ಕೊಡಗರಹಳ್ಳಿ ನಾಡುಪ್ರೌಢಶಾಲೆಗೆ ದೇಣಿಗೆ ಹಸ್ತಾಂತರ

| Published : Nov 24 2024, 01:51 AM IST

ಸಾರಾಂಶ

ವಿದ್ಯಾಭ್ಯಾಸದಲ್ಲಿ ಶೇ. 100 ಅಂಕಗಳನ್ನು ಗಳಿಸುವ ಜೊತೆಗೆ ಜೀವನದಲ್ಲೂ ಶೇ. 100 ಸಾಧನೆ ಮಾಡಿ ಗೆಲ್ಲಬೇಕು ಎಂದು ಹರಪಳ್ಳಿ ರವೀಂದ್ರ ಹೇಳಿದರು.

ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಜೀವನದಲ್ಲಿ ಏನೇ ಕಷ್ಟ ನಷ್ಟಗಳು ಸವಾಲುಗಳು ಎದುರಾದರೂ ಹೆದರಬಾರದು ಧೈರ್ಯದಿಂದ ಎದುರಿಸಿ ಮುನ್ನಗಬೇಕು. ವಿದ್ಯಾಭ್ಯಾಸದಲ್ಲಿ ಶೇ.100 ಅಂಕಗಳನ್ನು ಗಳಿಸುವ ಜೊತೆಗೆ ಜೀವನದಲ್ಲೂ ಶೇ.100 ರಷ್ಟು ಸಾಧನೆ ಮಾಡಿ ಗೆಲ್ಲಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ಕೊಡಗು ಪ್ರತಿನಿಧಿ ಮತ್ತು ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶನಿವಾರ ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲಾಭಿವೃದ್ಧಿಗಾಗಿ 3 ಲಕ್ಷ ರುಪಾಯಿ ದೇಣಿಗೆ ನೀಡಿ ಅವರು ಮಾತನಾಡಿದರು.

ಶಾಲಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಸುರೇಶ್ ಚಂಗಪ್ಪ, ಮಾಜಿ ಸೈನಿಕ ಪಿ.ಎಸ್. ಲಕ್ಷ್ಮೀನಾರಾಯಣ ಮಾತನಾಡಿದರು. ಖಾಸಿಂ, ಬಸಪ್ಪ, ಶಾಲಾ ಮುಖ್ಯ ಶಿಕ್ಷಕಿ ಕೆ.ಎಸ್. ಇಂದಿರಾ ಹಾಗೂ ಶಾಲಾ ಶಿಕ್ಷಕ ವೃಂದದವರು ಇದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಕೆ.ಎಸ್. ಇಂದಿರಾ ಸ್ವಾಗತಿಸಿದರು. ಸಹಶಿಕ್ಷಕ ಗುರ್ಕಿ ನಿರೂಪಿಸಿ, ವಂದಿಸಿದರು.