ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ಹಸಿವು ತಡೆಯಬಹುದು, ಆದರೆ ನೀರಿನ ದಾಹ ಯಾರಿಂದಲೂ ತಡೆಯಲು ಆಗಲ್ಲ. ಇಂತಹ ಅಮೂಲ್ಯ ನೀರು ಒದಗಿಸುವ ಮೂಲಕ ಇಳಕಲ್ಲ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ರಿಯಾಜ್‌ ಮಕಾಂನದಾರ ಮಾಡುತ್ತಿರುವ ಸೇವೆ ಮಹಾನ್ ಕಾರ್ಯ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ಇಳಕಲ್ಲ ನಗರದ ಬಸ್ ನಿಲ್ದಾಣದಲ್ಲಿ ರಿಯಾಜ್‌ ಮಕಾನದಾರ ಕುಟುಂಬದವರು ಪ್ರಾರಂಭಿಸಿದ ಪ್ರಯಾಣಿಕರಿಗಾಗಿ ತಣ್ಣನೆಯ ಉಚಿತ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟಿಸಿ ಮಾತನಾಡಿ, ಇಂತಹ ಉರಿ ಬಿಸಲಿನ ತಾಪದಲ್ಲಿ ಪ್ರಯಾಣಿಕರು ಕುಡಿಯುವ ನೀರಿಗಾಗಿ ತೊಂದರೆ ಪಡುತ್ತಿರುತ್ತಾರೆ. ಅವರ ತೊಂದರೆ ಕಂಡು ರಿಯಾಜ್‌ ತಣ್ಣನೆಯ ಕುಡಿಯುವ ನೀರಿನ ಅರವಟ್ಟಿಗೆ ಪ್ರಾರಂಭಿಸಿರುವುದು ಪುಣ್ಯದ ಕೆಲಸ. ೧೦ ವರ್ಷಗಳಿಂದ ಈ ತಂಪಾದ ಕುಡಿಯವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು. ಸಮಾರಂಭದಲ್ಲಿ ಹಿರಿಯರಾದ ಶರಣಪ್ಪ ಆಮದಿಹಾಳ, ಅಂಬು ಚಲವಾದಿ, ಅಶೋಕ ಚಲವಾದಿ, ಯಲ್ಲಪ್ಪ ರಾಜಾಪೂರ, ಅಹ್ಮದ ಬಾಗವಾನ, ಮಹಮ್ಮದ ಗಡೇದ, ಮಹಮ್ಮದ ಮಕಾಂದಾರ ಇತರರು ಉಪಸ್ಥಿತರಿದ್ದರು.