ಹೊಸದುರ್ಗ ಕನಕಗುರು ಪೀಠದ ಅಭಿವೃದ್ಧಿಗಾಗಿ 40 ₹ಲಕ್ಷ ದೇಣಿಗೆ

| Published : Feb 08 2024, 01:39 AM IST

ಹೊಸದುರ್ಗ ಕನಕಗುರು ಪೀಠದ ಅಭಿವೃದ್ಧಿಗಾಗಿ 40 ₹ಲಕ್ಷ ದೇಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ತಾಲೂಕು ಮತ್ತಿ ಗ್ರಾಮದಲ್ಲಿ ಶ್ರೀ ಈಶ್ವರಾನಂದಪುರಿ ಸ್ವಾಮಿಗಳ 100 ದಿನ ಸಾವಿರ ಹಳ್ಳಿ ಒಂದು ಗುರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕನಕ ನೌಕರರ ಬಳಗದ ಪದಾಧಿಕಾರಿಗಳು ಗೌರವ ಸ್ವೀಕರಿಸಿ ಭಕ್ತರ ದೇಣಿಗೆ ಸಹಕಾರಕ್ಕೆ ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕುರುಬ ಸಮಾಜದ ಭಕ್ತರು ಒಟ್ಟು 40 ಲಕ್ಷ ರು. ದೇಣಿಗೆಯನ್ನು ನೀಡಿ, ಶ್ರೀ ಮಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಸಹಕಾರ ನೀಡಿದ್ದು ನನಗೆ ಸಂತಸವಾಗಿದೆ ಎಂದು ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು.ದಾವಣಗೆರೆ ತಾಲೂಕಿನ ಮತ್ತಿ ಗ್ರಾಮದಲ್ಲಿ ಕನಕಗುರು ಪೀಠ ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ಸಾರಥ್ಯದಲ್ಲಿ ನಡೆದ ‘100 ದಿನ ಸಾವಿರ ಹಳ್ಳಿ ಒಂದು ಗುರಿ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.

ದಾವಣಗೆರೆ ತಾಲೂಕಿನಲ್ಲಿ ಕಳೆದ 8 ದಿನಗಳಿಂದ ಪ್ರವಾಸ ಕೈಗೊಳ್ಳಲಾಗಿತ್ತು. ಕುರುಬ ಸಮಾಜ ಬಾಂಧವರು ಇರುವ ತಾಲೂಕಿನ 35 ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸಂಭ್ರಮದಿಂದ ಬರಮಾಡಿಕೊಂಡು ಉದಾರವಾಗಿ ದೇಣಿಗೆ ನೀಡಿದ್ದು, ಒಟ್ಟು 40 ಲಕ್ಷ ರೂ. ಸಂಗ್ರಹವಾಗಿರುತ್ತದೆ. ಈ ಹಣವನ್ನು ಹೊಸದುರ್ಗ ಶಾಖಾ ಮಠದಲ್ಲಿ ನಡೆಯುತ್ತಿ ರುವ ಶಾಲಾ ಕಾಲೇಜು ಕಟ್ಟಡ, ಹಾಸ್ಟೆಲ್ ಕಟ್ಟಡ ಮತ್ತು ವಿಶ್ವದ ಅತ್ಯಂತ ಎತ್ತರವಾದ ಕನಕದಾಸ ಏಕಶಿಲಾ ಮೂರ್ತಿಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಳಸಿ ಕೊಂಡು ಶೀಘ್ರದಲ್ಲೇ ಲೋಕಾರ್ಪಣೆ ಮಾಡುವುದಾಗಿ ಶ್ರೀಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕನಕ ನೌಕರರ ಬಳಗದ ಪದಾಧಿಕಾರಿಗಳು ಗೌರವ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರು ಗಳಾದ ಜಿ.ಸಿ.ನಿಂಗಪ್ಪ, ಬಿ.ಎಂ.ಸತೀಶ್, ಮಾಯಕೊಂಡ ಮಲ್ಲಿಕಾರ್ಜುನಪ್ಪ, ಅಣಬೇರು ಶಿವಮೂರ್ತಿ, ಸಿ.ಡಿ.ಮಹೇಂದ್ರ, ಕರೇಕಟ್ಟೆ ಶಿವರುದ್ರಪ್ಪ, ಮತ್ತಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜಪ್ಪ, ಶಿಕ್ಷಕ ಶಂಕರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.