ಸಾರಾಂಶ
ಹೆಣ್ಣುಮಕ್ಕಳನ್ನು ಆದಷ್ಟು ಬೇಗ ಮದುವೆ ಎಂಬ ಬಂಧನಕ್ಕೆ ದೂಡುವುದರ ಬದಲು ಅವರಿಗೆ ಸರಿಯಾದ ಉನ್ನತ ಶಿಕ್ಷಣ ಕೊಡಿಸಬೇಕು ಹಾಗೂ ಹೆಣ್ಣುಮಕ್ಕಳ ಜೀವನಕ್ಕೆ ದಾರಿ ಕಲ್ಪಿಸಿದಂತಾಗುತ್ತದೆ. ನಮ್ಮ ಕಾಲೇಜಿನಲ್ಲಿ ಎಲ್ಲಾ ವಿಧವಾದ ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಅವಕಾಶವಿದ್ದು ಉಪನ್ಯಾಸಕರ ವರ್ಗವೂ ಸಹ ಸದಾ ವಿದ್ಯಾರ್ಥಿಗಳ ಶ್ರೇಯೋಬಿವೃದ್ಧಿಗೆ ಶ್ರಮಿಸುತ್ತಿದ್ದು ವಿದ್ಯಾರ್ಥಿಗಳು ಸಹ ತಂದೆ ತಾಯಿಗಳ ಶೈಕ್ಷಣಿಕ ಆಸೆಗಳನ್ನು ಪೂರೈಸಲು ಮುಂದಾಗುವಂತೆ ತಿಳಿಸಿದರು.
ಬಸವಾಪಟ್ಟಣ: ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ತಾತ್ಸಾರ ಭಾವನೆ ತೋರಬಾರದೆಂದು ಬಸವಾಪಟಣ್ಣ ಕೆ.ಪಿ.ಎಸ್ ಶಾಲೆಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಹರೀಶ್‌ರವರು ತಿಳಿಸಿದ್ದಾರೆ.
ಮಕ್ಕಳ ದಿನಾಚರಣೆ ಮತ್ತು ಪೋಷಕರ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆ.ಪಿ.ಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಹರೀಶ್, ಹೆಣ್ಣುಮಕ್ಕಳನ್ನು ಆದಷ್ಟು ಬೇಗ ಮದುವೆ ಎಂಬ ಬಂಧನಕ್ಕೆ ದೂಡುವುದರ ಬದಲು ಅವರಿಗೆ ಸರಿಯಾದ ಉನ್ನತ ಶಿಕ್ಷಣ ಕೊಡಿಸಬೇಕು ಹಾಗೂ ಹೆಣ್ಣುಮಕ್ಕಳ ಜೀವನಕ್ಕೆ ದಾರಿ ಕಲ್ಪಿಸಿದಂತಾಗುತ್ತದೆ. ನಮ್ಮ ಕಾಲೇಜಿನಲ್ಲಿ ಎಲ್ಲಾ ವಿಧವಾದ ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಅವಕಾಶವಿದ್ದು ಉಪನ್ಯಾಸಕರ ವರ್ಗವೂ ಸಹ ಸದಾ ವಿದ್ಯಾರ್ಥಿಗಳ ಶ್ರೇಯೋಬಿವೃದ್ಧಿಗೆ ಶ್ರಮಿಸುತ್ತಿದ್ದು ವಿದ್ಯಾರ್ಥಿಗಳು ಸಹ ತಂದೆ ತಾಯಿಗಳ ಶೈಕ್ಷಣಿಕ ಆಸೆಗಳನ್ನುಪೂರೈಸಲು ಮುಂದಾಗುವತೆ ತಿಳಿಸಿದರು. ಇದೇ ವೇಳೆ ಗ್ರಾಮದ ಲಕ್ಮಮ್ಮ ಎಂಬ ಸುಮಾರು 104 ವರ್ಷ ಹಿರಿಯ ಮಹಿಳೆಯನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಉಪನ್ಯಾಸಕ ವರ್ಗ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
;Resize=(128,128))
;Resize=(128,128))