ಸಾರಾಂಶ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಬಸವಾಪಟ್ಟಣ ಗ್ರಾಮದ ಕೆ.ಪಿ.ಎಸ್ ಶಾಲೆಗೆ ಹತ್ತು ಡೆಸ್ಕ್ ಮತ್ತು ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಿದೆ. ಡೆಸ್ಕ್ ಮತ್ತು ಬೆಂಚ್‌ಗಳನ್ನು ನೀಡಿದ ಗ್ರಾಮಾಭಿವೃದ್ಧಿ ಸಂಘದ ಕಾರ್ಯ ಶ್ಲಾಘನೀಯ ಎಂದು ಕೆ.ಪಿ.ಎಸ್ ಶಾಲೆಯ ಉಪಪ್ರಾಂಶುಪಾಲರಾದ ಚಂದ್ರಪ್ಪ ಕರಿ ಭೀಮಣ್ಣರವರು ತಿಳಿಸಿದ್ದಾರೆ. ಸರ್ಕಾರದ ಅನುದಾನದ ಜೊತೆಗೆ ಇಂತಹ ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಇದರಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಬಸವಾಪಟ್ಟಣ ಗ್ರಾಮದ ಕೆ.ಪಿ.ಎಸ್ ಶಾಲೆಗೆ ಹತ್ತು ಡೆಸ್ಕ್ ಮತ್ತು ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಿದೆ. ಡೆಸ್ಕ್ ಮತ್ತು ಬೆಂಚ್‌ಗಳನ್ನು ನೀಡಿದ ಗ್ರಾಮಾಭಿವೃದ್ಧಿ ಸಂಘದ ಕಾರ್ಯ ಶ್ಲಾಘನೀಯ ಎಂದು ಕೆ.ಪಿ.ಎಸ್ ಶಾಲೆಯ ಉಪಪ್ರಾಂಶುಪಾಲರಾದ ಚಂದ್ರಪ್ಪ ಕರಿ ಭೀಮಣ್ಣರವರು ತಿಳಿಸಿದ್ದಾರೆ.ಬಸವಾಪಟ್ಟಣ ಗ್ರಾಮವು ಶೈಕ್ಷಣಿಕವಾಗಿ ಬಹಳ ಉತ್ತಮ ಸ್ಥಾನದಲ್ಲಿದೆ ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ನೆರವನ್ನು ನೀಡಲು ಮುಂದಾಗುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವನ್ನು ಕೋರಿದರು. ಸರ್ಕಾರದ ಅನುದಾನದ ಜೊತೆಗೆ ಇಂತಹ ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಇದರಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಹಿರಿಯ ಶಿಕ್ಷಕರಾದ ಎಸ್.ಬಿ ಚಿದಾನಂದ ಮಾತನಾಡಿ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೂಲಕ ರಾಜ್ಯಾದ್ಯಂತ ಅನೇಕ ಧಾರ್ಮಿಕ ಸೇವಾಕಾರ್ಯಗಳನ್ನು ನಿರ್ವಹಿಸುತ್ತಿದ್ದು ಇದರ ಜೊತೆಗೆ ಸಂಘವು ಅರೋಗ್ಯ ಶಿಕ್ಷಣ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಯಾವುದೇ ಕಾರ್ಯಗಳು ಯಶ್ವಸಿಯಾಗಲು ಧೈರ್ಯ, ಗುರಿ, ನಂಬಿಕೆಗಳು ಮುಖ್ಯ ಎಂದು ತಿಳಿಸಿದರು.ಇದೇ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ಸಂಯೋಜಕ ಮಂಜುಳಾ, ಬಸವಾಪಟ್ಟಣ ಧರ್ಮಸ್ಥಳ ಸಂಘದ ಸೇವಾಪ್ರತಿನಿಧಿ ಪುಷ್ಪಲತಾ, ಹಿರಿಯ ಶಿಕ್ಷಕರಾದ ಪೊನ್ನಪ್ಪ, ಕೆಪಿಎಸ್ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಆರ್ ರಮೇಶ್, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.