ಸಾರಾಂಶ
ರಾಯಚೂರು: ಐದಾರು ಕಿಮೀ ದೂರದ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ನಿತ್ಯ ಸಂಕಷ್ಟವನ್ನು ಕಣ್ಣಾರ ಕಂಡ ಯುವಕ ತಾನು-ಕೂಲಿನಾಲಿ ಮಾಡಿ ಗಳಿಸಿದ ಹಣದಲ್ಲಿ ಸೈಕಲ್‌ಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸುವುದರ ಮುಖಾಂತರ ಮೇಲಿನ ಅಕ್ಷರಗಳಿಗೆ ಜೀವ ತುಂಬುವ ಕಾರ್ಯವನ್ನು ಮಾಡಿ ತೋರಿಸಿದ್ದಾರೆ.
ಹೌದು, ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಕೊತ್ತದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಕಂದಿನ್ನಿ ಗ್ರಾಮದ, ಚಾಲಕ ವೃತ್ತಯ ಜೊತೆಗೆ ಕೂಲಿ ಕೆಲಸ ಮಾಡುವ ಆಂಜನೇಯ್ಯ ಯಾದವ್ ಎನ್ನುವ 24 ವರ್ಷದ ಯುವಕ ತಾನು ದುಡಿದು ಕೂಡಿಟ್ಟ ಹಣದಲ್ಲಿ 60 ಸಾವಿರ ರು. ಖರ್ಚು ಮಾಡಿ ಸೈಕಲ್ ಖರೀದಿಸಿ, 11 ಜನ ವಿದ್ಯಾರ್ಥಿಗಳಿಗೆ ವಿತರಿಸುವುದ ಮುಖಾಂತರ ಅಪರೂಪದ ಶಿಕ್ಷಣ ಸೇವೆಯನ್ನು ಮಾಡಿದ್ದು ಅವರ ಈ ಅಳಿಲು ಸೇವೆಯು ಇದ್ದವರು ಹಾಗೂ ಇಲ್ಲದವರಿಗೆ ಪ್ರೇರಣೆ ಮಾತ್ರವಲ್ಲದೇ ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಇತರರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಜಾಗೃತಿ ಗೊಳಿಸುವಂತೆ ಮಾಡಿದೆ.ಮಾದರಿ ಕಾರ್ಯಕ್ಕೆ ಮೆಚ್ಚುಗೆ: ಆಂಜನೇಯ್ಯ ಯಾದವ್ ಅವರ ಗ್ರಾಮವಾದ ಮಲ್ಕಂದಿನ್ನಿಯಲ್ಲಿನ 11 ಜನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರತಿದಿನ ಐದಾರು ಕಿಮೀ ನಡೆದು ಹೇಮನೂರು ಸರ್ಕಾರಿ ಪ್ರೌಢ ಶಾಲೆಗೆ ಹೋಗುತ್ತಿದ್ದರು, ವಿದ್ಯಾರ್ಥಿಗಳ ಈ ಸಮಸ್ಯೆಯನ್ನು ಕಣ್ಣಾರೆ ಕಂಡ ಆಂಜನೇಯ್ಯ ಯಾದವ್ ಅವರಿಗೆ ಏನಾದರು ಮಾಡಬೇಕು ಎನ್ನುವ ಉದ್ದೇಶದಿಂದ ತಾವು ಕೂಲಿ-ನಾಲಿ ಮಾಡಿ ಕೂಡಿಟ್ಟ ಹಣದಲ್ಲಿ 60 ಸಾವಿರ ರು. ವೇಯಿಸಿ ಸೈಕಲ್ ಗಳನ್ನು ಖರೀದಿಸಿ ಶಾಲೆಗೆ ನೀಡಿ ಮುಗು, ಶಿಕ್ಷಕರು, ಗ್ರಾಮಸ್ಥರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ಗಳನ್ನು ವಿತರಿಸಿ ಮಾನವೀಯತೆಯನ್ನು ಮರೆಯುವುದರ ಜೊತೆಗೆ ಇತರರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ. ಚಾಲಕ ವೃತ್ತಿಯ ಜೊತೆಗೆ ಕೂಲಿ ಕೆಲಸ ಸಂಗ್ರಹಿಸಿದ ಹಣವನ್ನು ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಖರ್ಚು ಮಾಡಿ ಉದಾರತೆಯನ್ನು ತೋರಿದ ಆಂಜನೇಯ್ಯ ಅವರ ಮಾದರಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.