ಸಾರಾಂಶ
ಚಿತ್ರದುರ್ಗ: ಜೆಎನ್ 1 ಆತಂಕ ಬೇಡ, ಮುಂಜಾಗ್ರತೆ ಇರಲಿ. ಅರ್ಹರು ಮುಂಜಾಗ್ರತಾ ಲಸಿಕೆ ಪಡೆಯಿರಿ. ಸಾರ್ವಜನಿಕರಿಗೆ ಅನುಕೂಲವಾಗಲೆಂದು ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ-23ರಲ್ಲಿ ಲಸಿಕಾ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಕೊರ್ಬಿಬ್ಯಾಕ್ಸ್ ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರೋಗ್ಯ ಇಲಾಖೆಯ ಸೇವಾ ನೌಕರರಿಗೆ ಸಹವರ್ತಿ ಕಾಯಿಲೆಗಳನ್ನು ಹೊಂದಿರುವವರಿಗೆ ಈಗಾಗಲೇ ಬೂಸ್ಟರ್ ಡೋಸ್ ಪಡೆದು 26 ವಾರಗಳನ್ನು ಸಂಪೂರ್ಣಗೊಳಿಸಿದವರಿಗೆ ಮುನ್ನೆಚ್ಚರಕೆ ಡೋಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಗತ್ಯ ದಾಖಲಾತಿಗಳನ್ನು ತಂದು, ಈ ಹಿಂದೆ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಯಾವುದೇ ಲಸಿಕೆ ಪಡೆದಿದ್ದರು ಸಹ ಕೊರ್ಬಿವ್ಯಾಕ್ಸ್ ಲಸಿಕೆ ಪಡೆಯಬಹುದಾಗಿದೆ ಯಾವುದೇ ತೊಂದರೆ ಆಗೋದಿಲ್ಲ ಎಂದರು.ಕೋವಿಡ್‌ಗೆ ಸರಿ ಹೊಂದುವಂತಹ ಅಭ್ಯಾಸಗಳನ್ನು ಅಂದರೆ ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಸ್ಯಾನಿಟೈಸರ್ ಉಪಯೋಗಿಸಿ ಸ್ವಚ್ಛಗೊಳಿಸಿಕೊಳ್ಳುವುದು. ಶಿತ, ಕೆಮ್ಮು ಲಕ್ಷಣಗಳು ಕಂಡುಬಂದಲ್ಲಿ ಕೋವಿಡ್ ತಪಾಸಣೆ ಮಾಡಿಸಿಕೊಳ್ಳುವುದು. ಸರ್ಕಾರದ ಮಾರ್ಗದರ್ಶನದಂತೆ ನಿಯಮಗಳನ್ನು ಪಾಲಿಸುವುದು ಎಂದರು.
ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ ಮಾತನಾಡಿ, ನಾವಿರುವಲ್ಲಿಯೇ ಬಂದು ಲಸಿಕೆ ನೀಡುತ್ತಿರುವುದು ಪ್ರಸಂಶನೀಯ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಪ್ಪದೇ ಲಸಿಕೆಯನ್ನು ಪಡೆದುಕೊಳ್ಳಿ. ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಧಾರಣೆ ನಿಯಮ ಪಾಲಿಸಿ ಎಂದರು.ಪಿ.ಎಲ್.ಸುರೇಶ್ ರಾಜ್, ಅಜಯ ಕುಮಾರ, ಮೋಹನ್ ಕುಮಾರ್ ಗುಪ್ತ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ, ಗಂಗಾಧರರೆಡ್ಡಿ, ಗೋಪಾಲಕೃಷ್ಣ, ಶಶಾಂಕ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಮಂಜುಳಾ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 60 ಜನರಿಗೆ ಬೂಸ್ಟರ್ ಲಸಿಕಾ ವ್ಯವಸ್ಥೆ ಕಲ್ಪಿಸಲಾಯಿತು.