ, ಜಾಕೀರ ಮೂಲಿಮನಿ, ಬಾಬುಸಾಬ ಸರಕಾವಾಸ, ಹುಸೇನಸಾಬ ದೊಡ್ಡಮನಿ, ಶಫೀಕ ಮೂಲಿಮನಿ, ಬುಡ್ನೇಸಾಬ ಅತ್ತಾರ, ಚಾಂದಬಾಸಾ ಸರಕಾವಾಸ, ಮುರ್ತುಜಾ ಮನಿಯಾರ,ಎಮ್.ಆರ್.ಆಲೂರ, ನೂರಹಮ್ಮದ ಸರಕಾವಾಸ, ರಜಾಕಸಾಬ ತಾಂಬೋಟಿ, ರಫೀಕ ಮನಿಯಾರ, ಡಿ.ಡಿ. ಸೊರಟೂರ, ಪೇರೋಜಖಾನ ಹೋಸಪೇಟಿ, ಗೌಸುಸಾಬ ಹೊಸಪೇಟಿ, ಹಿರಿಯರು, ಯುವಕರು ಇದ್ದರು.